ಕರಾವಳಿ

ಮಂಗಳೂರು : ಕರಾವಳಿ ಉತ್ಸವದಲ್ಲಿ ಇಂದಿನ ಕಾರ್ಯಕ್ರಮಗಳು

Pinterest LinkedIn Tumblr

ಮಂಗಳೂರು,ಜನವರಿ.14  : ಕರಾವಳಿ ಉತ್ಸವದಲ್ಲಿ ಜನವರಿ 14 ರಂದು ನಡೆಯಲಿರುವ ಕಾರ್ಯಕ್ರಮಗಳು ಇಂತಿವೆ.

ಜನವರಿ 14 ರಂದು ಕದ್ರಿ ಉದ್ಯಾನವನದಲ್ಲಿ: ಸಂಜೆ 6 ಗಂಟೆಯಿಂದ 7.30 ರವರೆಗೆ ಮಧುಶ್ರೀ ನಾರಾಯಣ್, ತಿರುವನಂತಪುರ ಮತ್ತು ತಂಡದಿಂದ ಹಿಂದೂಸ್ತಾನೀ ಶಾಸ್ತ್ರೀಯ ಗಾಯನ, ಠುಮ್ರಿ ಹಾಗೂ ಹಿಂದೀ ಭಜನೆಗಳು, ಸಂಜೆ 7.30 ರಿಂದ 9 ಗಂಟೆವರೆಗೆ ಸತೀಶ್ ಶೆಟ್ಟಿ ಪಟ್ಲ ಮತ್ತು ತಂಡದಿಂದಯಕ್ಷಗಾನ ತಾಳಮದ್ದಳೆ –ತೆಂಕುತಿಟ್ಟು ನಡೆಯಲಿದೆ.

ವಸ್ತು ಪ್ರದರ್ಶನ ವೇದಿಕೆಯಲ್ಲಿ (ಕರಾವಳಿ ಉತ್ಸವ ಮೈದಾನ): ಸಂಜೆ 5.30 ಗಂಟೆಯಿಂದ 6.30 ರವರೆಗೆ ಬಾಲ ಸಂರಕ್ಷಣಾ ಕೇಂದ್ರ ಕುತ್ತಾರುಪದವು ಇವರಿಂದ ಈಶಾನ್ಯ ಭಾರತ ಸಾಂಸ್ಕೃತಿಕ ವೈಭವ, ಸಂಜೆ 6.30 ರಿಂದ 8 ಗಂಟೆವರೆಗೆ ಪೂರ್ಣಿಮಾ ಸುರೇಶ್ ಹಿರಿಯಡ್ಕ ಇವರಿಂದ ಏಕವ್ಯಕ್ತಿ ರಂಗ ಪ್ರದರ್ಶನ – ಸತ್ಯಾನಾಪುರದ ಸಿರಿ, ರಾತ್ರಿ 8 ಗಂಟೆಯಿಂದ 9 ರವರೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ.

Comments are closed.