ಗಲ್ಫ್

ದುಬೈಯಲ್ಲಿ ‘ಗಮ್ಮತ್ ಕಲಾವಿದರು’ ನಡೆಸಿಕೊಟ್ಟ ‘ದಾದ ಮಲ್ಪೆರೆ ಆಪುಂಡು’ ನಾಟಕ ನೋಡಿ ಮನಸೋತ ವೀಕ್ಷಕರು

Pinterest LinkedIn Tumblr

Photo: Ashok Belman
ದುಬೈ: ಇಲ್ಲಿನ ‘ಗಮ್ಮತ್ ಕಲಾವಿದರು’ ಸಂಸ್ಥೆಯ 9ನೇ ವರ್ಷದ ಕಲಾ ಕಾಣಿಕೆ ‘ದಾದ ಮಲ್ಪೆರೆ ಆಪುಂಡು’ ನಾಟಕವು ಶುಕ್ರವಾರ ನಗರದ ಅಲ್ ಕೂಜ್ನ ಕ್ರೆಡೆನ್ಸ್ ಹೈಸ್ಕೂಲಿನ ಭವ್ಯ ಸಭಾಂಗಣದಲ್ಲಿ ಪ್ರದರ್ಶನಗೊಂಡಿತು.

ದುಬೈಯಲ್ಲಿರುವ ತುಳುವರೇ ನಟಿಸಿ-ನಿರ್ದೇಶಿಸಿರುವ ಈ ನಾಟಕವು ವೃತ್ತಿಪರ ನಾಟಕಕ್ಕಿಂತಲೂ ತಾವೇನು ಕಮ್ಮಿಯಿಲ್ಲ ಎಂಬಂತೆ ಮೂಡಿಬಂದಿದ್ದು, ವೀಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ನಾಟಕದಲ್ಲಿ ವಾಸು ಕುಮಾರ್ ಶೆಟ್ಟಿ, ಚಿದಾನಂದ ಪೂಜಾರಿ, ಡೊನಾಲ್ಡ್ ಕೊರೇಯೊ, ಗಿರೀಶ್ ನಾರಾಯಣ್, ಸುನೀಲ್ ಸುವರ್ಣ, ಸಂದೀಪ್ ಬರ್ಕೆ, ರಮೇಶ್‌ ಸುವರ್ಣ, ಜೇಶ್ ಬಾಯಾರ್, ರೂಪೇಶ್ ಪೂಜಾರಿ, ದೀಪಕ್ ಎಸ್ ಪಿ, ಗೌತಮ್ ಬಂಗೇರ, ಮೋನಪ್ಪ, ಶ್ರೀಮತಿ ಸುವರ್ಣ ಸತೀಶ್, ಶ್ರೀಮತಿ ದೀಪ್ತಿ ದೀನರಾಜ್, ಜಾನೇಟ್ ಸಿಕ್ವೇರಾ ತಮ್ಮ ಪಾತ್ರಕ್ಕೆ ಜೀವತುಂಬಿದರು.

 

ಸಂಗೀತ ನಿರ್ದೇಶಕರಾಗಿ ಶುಭಕರ ಬೆಳಪು, ನೃತ್ಯ ನಿರ್ದೇಶಕರಾಗಿ ಗೌತಮ್ ಬಂಗೇರ, ಮುಖಕ್ಕೆ ಬಣ್ಣ ಕಿಶೋರ್ ಗಟ್ಟಿ, ತೆರೆಯ ಹಿಂದೆ ಸತೀಶ್ ಉಳ್ಳಾಲ್, ಕಿರಣ್ ಶೆಟ್ಟಿ, ಚೈತ್ರ ಶೆಟ್ಟಿ ಸಹಕರಿಸಿದರು. ಕಿಶೋರ್ ಡಿ ಶೆಟ್ಟಿಯವರ ಸಹಕಾರದಲ್ಲಿ ನವೀನ್ ಶೆಟ್ಟಿ ಅಳಕೆ ನಾಟಕ ರಚನೆ ಮಾಡಿ ವಿಶ್ವನಾಥ ಶೆಟ್ಟಿ ದುಬೈ ನಿರ್ದೇಶಿಸಿದರು.

ನಾಟಕಕ್ಕೂ ಮೊದಲು ನಡೆದ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಕಿರಣ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭ ಜರಗಿತು. ಮುಖ್ಯ ಅತಿಥಿಗಳಾಗಿ ತಂಡದ ಮಹಾಪೋಷಕರಾದ ಉದ್ಯಮಿ ಹರೀಶ್ ಬಂಗೇರ, ACME ಬಿಲ್ಡಿಂಗ್ ಮೆಟೀರಿಯಲ್ಸ್’ನ ಆಡಳಿತ ನಿರ್ದೇಶಕ, ಸಿನಿಮಾ ನಿರ್ಮಾಪಕ ಹರೀಶ್ ಶೇರಿಗಾರ್, ಸರ್ವೋತ್ತಮ ಶೆಟ್ಟಿ, ಉದ್ಯಮಿಗಳಾದ ಪ್ರೇಮನಾಥ ಶೆಟ್ಟಿ, ಜೇಮ್ಸ್ ಮೆಂಡೋನ್ಸಾ, ಗುಣಶೀಲ್ ಶೆಟ್ಟಿ, ಲಕುಮಿ ತಂಡದ ನಿರ್ದೇಶಕ ಕಿಶೋರ್ ಡಿ ಶೆಟ್ಟಿ, ನಾಟಕ ರಚನೆಕಾರ ನವೀನ್ ಶೆಟ್ಟಿ ಅಳಕೆ, ಸಂಗೀತ ನಿರ್ದೇಶಕ ಶುಭಕರ್ ಬೆಳಪು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

‘ಇಂಗ್ಲಿಷ್’ ತುಳು ಸಿನಿಮಾದ ಟಿಕೆಟ್ ಬಿಡುಗಡೆ
ACME Movies International ಬ್ಯಾನರಿನಡಿ ACME ಬಿಲ್ಡಿಂಗ್ ಮೆಟೀರಿಯಲ್ಸ್’ನ ಆಡಳಿತ ನಿರ್ದೇಶಕ, ಕನ್ನಡ ಸಿನಿಮಾ ನಿರ್ಮಾಪಕ ಹರೀಶ್ ಶೇರಿಗಾರ್ ಹಾಗು ಅವರ ಧರ್ಮಪತ್ನಿ ಶರ್ಮಿಳಾ ಶೇರಿಗಾರ್ ನಿರ್ಮಿಸಿರುವ ತುಳು ಸಿನೆಮಾರಂಗದ ಖ್ಯಾತ ನಿರ್ದೇಶಕ ಕೆ. ಸೂರಜ್ ಶೆಟ್ಟಿ ನಿರ್ದೇಶನದ ‘ಇಂಗ್ಲಿಷ್’ ತುಳು ಸಿನಿಮಾವು ಮಾ.13 ರಂದು ದುಬಾಯಿಯಲ್ಲಿ ವರ್ಲ್ಡ್ ಪ್ರೀಮಿಯರ್ ಪ್ರದರ್ಶನ ಕಾಣಲಿದ್ದು, ಇದರ ಟಿಕೇಟ್ ಬಿಡುಗಡೆ ಕಾರ್ಯಕ್ರಮವನ್ನು ಲಕುಮಿ ತಂಡದ ರೂವಾರಿ ಕಿಶೋರ್ ಡಿ ಶೆಟ್ಟಿ ಹಾಗೂ ಸರ್ವೋತ್ತಮ ಶೆಟ್ಟಿ ಮಾಧ್ಯಮಕ್ಕೆ ಬಿಡುಗಡೆ ಮಾಡಿ ಸಿನಿಮಾದ ಟೀಸರ್ ಬಿಡುಗಡೆಗೊಳಿಸಿದರು.

‘ಗಮ್ಮತ್ ಕಲಾವಿದರು’ ಸಂಸ್ಥೆಯ ಕಲಾವಿದರಾದ ಸುನೀಲ್ ಸುವರ್ಣ ದಂಪತಿ ಹಾಗೂ ದೀಪಕ್ ಎಸ್.ಪಿ ದಂಪತಿಗಳನ್ನು ಮುಖ್ಯ ಅತಿಥಿಗಳು ಸನ್ಮಾನಿಸಿದರು. ಕಾರ್ಯಕ್ರಮವನ್ನು ರಾಜೇಶ್ ಕುತ್ತಾರ್ ನಿರೂಪಿಸಿ, ತಂಡದ ಕಾರ್ಯದರ್ಶಿ ಜಾನೇಟ್ ಸಿಕ್ವೆರಾ ವಂದಿಸಿದರು.

Comments are closed.