ಕರಾವಳಿ

‘ನನಗೆ ಫೋನ್ ಕರೆ ಮಾಡಬೇಡಿ’- ಮನೆಯವರಿಗೆ ಹೇಳಿ ಕಾಣೆಯಾದ ವ್ಯಕ್ತಿ

Pinterest LinkedIn Tumblr

ಉಡುಪಿ: ಕಾಪು ಮಲ್ಲಾರು ಗ್ರಾಮದ ಕೊಂಬಗುಡ್ಡೆ ಅನಂತ ಆಚಾರ್ಯ ರಸ್ತೆಯ ನಿವಾಸಿ ಸುರೇಶ್ ದೇವಾಡಿಗ (55) ಎಂಬುವವರು ಬೆಂಗಳೂರಿನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದು, 4 ತಿಂಗಳಿಗೊಮ್ಮೆ ಊರಿಗೆ ಬಂದು ಹೋಗುತ್ತಿದ್ದರು.

ಆದರೆ ಮೇ 8 ರಂದು ಕೆಲಸದ ಬಗ್ಗೆ ಬೆಂಗಳೂರಿಗೆ ಹೋಗಿದ್ದು, ಜುಲೈ 15 ರಂದು ಅಪರಿಚಿತ ವ್ಯಕ್ತಿಯ ಫೋನ್‍ನಿಂದ ಕರೆ ಮಾಡಿ ನನಗೆ ಕೆಲಸ ಸಿಗಲಿಲ್ಲ, ಕೆಲಸ ಹುಡುಕುತ್ತಾ ಇದ್ದೇನೆ, ಈ ನಂಬರಿಗೆ ಪೋನ್ ಮಾಡಬೇಡಿ, ರಸ್ತೆಯಲ್ಲಿ ಹೋಗುವವರ ಫೋನ್ ಇದು ಎಂದು ಹೇಳಿ ಫೋನ್ ಕರೆ ಕಟ್ ಮಾಡಿದ್ದು, ಇದುವರೆಗೂ ಫೋನ್ ಮಾಡದೇ, ಮನೆಗೂ ಬಾರದೇ ಕಾಣೆಯಾಗಿರುತ್ತಾರೆ.

ಚಹರೆ: 5 ಅಡಿ 6 ಇಂಚು ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ತುಳು, ಕನ್ನಡ, ಮರಾಠಿ, ಹಿಂದಿ ಭಾಷೆ ಬಲ್ಲವರಾಗಿದ್ದು, ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾಪು ಪೊಲೀಸ್ ಠಾಣೆ ದೂ.ಸಂಖ್ಯೆ: 0820-2551033, ಮೊ.ನಂ: 9480805449 ನ್ನು ಸಂಪರ್ಕಿಸುವಂತೆ ಕಾಪು ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Comments are closed.