ಕರಾವಳಿ

ಊಟವಿಲ್ಲದೆ ಅಸಹಾಯಕನಾಗಿದ್ದ ಯಲ್ಲಾಪುರದ ವ್ಯಕ್ತಿಗೆ ಪಿಎಸ್ಐ ಹರೀಶ್ ಮಾನವೀಯ ಸ್ಪಂದನೆ

Pinterest LinkedIn Tumblr

ಕುಂದಾಪುರ: ಒಂದೆಡೆ ಊಟವಿಲ್ಲ…ಮತ್ತೊಂದೆಡೆ ಸರಿಯಾದ ವಸತಿಯಿಲ್ಲ. ಅಸಾಹಕ ಸ್ಥಿತಿಯಲ್ಲಿ ಕೋಟೇಶ್ವರ ಪೇಟೆಯಲ್ಲಿ ಕುಳಿತಿದ್ದ ವ್ಯಕ್ತಿಗೆ ಕುಂದಾಪುರ ಪೊಲೀಸರು ಮತ್ತು ಸ್ಥಳೀಯರು ಮಾನವೀಯತೆ ತೋರಿದ್ದಾರೆ.

ಸೋಮವಾರ ಬೆಳಗ್ಗೆ ಕುಂದಾಪುರದ ಕೋಟೇಶ್ವರ ಪೇಟೆಯಲ್ಲಿ ಸುಮಾರು 35-40 ವರ್ಷ ಪ್ರಾಯದ ವ್ಯಕ್ತಿಯೊಬ್ಬ ಅಸಾಹಕನಾಗಿ ಕುಳಿತಿದ್ದು ಸ್ಥಳೀಯ ಮುಖಂಡ ಅಶೋಕ್ ಪೂಜಾರಿ ಬೀಜಾಡಿ ಅವರ ಗಮನಕ್ಕೆ ಬರುತ್ತದೆ. ಕುಂದಾಪುರ ಪಿಎಸ್ಐ ಹರೀಶ್ ಆರ್. ಅವರಿಗೆ ಮಾಹಿತಿ ನೀಡಿದ್ದು ತಕ್ಷಣ ಬೇಟಿಯಿತ್ತ ಅವರು ಆ ವ್ಯಕ್ತಿಗೆ ಊಟೋಪಚಾರ ನೀಡಿ ಕುಂದಾಪುರದ ತಾತ್ಕಾಲಿಕ ಪುನರ್ವಸತಿ ಕೇಂದ್ರಕ್ಕೆ ಬಿಟ್ಟು ಬಂದಿದ್ದಾರೆ.

ಈ ಸಂದರ್ಭ ಬೀಜಾಡಿ ಗ್ರಾ.ಪಂ ಪಿಡಿಒ ಗಣೇಶ್, ನಾರಾಯಣ, ಆಶಾ ಕಾರ್ಯರ್ತೆಯರು ಹಾಗೂ ಸ್ಥಳೀಯರಿದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.