ಕರಾವಳಿ

ಅಕ್ಷರ ಜ್ಞಾನದ ಜೊತೆಗೆ ವ್ಯವಹಾರ ಜ್ಞಾನವು ಪ್ರಾಮುಖ್ಯ: ಡಾ. ಡಿ. ವೀರೇಂದ್ರ ಹೆಗ್ಗಡೆ(Video)

Pinterest LinkedIn Tumblr

ಕುಂದಾಪುರ: ಶಾಲೆಗೆ ಹೋಗಿಲ್ಲ..ಅಕ್ಷರ ಜ್ಞಾನವಿಲ್ಲ.. ದಡ್ಡ ಹೆಡ್ಡಿ ಎನ್ನುವ ಕಾಲವಿದಲ್ಲ. ಎಲ್ಲಾ ಕಡೆ ಎಲ್ಲರಲ್ಲೂ ಬದಲಾವಣೆಯಾಗಿದೆ. ಶಾಲೆಗೆ ಹೋಗಿ ಅಕ್ಷರ ಕಲಿತ ಮಾತ್ರಕ್ಕೆ ಸುಶಿಕ್ಷತರಲ್ಲ. ತಮ್ಮ ವ್ಯವಹಾರ ನಿರ್ವಯಿಸುವ, ಹಣಗಳಿಸುವ, ಉಳಿಸುವ, ಹಣ ಲೆಕ್ಕಾಚರ, ಬ್ಯಾಂಕ್ ವ್ಯವಹಾರ ನಿರಾಯಾಸವಾಗಿ ಮಾಡುವ ವ್ಯವಹಾರ ಜ್ಞಾನ ಇರುವವರು ಹೆಡ್ಡರೂ ಅಲ್ಲಾ ..ದಡ್ಡರೂ ಅಲ್ಲಾ ಅವರು ಸುಶಿಕ್ಷಿತರು…ಹೀಗೆ ಬಣ್ಣಿಸಿದವರು ಧರ್ಮಸ್ಥಳ ಧರ್ಮಾಧಿಕಾರಿ ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಕುಂದಾಪುರ ಬೈಂದೂರು, ಪ್ರಗತಿಬಂಧುಗಳ ಸ್ವಸಾಯ ಸಂಘಗಳ ಒಕ್ಕೂಟ ಆಶ್ರಯದಲ್ಲಿ ತಲ್ಲೂರು ಶ್ರೀ ಶೇಷಕೃಷ್ಣ ಕನ್ವೆನ್ಷ್‌ನ್ ಹಾಲ್‌ನಲ್ಲಿ ಬುಧವಾರ ನಡೆದ ಪದಗ್ರಹಣ, ದ್ವಿಚಕ್ರ ಮತ್ತು ಆಟೋ ರಿಕ್ಷಾಗಳ ವಿತರಣೆ, ಪ್ರೇರಣಾ ಶಿಬಿರ ಉದ್ಘಾಟಿಸಿ ಮಾತನಾಡುತ್ತಿದ್ದರು.

ಅನೇಕ ರೀತಿಯ ಪರಿವರ್ತನೆ ಆಗುವ ಜೊತೆ ಸದಸ್ಯರು ಬೆಳೆಯಬೇಕು, ವ್ಯವಹಾರ ಜ್ಞಾನ, ಚಾಕಚಖ್ಯತೆ, ಗಳಿಕೆ, ಉಳಿಕೆ ಮಾಡಬೇಕು. ಎಷ್ಟೋ ಮಹಿಳೆಯರು ಶಾಲೆಗೆ ಹೋಗದೆ, ಶಿಕ್ಷಣ ಪಡೆದಿರುವುದಿಲ್ಲ. ಓದಿದವರು ಬುದ್ದಿವಂತೆ ಓದದವರು ದಡ್ಡಿ ದಡ್ಡಿ ಎನ್ನುವ ಕಾಲ ಹೋಗಿದೆ. ವ್ಯವಹಾರದ ಜ್ಞಾನ ತಳಿದುಕೊಂಡರೆ, ಸಂಪಾದನೆ ಮಾಡುವ ಕೆಲಸ ಮಾಡಿದರೆ, ಉಳಿತಾಯ, ಬಂಡವಾಳ ತಂದರೆ ಯಶಸ್ಸು ಆಗುತ್ತದೆ. ಈ ಬೆಳವಣಿಗೆ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಮಾಡುತ್ತದೆ ಎಂದರು.

ಕುಂದಾಪುರ ತಾಪಂ ಅಧ್ಯಕ್ಷತೆ ಶ್ಯಾಮಲಾ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ, ಜಿಪಂ ಸದಸ್ಯೆ ಜ್ಯೋತಿ ಎಂ.ನಾಯ್ಕ್, ತಾಪಂ ಸದಸ್ಯರಾದ ರಾಜು ದೇವಾಡಿಗ, ಕರಣ ಪೂಜಾರಿ, ತಲ್ಲೂರು ಗ್ರಾಪಂ ಅಧ್ಯಕ್ಷ ಆನಂದ ಬಿಲ್ಲವ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಜೇಶ್ ಕಾರಂತ, ಅಖಿಲ ಕರ್ನಾಟಕ ಜಿಲ್ಲಾ ವೇದಿಕೆ ಅಧ್ಯಕ್ಷ ನವೀನ್ ಅಮೀನ್ ಶಂಕರಾಪುರ, ಶ್ರೀ ಶೇಷಶಯನ ಕನ್ವೆನ್ಷನ್ ಹಾಲ್ ಮಾಲೀಕ ಶ್ರೀನಿವಾಸ ಉಳ್ಳೂರು, ಪಾರ್ವತಿ ಎಸ್.ಉಳ್ಳೂರು, ಉಡುಪಿ ತಾಪಂ ಮಾಜಿ ಅಧ್ಯಕ್ಷ ದೇವದಾಸ್ ಹೆಬ್ಬಾರ್, ಶೋಭಾಚಂದ್ರ ಇದ್ದರು.

ವಿವಿಧ ಒಕ್ಕೂಟ ಸದಸ್ಯರು ಡಾ.ವೀರೇಂದ್ರ ಹೆಗ್ಗಡೆ ಅವರು ಗೌರವಿಸಿದರು. ಜನಜಾಗೃತಿ ವೇದಿಕೆ ನಿರ್ಗಮಿತ ಅಧ್ಯಕ್ಷ ಅಪ್ಪಣ್ಣ ಹೆಗ್ಡೆ ಅವರ ಸನ್ಮಾನಿಸಲಾಯಿತು. ಸಿ‌ಎ ಪೌಂಡೇಶನ್ ಪರೀಕ್ಷೆಯಲ್ಲಿ ೨೧ನೇ ರ್‍ಯಾಂಕ್ ಪಡೆದ ಒಕ್ಕೂಟ ಅಧ್ಯಕ್ಷೆ ಮಗಳು ವೈಷ್ಣವಿ ಅವರ ಸನ್ಮಾನಿಸಲಾಯಿತು. ಕುಂದಾಪುರ ಬೈಂದೂರು ವೇದಿಕೆ ಪದಾಧಿಕಾರಿಗಳಿಗೆ ಪದಗ್ರಹಣ ಮಾಡಲಾಯಿತು.
ತಲ್ಲೂರು ವೈಷ್ಣವಿ ಆಚಾರ್ಯ ಪ್ರಾರ್ಥಿಸಿದರು. ಜಿಲ್ಲಾ ನಿರ್ದೇಶಕ ಗಣೆಶ್ ಸ್ವಾಗತಿಸಿದರು. ಕೃಷಿ ಅಧಿಕಾರಿ ಚೇತನ್ ಕುಮಾರ್ ಮತ್ತು ಬೈಂದೂರು ಮೇಲ್ವಿಚಾರಕಿ ಪ್ರೇಮಾ ನಿರೂಪಿಸಿದರು. ಆರ್.ನವೀನ್‌ಚಂದ್ರ ವಂದಿಸಿದರು. ಕರುಣಾಕರ ಜೂನ್ ಸಂಪನ್ಮೂಲ ವ್ಯಕ್ತಿಯಾಗಿದ್ದರು.

ಮಗು ಪರಾವಲಂಭಿಯಾಗಿದ್ದು, ಎರಡು ಮೂರು ವರ್ಷದ ನಂತರ ಮಗುವಿಗೆ ಅಜ್ಜ‌ಅಜ್ಜಿ ಆಶ್ರಯ ಬೇಕಾಗುತ್ತದೆ. ಶಾಲೆಗೆ ಹೋಗಲು ಆರಂಭಿಸಿದಾಗ ಅಲ್ಪಸ್ವಲ್ಪ ಅಕ್ಕಪಕ್ಕದವರ ಪ್ರೀತಿಸಲು ಆರಂಭಿಸುತ್ತದೆ. ಎಸ್ಸೆ‌ಎಲ್ಸಿಗೆ ಬಂದ ನಂತರ ಓದು ಇನ್ನಿತರ ಸಲಹೆ ನೀಡುವುದರಿಂದ ತಾಯಿ ತಂದೆ ಮೇಲೆ ಸಿಟ್ಟು ಬರುತ್ತದೆ. ಚಡ್ಡಿಹೋಗಿ ಪ್ಯಾಂಟ್ ಬಂದು ನಂತರ ಸ್ವತಂತ್ರವಾಗಿ ಬದುಕಲ ಬಯಸುತ್ತಾರೆ. ಬಯಕೆ, ಕಾಮನೆಗಳು ಹುಟ್ಟುತ್ತವೆ. ದುಡಿಮೆ ವಯಸ್ಸಲ್ಲ ಮದುವೆ ಮಕ್ಕಳು ಮನೆ ಕಟ್ಟಬೇಕು ಎನ್ನುವ ಆಸೆ ಹುಟ್ಟುತ್ತದೆ. ಮನುಷ್ಯರ ಅರವತ್ತರಿಂದ ಅರವತ್ತೈದು ವಯಸ್ಸಲ್ಲಿ ಪ್ರತಿಯೊಬ್ಬರಲ್ಲೂ ಬರುವ ಬದಲಾವಣೆ ಗ್ರಾಮೀಣ ಅಭಿವೃದ್ಧಿ ಯೋಜನೆ ಗುರುತಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಯೋಜನೆಗಳ ಚೆನ್ನಾಗಿ ತೊಡಗಸಿಸಿಕೊಂಡು ಸಣ್ಣ ಮಗು ದೊಡ್ಡದಾದ ಹಾಗೆ ಚಿಂತನೆ, ಭಾವನೆ, ಜೀವನ ಶೈಲಿ ಬದಲಿಸುವ, ನಾವು ಸ್ವತಂತ್ರ ಜೀವನ ಮಾಡುವಾಗ ಆಹಾರ ವಿಹಾರ, ಸ್ನೇಹಿತರು, ವ್ಯವಹಾರ ಮಾಡುವಾಗ ಎಚ್ಚರಿಕೆ ವಹಿಸಬೇಕಾಗುತ್ತದೆ. ಯಶಸ್ಸು ನೆಮ್ಮದಿ, ಸಂತೋಷ ಜೀವನ ಸಿಗಬೇಕಿದ್ದರೆ ಶಿಸ್ತು ಮುಖ್ಯವಾಗಿದ್ದು, ಗ್ರಾಮೀಣ ಅಭಿವೃದ್ಧಿ ಮೂಲಕ ಎಚ್ಚರಿಸುವ ಬೆಳೆಸುವ ಕೆಲಸ ಮಾಡುತ್ತಿದೆ.
ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ, ಧರ್ಮಸ್ಥಳ

ಐವತ್ತರ ದಶಕದಲ್ಲೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಮೂಲಕ ಹೆಚ್ಚಿನ ಜನ ಸಂಪರ್ಕ ಸಿಕ್ಕದಲ್ಲದೆ, ಹೆಚ್ಚಿನ ಸೇವೆ ಮಾಡಲು ಅವಕಾಶ ಸಿಕ್ಕಿದೆ. ಜಿಲ್ಲೆಯ ಹದಿನೆಂಟು ಸಾವಿರ ಕುಟುಂಬದಲ್ಲಿ ೮ ಸಾವಿರ ಕುಟುಂಬ ಮಧ್ಯವ್ಯವಸನದಿಂದ ವಿಮುಖರಾಗಿದ್ದು, ಗ್ರಾಮೀಣ ಅಭಿವೃದ್ಧಿ ಸಾಮಾಜಿಕ ಕೆಲಸಕ್ಕೆ ಕನ್ನಡಿ. ಕುಂದಾಪುರ ನಾಗರಿಕರು ಧರ್ಮಸ್ಥಳದಲ್ಲಿ ಇಲ್ಲದ ದಿನವಿಲ್ಲ. ಇದಕ್ಕೆ ಧರ್ಮಸ್ಥಳಕ್ಕೂ ಕುಂದಾಪುರಕ್ಕೆ ಇರುವ ನಂಟಿನ ಪ್ರತೀಕ. ಬೇರೆ ಬೇರೆ ವ್ಯವಸ್ಥೆಗಳಿದ್ದರೂ ಅದರ ಸೌಲತ್ತು, ತುತ್ತು ಸಿಗದ ಕಾಲದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಸ್ತ್ರೀಯರು ಸ್ವಂತ ಕಾಲಿನ ಮೇಲೆ ನಿಲ್ಲವಂತೆ ಮಾಡಿ, ಆರ್ಥಕ ಸ್ವಾವಲಂಭಿ ಜೀವನಕ್ಕೆ ದಾರಿಮಾಡಿಕೊಟ್ಟಿದ್ದು, ನಮ್ಮ ಊಟದ ಬಟ್ಟಲು ನಮಗೆ ಉಳಿಸಕೊಟ್ಟಿದ್ದಲ್ಲದೆ, ಮುಂದಿನ ತಲೆ ಮಾರಿಗೂ ವಿಸ್ತರಿಸಿದ ಕೆಲಸ ಗ್ರಾಮೀಣ ಅಭಿವರದ್ದಿಯಿಂದ ಆಗಿದೆ.
ಬಿ.ಅಪ್ಪಣ್ಣ ಹೆಗ್ಡೆ, ಗೌರವಾಧ್ಯಕ್ಷ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕುಂದಾಪುರ ತಾಲೂಕು.

Comments are closed.