ಕರಾವಳಿ

ಕುಂದಾಪುರ ಫ್ಲೈ ಓವರ್ ಎಪ್ರಿಲ್ ತಿಂಗಳಿನಲ್ಲಿ ಲೋಕಾರ್ಪಣೆ: ಸಂಸದೆ ಶೋಭಾ ಕರಂದ್ಲಾಜೆ

Pinterest LinkedIn Tumblr

ಕುಂದಾಪುರ: ಇದೇ ಬರುವ ಎಪ್ರಿಲ್ ತಿಂಗಳಲ್ಲಿ ಕುಂದಾಪುರ ಶಾಸ್ತ್ರಿ ವೃತ್ತದಲ್ಲಿ ನಿರ್ಮಾಣವಾಗುತ್ತಿರುವ ಪ್ಲೈ ಓವರ್ ಸಂಚಾರ ಮುಕ್ತವಾಗಲಿದೆ. ಹಲವಾರು ಸಭೆ, ಚರ್ಚೆ, ಟೋಲ್ ಬಂದ್ ಎಚ್ಚರಿಕೆ ನಂತರ ಕಾಮಗಾರಿಗೆ ವೇಗ ಸಿಕ್ಕಿದ್ದು, ಕಾಮಗಾರಿ ಪೂರ್ಣಗೊಳ್ಳವ ಹಂತಕ್ಕೆ ಬಂದಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಪ್ಲೇ ಓವರ್ ಕಾಮಗಾರಿ ಮುಗಿಸಿ ಆದಷ್ಟು ಶೀಘ್ರ ಸಂಚಾರಕ್ಕೆ ಬಿಟ್ಟುಕೊಡುವಂತೆ ಒತ್ತಾಯ, ಮಾಡಿದ್ದಲ್ಲದೆ, ಕುಂದಾಪುರದಲ್ಲಿ ಡಿಸಿ ಜೊತೆ ನಡೆಸಿದ ಸಭೆಯಲ್ಲಿ ಏಪ್ರಿಲ್ ತಿಂಗಳೊಳಗೆ ಸಂಚಾರಕ್ಕೆ ಬಿಟ್ಟುಕೊಡಬೇಕು ಇಲ್ಲದಿದ್ದರೆ ಟೋಲ್ ನಿರಾಕರಣೆ ಮೂಲಕ ಪ್ರತಿಭಟನೆ ಎಚ್ಚರಿಕೆ ನೀಡಲಾಗಿತ್ತು. ಪ್ರಸಕ್ತ ಕಾಮಗಾರಿ ವೇಗ ಪಡೆದುಕೊಂಡಿದ್ದು, ಎಪ್ರಿಲ್ ತಿಂಗಳಲ್ಲಿ ಸಂಚಾರಕ್ಕೆ ಬಿಟ್ಟುಕೊಡುವುದಾಗಿ ಕಂಪನಿ ಇಂಜಿನಿಯರ್ ಭರವಸೆ ನೀಡಿದ್ದಾರೆ ಎಂದು ಶುಕ್ರವಾರ ಪ್ಲೇ ಓವರ್ ಕಾಮಗಾರಿ ವೀಕ್ಷಣೆ ನಡೆಸಿ ಸುದ್ದಿಗಾರರಿಗೆ ತಿಳಿಸಿದರು.

ಬೆಂಗಳೂರಿಂದ ಕಾರವಾರಕ್ಕೆ ಮಂಜೂರಾದ ಹೊಸ ರೈಲ್ ಹಾಗೂ ಹಿಂದಿನ ಓಡುತ್ತಿದ್ದ ರೈಲು ಪಡೀಲ್ ಮೂಲಕ ಕುಂದಾಪುರ ಕಾರವಾರಕ್ಕೆ ಹೋಗುವಂತೆ ಮಾಡಲು ರೈಲ್ವೆ ಸಚಿವರ ಜೊತೆ ಮಾತನಾಡಿದ್ದು, ಎರಡೂ ರೈಲು ವಾರದಲ್ಲಿ ಏಳುದಿನವೂ ಓಡುವಂತೆ ಕೇಳಿಕೊಳ್ಳಲಾಗಿದೆ. ರೈಲು ಮಂಗಳೂರು ಸ್ಟೇಶನ್ನಿಗೆ ಹೋಗಿ ಬರುವುದರಿಂದ ಸಮಯ ವ್ಯಯವಾಗುವುದರಿಂದ ಪ್ರಯಾಣಿಕರಿಗೂ ಸಮಸ್ಯೆ ಆಗುತ್ತದೆ. ರೈಲು ಪೇಟೆ ಒಳಗಡೆ ಹೋಗುವುದರಿಂದ ಮಂಗಳೂರು ನಗರಕ್ಕೆ ಏನೂ ಪ್ರಯೋಜನವಿಲ್ಲ. ರೈಲ್ ಮಂಗಳೂರು ಸ್ಟೇಶನ್‌ಗೆ ಬರಬೇಕೆಂದು ಒತ್ತಾಯಿಸದಂತೆ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಕೇಳಿಕೊಂಡಿದ್ದು, ಅವರು ಅದಕ್ಕೆ ಸಮ್ಮತಿ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಹಿಂದೆ ಬರುತ್ತಿದ್ದ ಹಳೇ ರೈಲ್ ಸ್ವಲ್ಪ ದಿನ ಮೈಸೂರಿಂದ ಹಾಗೂ ನಾಲ್ಕು ದಿನ ಕುಣಿಗಲ್ ಮೂಲಕ ಬರುವ ಟ್ರೈನ್ ಟ್ರ್ಯಾಕ್ ಬದಲಾಯಿಸಿ ವಾರದಲ್ಲಿ ಏಳು ದಿನ ಓಡಿಸುವುದರಿಂದ ಹೆಚ್ಚಿನ ಅನುಕೂಲವಾಗಲಿದೆ. ಹೊಸ ರೈಲ್ ಕೂಡಾ ವಾರದಲ್ಲಿ ಎಳುದಿನ ಓಡಬೇಕು. ಬೆಂಗಳೂರಿಂದ ೮ ಗಂಟೆ ಒಳಗೆ ರೈಲ್ ಉಡುಪಿಗೆ ಬಂದರೆ ಹೆಚ್ಚಿನ ಪ್ರಯೋಜನೆ ಇದೆ. ಕುಂದಾಪುರ ಭಾಗದ ಹೆಚ್ಚಿನ ಜನ ಬೆಂಗಳೂರು ಬಾಂಬೆಯಲ್ಲಿ ಇರುವುದರಿಂದ ಅನುಕೂಲವಾಗುತ್ತದೆ. ಸಮಯ ಹೊಂದಾಣಿಕೆಯಿಲ್ಲದ ರೈಲ್ ಓಡಿದರೆ ಪ್ರಯೋಜನಕ್ಕೆ ಬರುವುದಿಲ್ಲ ಎಂಬ ಸಂಗತಿ ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ಮನದಟ್ಟು ಮಾಡಲಾಗಿದೆ ಎಂದು ತಿಳಿಸಿದರು.

ಬೆಂಗಳೂರು ಕಾರವಾರ ಸಂಚಾರಿ ರೈಲ್ ಸಿದ್ದವಾಗಿದ್ದು, ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಉದ್ಘಾಟನೆ ದಿನ ನಿಗದಿ ಮಾಡಲಾಗಿಲ್ಲ. ರೈಲ್ವೆ ಸಚಿವ ಜೊತೆ ಮಾತನಾಡಿ, ಆದಷ್ಟು ಬೇಗ ರೈಲ್ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಕೊಡಲಾಗುತ್ತದೆ, ಸ್ಥಳೀಯಾಡಳಿತ ಅಧ್ಯಕ್ಷ, ಉಪಾಧ್ಯಕ್ಷ ಮೀಸಲು ವಿರುದ್ಧ ಕೋರ್ಟಿಗೆ ಹೋಗಿದ್ದರಿಂದ ಸರ್ಕಾರ ನ್ಯಾಯಾಲಯದ ರಿಟ್ ತೆರವಿಗೆ ಮುಂದಾಗಿದ್ದು, ಸಧ್ಯದಲ್ಲೇ ಸ್ಥಳೀಯ ಆಡಳಿತ ಮೀಸಲು ಗೊಂದಲ ಪರಿಹಾರವಾಗಿ ಅಧ್ಯಕ್ಷ, ಉಪಾಧ್ಯಕ್ಷರ ನೇಮಕ ದಾರಿ ಸುಗಮವಾಗಲಿದೆ ಎಂದು ಹೇಳಿದರು.

ಹಿಂದೆ ಬೆಂಗಳೂರು ಕಾರವಾರ ಮಾರ್ಗದಲ್ಲಿ ಸಂಚರಿಸುವ ರೈಲ್ ಇದ್ದು, ಅದು ಮಂಗಳೂರು ಸ್ಟೇಷನ್‌ಗೆ ಹೋಗಿ ಬರುತ್ತಿದ್ದರಿಂದ ಕುಂದಾಪುರ ಕಾರವಾರ ಭಾಗದ ಜನರಿಗೆ ಸಮಸ್ಯೆ ಆಗಿತ್ತು. ರೈಲ್ವೆ ಸಮಿತಿ ಮಂಗಳೂರು ನಗರದೊಳಗೆ ರೈಲ್ ಹೋಗದೆ ಪಡೀಲ್ ಮೂಲಕ ನೇರ ಬರುವಂತೆ ಒತ್ತಾಯಿಸಿದ್ದರು. ಇದಕ್ಕೆ ಮಂಗಳೂರು ನಾಗರಿಕರು ನಮ್ಮ ರೈಲ್ ತಂಟೆಗೆ ಬರಬೇಡಿ ಎಂದು ಹೇಳಿದ್ದರು. ಇದಕ್ಕೆ ಸದರನ್ ರೈಲ್ವೆ ಹೊಸ ರೈಲ್ ಮಂಜೂರು ಮಾಡಿದ್ದು, ಎಲ್ಲವೂ ಸಿದ್ದವಾಗಿ ಉದ್ಘಾಟನೆಯೊಂದೇ ಬಾಕಿಯಿದೆ. ಈ ರೈಲು ಮಂಗಳೂರು ಸ್ಟೇಶನ್ನಿಗೆ ಹೋಗದೆ ಪಡೀಲ್ ಮೂಲಕ ಬರಬೇಕು ಎನ್ನೋದು ಸಮಿತಿ ಒತ್ತಾಯ.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕಿರಣ್‌ ಕೊಡ್ಗಿ, ಜಿಲ್ಲಾ ಪಂಚಾಯತ್‌ ಸದಸ್ಯೆ ಶ್ರೀಲತಾ ಸುರೇಶ್‌ ಶೆಟ್ಟಿ, ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಸುರೇಶ್‌ ಶೆಟ್ಟಿ ಕಾಡೂರು, ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್‌ ಶೆಟ್ಟಿ ಬೀಜಾಡಿ, ಸತೀಶ್‌ ಪೂಜಾರಿ, ಮಾಜಿ ಪ್ರಧಾನ ಕಾರ್ಯದರ್ಶಿ ಭಾಸ್ಕರ ಬಿಲ್ಲವ, ಪುರಸಭೆ ಸದಸ್ಯರಾದ ಮೋಹನದಾಸ ಶೆಣೈ, ರಾಘವೇಂದ್ರ ಖಾರ್ವಿ, ಸಂದೀಪ ಖಾರ್ವಿ, ಶ್ವೇತಾ ಸಂತೋಷ್‌, ವೀಣಾ ಭಾಸ್ಕರ ಮೆಂಡನ್‌, ವನಿತಾ ಎಸ್‌. ಬಿಲ್ಲವ, ಸಂತೋಷ್‌ ಕುಮಾರ್‌ ಶೆಟ್ಟಿ, ಪ್ರೇಮಲತಾ, ಅಶ್ವಿ‌ನಿ ಪ್ರದೀಪ್‌, ಮಾಜಿ ಸದಸ್ಯರಾದ ವಿಜಯ್‌ ಎಸ್‌. ಪೂಜಾರಿ, ಸತೀಶ್‌ ಶೆಟ್ಟಿ, ವಸಂತಿ ಸಾರಂಗ, ಗುಣರತ್ನಾ, ಪುಷ್ಪಾ ಶೇಟ್‌, ಮುಖಂಡರಾದ ಕುತ್ಯಾರು ನವೀನ್‌ ಶೆಟ್ಟಿ, ಉದಯ ಕುಮಾರ್‌ ಶೆಟ್ಟಿ ಉಡುಪಿ, ಗೋಪಾಲ ಕಳಂಜಿ, ಸಂಗೀತಾ, ದಿವಾಕರ ಕಡ್ಗಿ, ಸದಾನಂದ ಬಳ್ಕೂರು, ವಿನೋದ್‌ರಾಜ್‌ ಪೂಜಾರಿ, ರೈಲ್ವೇ ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಗಣೇಶ್‌ ಪುತ್ರನ್‌, ವಿವೇಕ್‌ ನಾಯಕ್‌, ಪ್ರವೀಣ್‌ ಕುಮಾರ್‌ ಮೊದಲಾದವರು ಉಪಸ್ಥಿತರಿದ್ದರು.

Comments are closed.