ಕರಾವಳಿ

ಸ್ಕೌಟ್ಸ್-ಗೈಡ್ಸ್ ಸಾಧಕರಿಗೆ ರಾಜ್ಯಪಾಲರಿಂದ ಪ್ರಶಸ್ತಿ ಪ್ರಧಾನ

Pinterest LinkedIn Tumblr

ಉಡುಪಿ: 2019-20 ನೇ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿ ಪತ್ರ ಸಮಾರಂಭದಲ್ಲಿ ಉಡುಪಿ ಜಿಲ್ಲೆಯ ಕಬ್ಸ್-ಬುಲ್ ಬುಲ್, ಸ್ಕೌಟ್ಸ್-ಗೈಡ್ಸ್ ಮತ್ತು ರೋವರ್ಸ್ ರೇಂಜರ್ಸ್ ಸಾಧಕರಿಗೆ, ರಾಜ್ಯಪಾಲ ವಾಜುಬಾಯಿ ರೂಡಬಾಯಿ ವಾಲಾ ರವರು, ಬೆಂಗಳೂರಿನ ರಾಜಭವನದ ಗಾಜಿನ ಮನೆಯಲ್ಲಿ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಿದರು.

ಕಲ್ಯಾಣ್‍ಪುರ ಸಂತೆಕಟ್ಟೆಯ ಮೌಂಟ್ ರೋಸರಿ ಆಂಗ್ಲ ಮಾಧ್ಯಮ ಶಾಲೆಯ ಆದಿತ್ಯ (ಕಬ್), ಬೈಂದೂರು ತಾಲೂಕಿನ ಹೇರೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಮ್ರತಿ (ಬುಲ್ ಬುಲ್), ಬೈಂದೂರು ಚಪ್ಪರಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವೈಭವ್ (ಸ್ಕೌಟ್ಸ್), ಗಂಗೊಳ್ಳಿಯ ಸ್ಟೆಲ್ಲಾ ಮೇರಿಸ್ ಪ್ರೌಢ ಶಾಲೆಯ ಪ್ರೀತಿ(ಗೈಡ್ಸ್), ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಶ್ರೀಕರ ಆರ್.ಎನ್ (ರೋವರ್) ಹಾಗೂ ಕಾರ್ಕಳ ಮಂಜುನಾಥ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿಕ್ಷೀತಾ (ರೇಂಜರ್) ಪ್ರಶಸ್ತಿ ಸ್ವೀಕರಿಸಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್ ಸಿಂಧ್ಯ ಹಾಗೂ ಇತರ ಪಧಾದಿಕಾರಿಗಳು ಭಾಗವಹಿಸಿದರು.
ಪ್ರಶಸ್ತಿ ಪಡೆದ ಎಲ್ಲಾ ಮಕ್ಕಳಿಗೆ ಭಾರತ್ ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಸಂಸ್ಥೆಯ ಮುಖ್ಯ ಆಯುಕ್ತೆ ಶಾಂತಾ. ವಿ ಆಚಾರ್ಯ ಹಾಗೂ ಜಿಲ್ಲಾ ಎಲ್ಲಾ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Comments are closed.