ಕರಾವಳಿ

ದೇಶ ಕಟ್ಟುವುದರಲ್ಲಿ ಮುಸ್ಲಿಮರ ಪಾತ್ರ ಬಹಳಷ್ಟಿದೆ : ಸುನಿಲ್ ಕುಮಾರ್ ಬಜಾಲ್

Pinterest LinkedIn Tumblr

ಮಂಗಳೂರು, ಜನರು ಕೇಳದ, ಬಯಸದ ಸಿಎಎ ಜಾರಿಗೆ ತಂದು ಮೋದಿ ಸರ್ಕಾರ ಕ್ಕೆ ಇಲ್ಲಿನ ಜನರನ್ನು ಓಡಿಸಲು ಸಾಧ್ಯ ವಿಲ್ಲ. ಬಾಬರಿ ಮಸೀದಿ ತೀರ್ಪು ಬಂದಾಗ ನ್ಯಾಯಾಲಯ ತೀರ್ಪು ಗೆ ಗೌರವ ನೀಡಿದ್ದೇವೆ.ಆದರೆ ಮೋದಿ ಜನ ವಿರೋಧಿ ಕಾಯಿದೆ ತಂದರೆ ಅದನ್ನು ಒಪ್ಪಿಕೊಳ್ಳಲು ಯಾರು ತಯಾರಿಲ್ಲ. ಇದು ನಮ್ಮ ದೇಶಕ್ಕೆ ಮಾರಕ ಎಂದು ನ್ಯಾಯವಾದಿ ಸಾಮಾಜಿಕ ಹೋರಾಟ ಗಾರ ಸುಧೀರ್ ಕುಮಾರ್ ಮರೋಳಿ ಹೇಳಿದರು.

ಅವರು ಪೌರತ್ವ ಸಂರಕ್ಷಣಾ ವೇದಿಕೆ ಮಲ್ಲೂರು ಇದರ ಆಶ್ರಯದಲ್ಲಿ ಸಿಎಎ,ಎನ್. ಆರ್. ಸಿ,ಎನ್ ಪಿಆರ್ ವಿರುದ್ಧ ಮಲ್ಲೂರು ಬದ್ರೀಯಾ ನಗರ ಮೈದಾನದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಡಿ.19ರಿಂದ ನಿರಂತರ ಪ್ರತಿಭಟನೆ ಕರಾಳ ಕಾಯಿದೆ ವಿರುದ್ಧ ನಡೆಯುತ್ತಿದೆ. ಹೋರಾಟ ವನ್ನು ಮುಸ್ಲಿಮರ ಹೋರಾಟ ಎಂದು ಚಿತ್ರೀಕರಣ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ದಾರಿ ತಪ್ಪಿಸುವ ಕಾರ್ಯ ನಡೆಯುತ್ತಿದೆ. ಈ ಕರಾಳ ಕಾಯಿದೆ ವಿರುದ್ಧ ಹಿಂದೂ ಗಳು ಕೂಡಾ ಎದ್ದು ನಿಂತಿದ್ದಾರೆ. ನರೇಂದ್ರ ಮೋದಿ ಅವರ ಕಾನೂನಿಗೆ ಎದೆಗುಂದಬೇಕಾಗಿಲ್ಲ.ನಾವೇ ನಿಜ ವಾದ ದೇಶಪ್ರೇಮಿಗಳು.ದೇಶ ಕಟ್ಟುವುದರಲ್ಲಿ ಮುಸ್ಲಿಮರ ಪಾತ್ರ ಬಹಳಷ್ಟಿದೆ. ಮಂಗಳೂರುನಲ್ಲಿ ನಡೆದ ಅಮಾಯಕರ ಕೊಲೆಗೆ ಸಮರ್ಪಕ ನ್ಯಾಯ ಸಿಕ್ಕಿಲ್ಲ ಎಂದು ಆರೋಪಿಸಿದರು.

ರಮಾನಾಥ ರೈ ಮಾತನಾಡಿ,ಪ್ರಪಂಚದ ಲ್ಲೀ ಭಾರತ ಜಾತ್ಯಾತೀತ ಶ್ರೀಮಂತ ರಾಷ್ಟ್ರ ಎನ್ನುವ ಹೆಗ್ಗಳಿಕೆ ಇತ್ತು. ಇದಕ್ಕೆ ಮೋದಿ ಯ ಹೊಸ ಕಾಯಿದೆ ಮಸಿ ಬಳಿಯುತ್ತಿದೆ.ಬಿ.ಎ.ಮೊಯ್ದಿನ್ ಗೆದ್ದ ಕ್ಷೇತ್ರ ಇದು. ಮತೀಯ ಗಲಭೆಗಳನ್ನು ಕೆರಳಿಸುವ ಕಾಲಘಟ್ಟ ಇದಾಗಿದೆ.ಮಂಗಳೂರು ನಲ್ಲಿ ಪ್ರತಿಭಟನೆ ಗೆ ಅನುಮತಿ ನೀಡಿ ಬಳಿಕ ಸೆಕ್ಷನ್ ಜಾರಿಯಾಯಿತು.ಇದರಿಂದ ಮಂಗಳೂರುನಲ್ಲಿ ಪ್ರತಿಭಟನಾ ಕಾರರಿಗೆ ಲಾಠಿಚಾರ್ಜ್ ಆಯಿತು.

ಆದರೆ ಅನುಮತಿ ಪಡೆಯದೇ ಗೋಲಿಬಾರ್ ಮಾಡಿದ ಬಗ್ಗೆ ತನಿಖೆ ಆಗಬೇಕು. ಸತ್ಯಾಂಶ ಹೊರಬರಬೇಕು.ಅಲ್ಪಸಂಖ್ಯಾತ ಮತೀಯರಾದರೆ ಅವರ ಸಮುದಾಯ ಕೆ ತೊಂದರೆ, ಬಹುಸಂಖ್ಯಾತರು ಮತೀಯವಾದಿಗಳಾದರೆ ದೇಶಕ್ಕೆ ತೊಂದರೆ ಎಂದು ನೆಹರು ಈ ಹಿಂದೆ ಹೇಳಿದ್ದಾರೆ. ಅಲ್ಪಸಂಖ್ಯಾತರ ಓಲೈಕೆ ಮಾಡುವುದು ನಾವಲ್ಲ. ಮುಸ್ಲಿಮರ ಪರ ಹೋರಾಟ ಮಾಡುವುದಿಲ್ಲ. ಅವರ ಹಕ್ಕು ನೀಡಿ ಎಂದು ಮಾತ್ರ ಕೇಳುತ್ತೇವೆ. ನಾವು ಯಾವಾಗ ಲು ಮತೀಯವಾದಿಗಳಾಗಬಾರದು.ಸುಳ್ಳು ಸುದ್ದಿ ಹರಡಿಸಿ ರಾಜಕೀಯ ಲಾಭ ಪಡೆಯುವ ಕಾರ್ಯ ನಡೆಯುತ್ತಿದ್ದು ಇದರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.

ವೇದಿಕೆಯಲ್ಲಿ ಬಪ್ಪಳಿಗೆ ಮಸೀದಿ ಖತೀಬ್ ಅಹ್ಮದ್ ನಯೀಮ್ ಫೈಝಿ, ಎಸ್ಸೆಸ್ಸೆಫ್ ನ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ,ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ,ನ್ಯಾಯವಾದಿ ಬಿ.ಎ.ಮಹಮ್ಮದ್ ಹನೀಫ್, ಎಸ್ ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ, ಡಿವೈಎಫ್ ಐ ಜಿಲ್ಲಾ ಧ್ಯಕ್ಷ ಬಿ.ಕೆ.ಇಂತಿಯಾಝ್ ,ನಿಝಾಮುದ್ದೀನ್, ಕಾಂಗ್ರೆಸ್ ಮುಖಂಡ ಪಿವಿ ಮೋಹನ್ ಉಪಸ್ಥಿತರಿದ್ದರು. ಎನ್.ಇ.ಮಹಮ್ಮದ್ ಸ್ವಾಗತಿಸಿದರು.

Comments are closed.