ಕರಾವಳಿ

ಮಹಾತ್ಮ ಗಾಂಧಿ ಹುತಾತ್ಮರಾದ ದಿನದ ನೆನಪಿಗಾಗಿ ಮಹಿಳೆಯರಿಂದ ಮಾನವ ಸರಪಳಿ:ಹಿಂಸೆಯ ವಿರುದ್ಧ ಐಕ್ಯತೆಯ ಸಂದೇಶ

Pinterest LinkedIn Tumblr

ಮಂಗಳೂರು, ಜನವರಿ.31: ‘ವಿ ದಿ ಪೀಪಲ್’ ಸಂಘಟನೆಯ ವತಿಯಿಂದ ಮಹಾತ್ಮ ಗಾಂಧಿ ಹುತಾತ್ಮರಾದ ದಿನದ ನೆನಪಿನೊಂದಿಗೆ ಸಂವಿಧಾನ ರಕ್ಷಣೆಯ ಸಲುವಾಗಿ ಗುರುವಾರ ನೂರಾರು ಮಹಿಳೆಯರು, ವಿದ್ಯಾರ್ಥಿಗಳು ನಗರದ ಆರ್‌ಟಿಒ ಕಚೇರಿಯಿಂದ ವೆನ್ಲಾಕ್ ಆಸ್ಪತ್ರೆಯವರೆಗೆ ಮಾನವ ಸರಪಳಿ ನಡೆಸಿದರು.

ಗಾಂಧಿ ಹುತಾತ್ಮರಾಗಿ 72 ವರ್ಷಗಳಾಗುತ್ತಾ ಬಂದಿದೆ. ಬಳಿಕ ಅವರ ಆಶಯಗಳಿಂದ ದೂರ ಸರಿದಿರುವ ವಿಷಾದದ ಜತೆಗೆ ಗಾಂಧಿ ಹಂತಕ ಗೋಡ್ಸೆಯನ್ನು ಮೆಚ್ಚಿಕೊಳ್ಳುವವರು ಜನಪ್ರತಿನಿಧಿಗಳಾಗಿ ಆಯ್ಕೆಯಾಗುತ್ತಿರುವುದು ಆತಂಕದ ಬೆಳವಣಿಗೆಯಾಗಿದೆ. ಹಾಗಾಗಿ ಗಾಂಧಿ ಹಾಗೂ ಸಂವಿಧಾನದ ಬಗ್ಗೆ ಈ ತಲೆಮಾರಿಗೆ ಅರ್ಥ ಮಾಡಿಸುವ ನಿಟ್ಟಿನಲ್ಲಿ ಗಾಂಧೀಜಿ ಹತ್ಯೆಯಾದ ಕ್ಷಣ (ಸಂಜೆ 5:17)ಮಾನವ ಸರಪಳಿ ನಡೆಸಲಾಯಿತು. ಆ ಮೂಲಕ ಹಿಂಸೆಯ ವಿರುದ್ಧ ಐಕ್ಯತೆಯ ಸಂದೇಶ ಸಾರಲಾಯಿತು. ಈ ಸಂದರ್ಭ ರಾಷ್ಟ್ರಗೀತೆ ಹಾಡಲಾಯಿತು.

Comments are closed.