ಉಡುಪಿ: ಕೋರೋನ ವೈರಸ್ ಎಂಬ ಮಹಾಮಾರಿ ಈಗ ದೇಶವ್ಯಾಪಿಯಾಗಿ ಹರಡುತ್ತಿರುವ ನಿಟ್ಟಿನಲ್ಲಿ ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಹಾಗೂ ಆಶ್ರಯ ಚಾರಿಟೇಬಲ್ ಟ್ರಸ್ಟ್ ಇವರ ಸಂಯೋಗದಲ್ಲಿ ಚಂದ್ರಮಾನ ಯುಗಾದಿ ಯಿಂದ ಸೌರಮಾನ ಯುಗಾದಿ ವರೆಗೆ ಉಡುಪಿ ಪರಿಸರದಲ್ಲಿನ ನಿರ್ಗತಿಕರಿಗೆ ಕೂಲಿ ಕಾರ್ಮಿಕರಿಗೆ ಹಾಗೂ ಬಸ್ ನಿಲ್ದಾಣ ಮತ್ತು ರಸ್ತೆಬದಿಯ ಜೋಪಡಿಯಲ್ಲಿ ವಾಸವಾಗಿರುವ ಸುಮಾರು 600 ಮಂದಿಗೆ ಉಚಿತ ಊಟದ ವ್ಯವಸ್ಥೆಯನ್ನು ವಿಶೇಷ ಪೂರೈಕೆ ವ್ಯವಸ್ಥೆಯಲ್ಲಿ ಪೂರೈಸಲಾಗುತ್ತಿದೆ.
ಈ ಅನ್ನದಾಸೋಹದ ಕಾರ್ಯಕ್ರಮದಲ್ಲಿ ಉಡುಪಿಯ ಶಾಸಕ, ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಕೆ. ರಘುಪತಿ ಭಟ್ ಗುರುವಾರದಂದು ಆಹಾರ ಪೂರೈಕೆಯಲ್ಲಿ ತಾವು ಸ್ವತ ಭಾಗವಹಿಸಿ ಮಾದರಿಯಾಗಿದ್ದು ಈ ವ್ಯವಸ್ಥೆಯ ಬಗ್ಗೆ ಶ್ಲಾಘನೆಯನ್ನು ವ್ಯಕ್ತಪಡಿಸಿದರು. ಮುಂದಿನ 21 ದಿನಗಳ ನಡೆಯುವ ಈ ನಿರಂತರ ಅಕ್ಷರ ದಾಸೋಹದ ಸೇವೆಯಲ್ಲಿ ತಾನು ಕಾರ್ಯಕರ್ತನಾಗಿ ಭಾಗವಹಿಸುವ ಆಶಯವನ್ನು ವ್ಯಕ್ತಪಡಿಸಿದರು.
Comments are closed.