ಕರಾವಳಿ

ಹೋಂ ಕ್ವಾರಂಟೈನ್ ಉಲ್ಲಂಘಿಸಿದ ಕೊರೋನಾ ಸೋಂಕಿತನ ವಿರುದ್ದ ಪ್ರಕರಣ ದಾಖಲು- ಡಿಹೆಚ್‌ಓ

Pinterest LinkedIn Tumblr

ಉಡುಪಿ: ದುಬೈನಿಂದ ಆಗಮಿಸಿ, ಕ್ವಾರಟೈಂನ್ ಉಲ್ಲಂಘಿಸಿ ಓಡಾಟ ನೆಡೆಸಿದ್ದ, ಕಾಪು ತಾಲೂಕಿನ ಕೊರೋನಾ ಸೋಂಕಿತನ ವಿರುದ್ದ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಡಿಹೆಚ್‌ಓ ಡಾ.ಸುದೀರ್ ಚಂದ್ರ ಸೂಡಾ ತಿಳಿಸಿದ್ದಾರೆ.

ಈ ಸೋಂಕಿತ ವ್ಯಕ್ತಿ , ಆಸ್ಪತ್ರೆಗೆ ದಾಖಲಾಗುವವರೆಗೆ ಹಲವು ಬಾರಿ ಹೋಂ ಕ್ವಾರಟೈಂನ್ ಉಲ್ಲಂಘಿಸಿ ಸಾರ್ವಜನಿಕವಾಗಿ ಓಡಾಟ ನಡೆಸಿದ್ದು, ಈತನಿಗೆ ಕೊರೋನಾ ಸೋಂಕು ದೃಢವಾದ ನಂತರ ಈತನ ಸಂಪರ್ಕಕ್ಕೆ ಬಂದಿದ್ದ ಪ್ರತಿಯೊಬ್ಬರನ್ನೂ ಗುರುತಿಸಿ ಹೋ ಕ್ವಾರಂಟೈನ್ ಮಾಡಲಾಗಿದೆ. ಜಿಲ್ಲೆಯಲ್ಲಿ 14 ದಿನಗಳ ಕ್ವಾರಂಟೈನ್ ಮುಕ್ತಾಯಗೊಳಿಸಿದವರನ್ನು, ಮತ್ತೆ 14 ದಿನಗಳ ಅಬ್ಸರ್‌ವೇಷನ್ ನಲ್ಲಿ ಇಡಲಾಗುವುದು ಎಂದ ಡಿ.ಹೆಚ್.ಓ ಡಾ. ಸುಧೀರ್ ಚಂದ್ರ ಸೂಡಾ , ಪ್ರಸ್ತುತ ಕೊರೋನಾ ಸೋಂಕಿತರಾಗಿರುವ 3 ವ್ಯಕ್ತಿಗಳ ಆರೋಗ್ಯ ಉತ್ತಮವಾಗಿದೆ, ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗ್ಯವಿಲ್ಲವೆಂದು ಸ್ಪಷ್ಠಪಡಿಸಿದರು.

ಜಿಲ್ಲೆಯಲ್ಲಿ ಪ್ರಸ್ತುತ ಹೋಂ ಕ್ವಾರಂಟೈನ್ ನಲ್ಲಿರುವವರು ಹೊರಗಡೆ ಓಡಾಡುವುದು ಕಂಡು ಬಂದಲ್ಲಿ ಸಹಾಯವಾಣಿ ಸಂಖ್ಯೆ 9663957222, 9663950222 ಗೆ ಮಾಹಿತಿ ನೀಡುವಂತೆ ತಿಳಿಸಿದ, ಡಿಹೆಚ್‌ಓ , ಸಹಾಯವಾಣಿಯ ಸಹಾಯ ಕೋರಿ ಇದುವರೆಗೆ 1136 ಕರೆಗಳು ಬಂದಿವೆ, ಜಿಲ್ಲೆಗೆ ಹೊರ ಜಿಲ್ಲೆ, ರಾಜ್ಯದಿಂದ ಬಂದವರ ಮೇಲೂ ಸಹ ಆರೋಗ್ಯ ಇಲಾಖೆ ನಿಗಾವಹಿಸಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಇದುವರೆಗೆ 1976 ಮಂದಿ ಶಂಕಿತರನ್ನು ಗುರುತಿಸಿದ್ದು, 172 ಮಂದಿ 28 ದಿನಗಳ ಕ್ವಾರಂಟೈನ್ ಮತ್ತು 1070 ಮಂದಿ 14 ದಿನಗಳ ಕ್ವಾರಂಟೈನ್ ಅವಧಿ ಮುಗಿಸಿದ್ದಾರೆ ಪ್ರಸ್ತುತ 717 ಮಂದಿ ಹೋಂ ಕ್ವಾರಂಟೈನ್ ಮತ್ತು 87 ಮಂದಿ ಹಾಸ್ಪಿಟಲ್ ಕ್ವಾರಂಟೈನ್ ನಲ್ಲಿದ್ದಾರೆ, 79 ಮಂದಿಯನ್ನು ಡಿಸ್ಚಾಜ್ ð ಮಾಡಲಾಗಿದೆ ಎಂದು ಡಿಹೆಚ್‌ಓ ತಿಳಿಸಿದರು.

Comments are closed.