ರಾಷ್ಟ್ರೀಯ

ಕರೋನವೈರಸ್ ಪರಿಣಾಮ: ಸರ್ಕಾರಿ ಬ್ಯಾಂಕುಗಳ ಸಮಯ ಬದಲಾವಣೆ

Pinterest LinkedIn Tumblr


ನವದೆಹಲಿ: ಕರೋನವೈರಸ್ Covid-19 ಸಾಂಕ್ರಾಮಿಕದ ದೃಷ್ಟಿಯಿಂದ, ಪಿಎನ್‌ಬಿ, ಬ್ಯಾಂಕ್ ಆಫ್ ಬರೋಡಾ ಮತ್ತು ಇತರ ಬ್ಯಾಂಕುಗಳು ಸೇರಿದಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಶಾಖೆಗಳಲ್ಲಿ ವಿಭಿನ್ನ ಕೆಲಸದ ಸಮಯವನ್ನು ನಿಗದಿಪಡಿಸಿದೆ. ಎಸ್‌ಬಿಐ ವ್ಯವಸ್ಥಾಪಕ ನಿರ್ದೇಶಕ ಪಿ.ಕೆ.ಗುಪ್ತಾ ಮಾತನಾಡಿ, ದೇಶಾದ್ಯಂತ ರಾಜ್ಯ ಸರ್ಕಾರಗಳು ಮತ್ತು ಜಿಲ್ಲಾ / ಸ್ಥಳೀಯ ಆಡಳಿತದೊಂದಿಗೆ ಮಾತುಕತೆ ನಡೆಸಿದ ನಂತರ, ನಾವು ಬ್ಯಾಂಕಿನಲ್ಲಿ ವಿವಿಧ ಗಂಟೆಗಳ ಕಾರ್ಯನಿರ್ವಹಣೆಯನ್ನು ನಿಗದಿಪಡಿಸಿದ್ದೇವೆ ಎಂದು ತಿಳಿಸಿದರು.

ಅನೇಕ ರಾಜ್ಯಗಳಲ್ಲಿ, ಶಾಖೆ ತೆರೆಯುವ ಸಮಯವನ್ನು ಬೆಳಿಗ್ಗೆ 7 ರಿಂದ ಬೆಳಿಗ್ಗೆ 10 ರವರೆಗೆ ಮತ್ತು ಕೆಲವು ರಾಜ್ಯಗಳಲ್ಲಿ ಬೆಳಿಗ್ಗೆ 8 ರಿಂದ 11 ರವರೆಗೆ ಮಾಡಲಾಗಿದೆ. ಹಲವೆಡೆ ಅದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಕಾರ್ಯನಿರ್ವಹಿಸುತ್ತದೆ.

ಮತ್ತೊಂದೆಡೆ, ಖಾಸಗಿ ವಲಯದ ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ತನ್ನ ಶಾಖೆಗಳು ಮಾರ್ಚ್ 23 ರಿಂದ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಕಾರ್ಯನಿರ್ವಹಿಸುತ್ತಿವೆ. ಮುಂದಿನ ಆದೇಶದವರೆಗೆ ಈ ವ್ಯವಸ್ಥೆ ಮುಂದುವರೆಯಲಿದೆ ಎನ್ನಲಾಗಿದೆ.

ಕಾರ್ಯನಿರ್ವಹಿಸಲು ಬ್ಯಾಂಕ್ ಬೇರೆ ಸಮಯವನ್ನು ನಿಗದಿಪಡಿಸಿದೆ. ಇಂದೋರ್‌ನಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2, ಡೆಹ್ರಾಡೂನ್‌ನಲ್ಲಿ ಬೆಳಿಗ್ಗೆ 7 ರಿಂದ 10, ಸಹರಾನ್‌ಪುರದಲ್ಲಿ 8 ರಿಂದ 11, ಲುಧಿಯಾನ ಮತ್ತು ಜಲಂಧರ್‌ನಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ರವರೆಗೆ ಬ್ಯಾಂಕುಗಳು ಕಾರ್ಯನಿರ್ವಹಿಸಲಿವೆ.

HDFC ಮತ್ತು Yes ಬ್ಯಾಂಕ್ ಸಹ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಕೆಲಸದ ಸಮಯವನ್ನು ಬದಲಾಯಿಸಿವೆ. ಈ ವ್ಯವಸ್ಥೆ ಪ್ರಸ್ತುತ ಮಾರ್ಚ್ 23 ರಿಂದ 31 ರವರೆಗೆ ಜಾರಿಯಲ್ಲಿ ಇರಲಿದೆ. ಬ್ಯಾಂಕ್ ಸಂಬಂಧಿತ ಅಗತ್ಯಗಳಿಗಾಗಿ ಡಿಜಿಟಲ್ ಮತ್ತು ಆನ್‌ಲೈನ್ ಮಾಧ್ಯಮಗಳನ್ನು ಬಳಸಲು ಬ್ಯಾಂಕುಗಳು ಗ್ರಾಹಕರನ್ನು ಕೇಳಿದೆ.

ಈ ಕುರಿತು ತಮ್ಮ ತಮ್ಮ ಗ್ರಾಹಕರಿಗೆ ಮನವಿ ಮಾಡಿಕೊಂಡಿರುವ ICICI ಹಾಗೂ HDFC ಬ್ಯಾಂಕ್ ಗಳು ಡಿಜಿಟಲ್ ವ್ಯವಹಾರಕ್ಕೆ ಹೆಚ್ಚಿನ ಒತ್ತು ನೀಡುವಂತೆ ಕೋರಿವೆ. ಕರೋನಾವೈರಸ್ ನಿಂದ ಹೆಚ್ಚಾಗುತ್ತಿರುವ ಸೋಂಕಿನ ಹಾನಿಯನ್ನು ಗಮನದಲ್ಲಿಟ್ಟುಕೊಂಡು ಆದಷ್ಟು ಕಡಿಮೆ ಸಿಬ್ಬಂದಿಯನ್ನು ಬ್ಯಾಂಕಿಗೆ ಕರೆಸಲಾಗುತ್ತಿದೆ.

Comments are closed.