ಮಂಗಳೂರು ಫೆಬ್ರವರಿ 24: ಉಳ್ಳಾಲದ ಅಬ್ಬಕ್ಕ ರಾಣಿ ಸ್ವಾತಂತ್ರ್ಯ ಸಂಗ್ರಾಮ ಇಂದಿನ ಯುವ ಜನತೆಯಲ್ಲಿ ಸಾಹಸದ ಸ್ಪೂರ್ತಿಯಾಗಿದೆ. ಅಬ್ಬಕ್ಕ ಉತ್ಸವದ ಅಂಗವಾಗಿ ನಡೆಯುವ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಿ ರಾಷ್ಟ್ರೀಯ ಜಾಗೃತಿಗೆ ಕಾರಣವಾಗಬೇಕು ಎಂದು ಅಂತರಾಷ್ಟ್ರೀಯ ಕ್ರೀಡಾ ಪಟು ಕುಮಾರಿ ಪೂರ್ಣಮಾ ಹೇಳಿದರು.
ದ.ಕ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವತಿಯಿಂದ ವೀರರಾಣಿ ಅಬ್ಬಕ್ಕ ಉತ್ಸವ- 2020 ರ ಅಂಗವಾಗಿ ಅಸೈಗೋಳಿ ಕೇಂದ್ರ ಮೈದಾನದಲ್ಲಿ ಭಾನುವಾರ ನಡೆದ ರಾಣಿ ಅಬ್ಬಕ್ಕ ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಕನಾ೯ಟಕ ಸರಕಾರ ಕ್ರೀಡಾ ರತ್ನ ಪ್ರಶಸ್ತಿ ಪುರಸ್ಕೃತೆ ಅಂತರಾಷ್ಟ್ರೀಯ ಕ್ರೀಡಾಪಟು ಕುಮಾರಿ ಪೂರ್ಣಿಮಾ ಇವರಿಗೆ ಹೂ.ಹಣ್ಣು ನೀಡಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಣಾಜೆ ಗ್ರಾಮ ಪಂಚಾಯತ್ ನ ಅಧ್ಯಕ್ಷ ನಝರ್ ಷಾ ಪಟೋರಿ ತುಳುನಾಡಿನಲ್ಲಿ ಅಬ್ಬಕ್ಕ ಚರಿತ್ರೆ ನಾಟಕಗಳಿಗೆ ಸೀಮಿತವಾಗಿದೆ. ಅದು ದೇಶದ ಸ್ವಾತಂತ್ರ್ಯ ಇತಿಹಾಸದ ಒಂದು ಭಾಗವಾಗಬೇಕು ಎಂದು ಹೇಳಿದರು.
ಅಂತರಾಷ್ಟ್ರೀಯ ತ್ರೋಬಾಲ್ ಪಟು ಕುಮಾರಿ ಪೂರ್ಣಿಮಾ ಆಟೋಟ ಸ್ಪರ್ಧೆಯನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್ ಕುಮಾರ್ ಡಿಸೋಜ, ಜೆಸಿಐ ಅಧ್ಯಕ್ಷ ಪ್ರಾಂಕಿ ಪ್ರಾನ್ಸಿಸ್ ಕುಟಿನೋ, ಲಕ್ಷ್ಮೀ ನಾರಾಯಣ ರೈ ಹರೇಕಳ, ನಿರ್ಮಲ್ ಭಟ್, ನಾರಾಯಣ ರೈ ಕಕ್ಕೆ ಮಜಲು, ಸುಹಾಸಿನಿ ಬಬ್ಬುಕಟ್ಟೆ ಮತ್ತಿತರರು ಉಪಸ್ಥಿತರಿದ್ದರು. ತ್ಯಾಗಂ ಹರೇಕಳ ಕಾರ್ಯಕ್ರಮ ನಿರೂಪಿಸಿದರು.


Comments are closed.