ಕರಾವಳಿ

ವೀರಪ್ಪನ್ ಕಾರ್ಯಾಚರಣೆಯಲ್ಲಿದ್ದ ಈಗಿನ ಕುಂದಾಪುರ ಸಿಪಿಐ ಕೆ.ಆರ್. ಗೋಪಿಕೃಷ್ಣರಿಗೆ ಸಿಎಂ ಚಿನ್ನದ ಪದಕ

Pinterest LinkedIn Tumblr

ಕುಂದಾಪುರ: ಪ್ರಸ್ತುತ ಕುಂದಾಪುರ ವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಕೆ.ಆರ್. ಗೋಪಿಕೃಷ್ಣ ಅವರು ಮುಖ್ಯಮಂತ್ರಿ ಚಿನ್ನದ ಪದಕ ಗೌರವಕ್ಕೆ ಆಯ್ಕೆ ಆಗಿದ್ದಾರೆ. 2018ರ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಆಯ್ಕೆಯಾದ ಗೋಪಿಕೃಷ್ಣ ಅವರು 2004 ರಲ್ಲಿ ವೀರಪ್ಪನ್ ವಿರುದ್ದದ ಎಸ್.ಟಿ.ಎಫ್ ಕಾರ್ಯಪಡೆಯಲ್ಲಿದ್ದವರು.

ಬಳಿಕ ಚಾಮರಾಜನಗರ, ಹಾಸನ, ಮದ್ದೂರು, ಟಿ. ನರಸೀಪುರ,ಉಳ್ಳಾಲ ಸೇರಿದಂತೆ ರಾಜ್ಯದ ಬೇರೆ ಬೇರೆ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿ ಪ್ರಸಕ್ತ ಕುಂದಾಪುರ ವೃತ್ತ ನಿರೀಕ್ಷಕರಾಗಿ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ್ದಾರೆ. ಪೊಲೀಸ್ ಇಲಾಖೆಯ ಸೇವಾ ಅವಧಿಯುದ್ದಕ್ಕೂ ದಕ್ಷ ಹಾಗೂ ಪ್ರಾಮಾಣಿಕ ಎನ್ನುವ ಹೆಗ್ಗಳಿಕೆ ಪಾತ್ರರಾದ ಅಧಿಕಾರಿ ಇವರು.

(ವರದಿ- ಯೋಗೀಶ್ ಕುಂಭಾಸಿ)

Comments are closed.