ಕರಾವಳಿ

ಜನರಲ್ಲಿ ಸಚ್ಚಿಂತನೆಗಳನ್ನು ಬಿತ್ತರಿಸುವ ಮೂಲಕ ದೇಶದ ಏಳಿಗೆಯ ಕೆಲಸ ಅಗಲಿ: ಸಂಜೆ ಪ್ರಭಾ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಶ್ರೀ ಈಶ ಪ್ರಿಯ ಶ್ರೀ

Pinterest LinkedIn Tumblr

ಉಡುಪಿ: ದೇಶದ ಏಳಿಗೆಯಲ್ಲಿ ಪತ್ರಿಕೆಗಳ ಪಾತ್ರ ಬಹುಮುಖ್ಯವಾದದು , ದೇಶದ ಜನರಿಗೆ ಒಳ್ಳೆಯ ಸಚ್ಚಿಂತನೆಗಳನ್ನು ಬಿತ್ತರಿಸುವ ಮೂಲಕ ದೇಶದ ಏಳಿಗೆಯಲ್ಲಿ ಸಂಜೆ ಪ್ರಭಾ ಪತ್ರಿಕೆ ಬಹು ಮುಖ್ಯ ಪಾತ್ರ ವಹಿಸಲಿ ಎಂದು ಉಡುಪಿ ಶ್ರೀ ಕೃಷ್ಣ ಮಠ ಪರ್ಯಾಯ ಶ್ರೀಪಾದರಾದ ಶ್ರೀ ಈಶ ಪ್ರಿಯ ಶ್ರೀ ಪಾದರು ಹೇಳಿದರು .

ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ನ್ಯೂಸ್ ಮಿಡಿಯಾ ಅಸೋಸಿಯೇಷನ್ ಅಫ್ ಕರ್ನಾಟಕ ಇದರ ಉಡುಪಿ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಸಂಜೆ ಪ್ರಭ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಶ್ರೀಗಳು, ನಾವು ಸಾಧನೆಗಳನ್ನು ಮಾಡಬೇಕಾದ್ರೆ ಮೊದಲು ಸಮಾಧಾನದಲ್ಲಿರುವುದಕ್ಕೆ ಅಭ್ಯಸ ಮಾಡಬೇಕು,ಗುರಿಯನ್ನ ತಲುಪಬೇಕಾದರೆ ಏಕರೂಪಿ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ.ಒಳ್ಳೆಯ ಕೆಲಸಗಳನ್ನು ಮಾಡುವಾಗ ಹಲವು ಬಾರಿ ಅವಮಾನಗಳನ್ನು ಎದುರಿಸಬೇಕಾಗುತ್ತದೆ,ಅದ್ರೆ ಸಮಾಜಕ್ಕೆ ಒಳ್ಳೆಯ ಕೆಲಸಗಳನ್ನು ಮಾಡುವಾಗ ಪ್ರಯತ್ನದಿಂದ ವಿಮುಖರಾಗದೇ ಮುಂದುವರೆಸಬೇಕು ಎಂದು ಹೇಳಿದರು .

ಒಳ್ಳೆಯ ವಿಚಾರಗಳು ಪತ್ರಿಕೆ ಭಿತ್ತಿರಿಸುವ ಮೂಲಕ ಜನರನ್ನು ಸಚ್ಚಿಂತಕರನ್ನಾಗಿಯೂ , ದೇಶದ ಜನರನ್ನು ಸಾಧಕರನ್ನಾಗಿಯೂ ಮಾಡುವ ಕೆಲಸ ಸಂಜೆ ಪ್ರಭ ಪತ್ರಿಕೆಯಿಂದ ಅಗಲಿ ,ಉಡುಪಿಯಿಂದ ಬಿಡುಗಡೆಗೊಂಡ ಈ ಪತ್ರಿಕೆ ದೇಶದಾದ್ಯಾಂತ ಪ್ರಸರಣಗೊಳ್ಳುವಂತಾಗಲೀ ಎಂದು ಪೂಜ್ಯ ಶ್ರೀ ಪಾದರು ಹಾರೈಸಿದರು .

ಇದೇ ಸಂಧರ್ಭದಲ್ಲಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಳಾಗಿ ಭಾಗಹಿಸಿದ ಉಡುಪಿ ಜಿಲ್ಲೆಯ ಅಪಾರ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಕುಮಾರಚಂದ್ರ ಮಾತನಾಡಿ ಸಮಾಜವನ್ನು ಕಟ್ಟುವಲ್ಲಿ ಪತ್ರಿಕೆಗಳ ಪಾತ್ರ ಮಹತ್ತರವದ್ದು , ಪೊಲೀಸ್ ಇಲಾಖೆಯಂತೆ ಪತ್ರಕರ್ತರು ಕೂಡ 24 ಗಂಟೆಗಳ ಕೆಲಸ ಮಾಡುತ್ತಿರುತ್ತಾರೆ.ಯಾವುದೇ ವಿಷಯ ನಿಷ್ಪಕ್ಷವಾದ ಮಾಹಿತಿ ಸರಿಯಾದ ಸಮಯಕ್ಕೆ ಜನರಿಗೆ ತಲುಪಿಸಬೇಕಾಗುತ್ತದೆ, ಅದೇ ಪತ್ರಿಕೋಧ್ಯಮ ,ಗ್ರಾಮೀಣ ಭಾಗದ ಜನರಿಗೆ ಹೆಚ್ಚೆಚ್ಚು ಮಾಹಿತಿಗಳನ್ನ ತಲುಪಿಸುವಂತಹ ಕೆಲಸ ಪತ್ರಿಕೆಗಳಿಂದ ಆಗಬೇಕಾಗಿದೆ . ಆ ಕೆಲಸವನ್ನು ಸಂಜೆ ಪ್ರಭ ಪತ್ರಿಕೆ ಮಾಡಲಿ ಎಂದು ಶುಭ ಹಾರೈಸಿದರು .ಹಿರಿಯ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್ ಮಾತನಾಡಿ ಸಂಜೆ ಪ್ರಭ ಪತ್ರಿಕೆ ಕರಾವಳಿ ಭಾಗದ ಜನರ ಜೀವನದ ಭಾಗವಾಗುವ ರೀತಿಯಲ್ಲಿ ಬೆಳೆಯಬೇಕು ,ಈ ಭಾಗದ ಜನ ಇದನ್ನ ಬಿಟ್ಟು ನಾವಿಲ್ಲ ಎನ್ನುವ ಮನೋಭಾವ ಬರುವ ನಿಟ್ಟಿನಲ್ಲಿ ಪತ್ರಿಕಾ ತಂಡ ಕಾರ್ಯ ನಿರ್ವಹಿಸಬೇಕು ಎಂದರು .

ಇದೇ ಸಂಧರ್ಭದಲ್ಲಿ ನ್ಯೂಸ್ ಮಿಡಿಯಾ ಅಸೋಸಿಯೇಷನ್ ಅಫ್ ಕರ್ನಾಟಕ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಶ್ರೀ ಬಿ. ಜಿ ಮೋಹನ್ ದಾಸ್ ,ಲಕ್ಷ್ಮಣ್ ಮಟ್ಟು ,ನಮ್ಮ ಭೂಮಿ ರಾಮಾಂಜಿ ,ಜಗದೀಶ್ ಭಟ್ , ರಾಂಜೀ ನಾಯಕ್ ರವನ್ನು ಪೂಜ್ಯ ಶ್ರೀಗಳು ಸನ್ಮಾನಿಸಿದರು.

ಬಿಗ್ ಬಾಸ್ ವಿಜೇತ ಶೈನ್ ಶೆಟ್ಟಿಗೆ ಸನ್ಮಾನ .
ಸಂಜೆ ಪ್ರಭ ಪತ್ರಿಕೆ ಬಿಡುಗಡೆ ಸುಸಂಧರ್ಭದಲ್ಲಿ ಬಿಗ್ ಬಾಸ್ ಸೀಸನ್ ಏಳರ ವಿಜೇತ ಉಡುಪಿಯ ಶೈನ್ ಶೆಟ್ಟಿಯವರಿಗೆ ಅದ್ದೂರಿ ಸನ್ಮಾನವನ್ನು ಮಾಡಲಾಯಿತು.

ಪೂಜ್ಯ ಶ್ರೀ ಈಶ ಪ್ರಿಯ ಶ್ರೀಗಳು ಸೇರಿದಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳು ಹೂ ಮಾಲೆಯನ್ನ ಹಾಕಿ ಪೇಟಾ ತೊಡಿಸಿ ಸನ್ಮಾನಿಸಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಶೈನ್ ಶೆಟ್ಟಿ ನಾನು ಕಾಲೇಜು ದಿನಗಳಲ್ಲಿ ಕೃಷ್ಣ ಮಠದ ಇದೇ ವೇದಿಕೆಯ ಮುಂದೆ ಕುಳಿತು ಹಲವು ಸಾಧಕರಿಗೆ ಸನ್ಮಾನ ಅಗುವುದನ್ನ ನೋಡುತ್ತಿದ್ದೆ.ಅವಾಗ ಇದೇ ವೇದಿಕೆಯಲ್ಲಿ ನನಗೊಂದು ದಿನ ಸನ್ಮಾನ ಮಾಡಿಸಬೇಕು ಅನ್ನುವ ಆಸೆ ಇತ್ತು,ಇವತ್ತು ಆ ಆಸೆಯನ್ನು ನ್ಯೂಸ್ ಮಿಡಿಯಾ ಅಸೋಸಿಯೇಶನ್ ಈಡೇರಿಸಿ ಕೊಟ್ಟಿದೆ ಎಂದರು.ಬಿಗ್ ಬಾಸ್ ಸೀಸನ್ ನಲ್ಲಿ ಸುದೀಪ್ ರವರು ಕೈ ಎತ್ತಿ ಸನ್ಮಾನಿಸಿದ್ದರು ಅಂದಿನಿಂದ ಇವತ್ತಿನವರೆಗೂ ನೀವೆಲ್ಲರೂ ಆ ಸನ್ಮಾನವನ್ನು ಎಲ್ಲರು ಮುಂದುವರೆಸುತ್ತಿದ್ದೀರಿ,ನಿಮ್ಮ ಪ್ರೀತಿ ಅಭಿಮಾನಕ್ಕೆ ನಾನು ಚಿರಋಣಿ ಎಂದರು.

ಉತ್ತಮ ಗುಣಮಟ್ಟದ ಪತ್ರಿಕೆಯಾಗಿ ಸಂಜೆ ಪ್ರಭ ಹೊರ ಬರಲಿ
ಒಂದು ಸಿನಿಮಾ ಒಳ್ಳೆಯ ಪ್ರೊಡಕ್ಷನ್ ಹೌಸ್ ನಿಂದ ಹೊರ ಬರುವಾಗ ,ಸಿನಿಮಾ ಮೇಲೆ ತುಂಬಾ ನಿರೀಕ್ಷೆಗಳು ,ನಂಬಿಕೆಗಳು ಜನರ ಮೇಲಿರುತ್ತೆ . ಜನರು ಸಿನಿಮಾವನ್ನು ನೋಡೇ ನೋಡ್ತಾರೆ.ಅದೇ ರೀತಿ ಸುದ್ದಿ ವಿಚಾರದಲ್ಲಿ ಸಂಜೆ ಪ್ರಭ ಜನರ ನಂಬಿಕೆಯನ್ನು ಗಳಿಸುವಲ್ಲಿ ಯಶಸ್ವಿಯಾಗಲಿ ಉತ್ತಮ ಗುಣ ಮಟ್ಟದ ಸುದ್ದಿಗಳು ಹೊರ ಬರಲಿ ,ಯಾವುದೇ ವಿಚಾರಗಳು ಯಾವುದೇ ಪತ್ರಿಕೆಗಳಲ್ಲಿ ಬಂದರು ಸಂಜೆ ಪ್ರಭ ಪತ್ರಿಕೆ ಬರುವ ತನಕ ಕಾಯುವಂತಹ ಮಟ್ಟಿಗೆ ಪತ್ರಿಕೆ ಬೆಳೆಯಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿಗಳು ರವಿಕಿರಣ ಮುರ್ಡೆಶ್ವರ್ ,ಸಮಾಜ ಸೇವಕರು ಮಿಥುನ್ ಶೆಟ್ಟಿ ,ನ್ಯಾಯವಾದಿ ಅಖಿಲ್ ಹೆಗ್ಡೆ ,ರಜನಿ ಪೈ ,ಉಪಸ್ಥಿತರಿದ್ದರು,ಸಂಜೆ ಪ್ರಭ ಪತ್ರಿಕೆ ಪ್ರಧಾನ ಸಂಪದಕರಾದ ವೆಂಕಟೇಶ್ ಪೈ ಸ್ವಾಗತಿಸಿದರು, ಸತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು

Comments are closed.