ಕರಾವಳಿ

ಡಿಜಿಟಲ್ ಗ್ರಂಥಾಲಯಕ್ಕೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಚಾಲನೆ

Pinterest LinkedIn Tumblr

ಉಡುಪಿ: ಡಿಜಿಟಲ್ ಗ್ರಂಥಾಲಯ ಸೇವೆಯನ್ನು ಸಾರ್ವಜನಿಕರು ಬಳಸಿಕೊಳ್ಳಬೇಕು. ಓದುಗರಿಗೆ ಇದರಿಂದ ಉಪಯುಕ್ತವಾಗಲಿದೆ ಎಂದು ಜಿಲ್ಲಾಧಿಕಾರಿ ಜಿ,ಜಗದೀಶ್ ಹೇಳಿದರು. ಅವರು ಗುರುವಾರ, ಸಾರ್ವಜನಿಕ ಗ್ರಂಥಾಲಯ ಇಲಾಖೆ, ನಗರ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯ ಉಡುಪಿ ಇದರ ವತಿಯಿಂದ ಹಮ್ಮಿಕೊಳ್ಳಲಾದ ಡಿಜಿಟಲ್ ಗ್ರಂಥಾಲಯಕ್ಕೆ ಚಾಲನೆಯನ್ನು ನೀಡಿ, ಮಾತನಾಡಿದರು.

ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಮಾನ್ಯ ನಿರ್ದೇಶಕ ಡಾ.ಸತೀಶ್ ಕುಮಾರ್ ಎಸ್.ಹೊಸಮನಿ ಮಾತನಾಡಿ, ದೇಶದಲ್ಲಿಯೇ ಡಿಜಿಟಲ್ ಗ್ರಂಥಾಲಯದ ಸೇವೆಯನ್ನು ಮೊದಲು ಕರ್ನಾಟಕದ ಗ್ರಂಥಾಲಯಗಳಲ್ಲಿ ಆರಂಭಿಸಿರುವುದು ಹೆಮ್ಮೆಯ ವಿಷಯ. ಸಾರ್ವಜನಿಕ ಗ್ರಂಥಾಲಯಗಳು ಸಾರ್ವಜನಿಕರಿಗೆ ಪುಸ್ತಕ ಓದಲು ಅತ್ಯಾಧುನಿಕವಾದ ಅವಕಾಶ ಕಲ್ಪಿಸಿಕೊಟ್ಟಿದೆ. ಸುಮಾರು 79,000 ಡಿಜಿಟಲ್ ಪೋರ್ಟಲ್ ಲಭ್ಯವಿದ್ದು, ಕನ್ನಡ ಮತ್ತು ಇಂಗ್ಲೀಷ್ ಭಾಷೆಯ ಸುಮಾರು 5,000 ಕ್ಕಿಂತಲೂ ಹೆಚ್ಚಾಗಿ ನಿಯತಕಾಲಿಕೆಗಳು, ಇಂಟರ್ ನ್ಯಾಷ್‍ನಲ್ ಜನರಲ್, ವಿಡೀಯೋ ತುಣುಕುಗಳು ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಬೇಕಾದಂತಹ ಪಠ್ಯ ಪುಸ್ತಕಗಳನ್ನು ಉಚಿತವಾಗಿ ಓದಬಹುದು ಎಂದರು. ನಮ್ಮ ಕರ್ನಾಟಕದ ಸಾರ್ವಜನಿಕ ಗ್ರಂಥಾಲಯಗಳು ಮಾದರಿ ಗ್ರಂಥಾಲಯಗಳು, ಡಿಜಿಟಲ್ ಸಾಫ್ಟ್‍ವೇರ್‍ನ್ನು ಬಳಸಿಕೊಂಡು ಡಿಜಿಟಲ್ ಪೋರ್ಟ್‍ನಲ್ಲಿ ಯುಸರ್ ಐಡಿ ಬಳಸಿಕೊಂಡು ಉಚಿತವಾಗಿ ಪುಸ್ತಕಗಳನ್ನು ಓದಬಹುದು. ಡಿಜಿಟಲ್ ಗ್ರಂಥಾಲಯಕ್ಕೆ ಬೇಕಾದ 2 ಸಿಸ್ಟಮ್ ಮತ್ತು 2 ಟ್ಯಾಬ್‍ಗಳನ್ನು ಜಿಲ್ಲೆ, ತಾಲೂಕು, ನಗರದ ಗ್ರಂಥಾಲಯಗಳಿಗೆ ನೀಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಐ.ಜಿ, ಉಡುಪಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಸಹ ಗ್ರಂಥಪಾಲಕಿ ವನಿತಾ ಕೆ, ಸಾರ್ವಜನಿಕ ಗ್ರಂಥಾಲಯ ಇಲಾಖೆ ಮತ್ತು ನಗರ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯದ ಕಛೇರಿ ಸಿಬ್ಬಂದಿಗಳು ಹಾಜರಿದ್ದರು.

Comments are closed.