ಕರಾವಳಿ

23 ಸಾವಿರ ಮೀನುಗಾರರ 60 ಕೋಟಿ ರೂ. ಸಾಲ ಮನ್ನಾ: ಸಚಿವ ಕೋಟ

Pinterest LinkedIn Tumblr

ಉಡುಪಿ: ರಾಜ್ಯ ಸರಕಾರ ಘೋಷಣೆ ಮಾಡಿದ ಮೀನುಗಾರರ ಸಾಲಮನ್ನಾ ಯೋಜನೆಯಡಿ 23 ಸಾವಿರ ಜನ ಫಲಾನುಭವಿಗಳಿಗೆ 60 ಕೋಟಿ ರೂ.ವನ್ನು ರಾಜ್ಯ ಹಣಕಾಸು ಇಲಾಖೆ ಅಧಿಕೃತವಾಗಿ ಶುಕ್ರವಾರ ಬಿಡುಗಡೆ ಮಾಡಿದೆ ಎಂದು ರಾಜ್ಯ ಮೀನುಗಾರಿಕೆಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಇದರಲ್ಲಿ ಉಡುಪಿಯ 20,197 ಮಂದಿಯ 55 ಕೋಟಿ ರೂ. ಹಾಗೂ ಉಳಿದ 5 ಕೋಟಿ ರೂ. ಮಂಗಳೂರು ಹಾಗೂ ಕಾರವಾರ ಮೀನುಗಾರರದ್ದು ಆಗಿದೆ. ಮುಖ್ಯವಾಗಿ ಸಾಲ ಪಡೆದುಕೊಂಡ ಮೀನುಗಾರರ ತಮ್ಮ ಸೊಸೈಟಿಯ ಮೂಲಕ ತಾವು ಪಡೆದುಕೊಂಡ ಸಾಲಕ್ಕೆ ಪ್ರಮಾಣ ಪತ್ರ ಸಲ್ಲಿಕೆಯಾದ ಬಳಿಕ ಅದು ಬ್ಯಾಂಕ್‍ಗಳಿಗೆ ಹೋಗಿ ಅಲ್ಲಿಂದ ಹಣ ಬಿಡುಗಡೆಯಾಗಲಿದೆ.

ಈ ಸಾಲಮನ್ನಾದ ಹಣ ಭೂಮಿ ಕೋಶದ ಮೂಲಕ ಸಾಲಗಾರರ ಖಾತೆಗೆ ಜಮಾ ಮಾಡಲು ತುರ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

Comments are closed.