ಕರಾವಳಿ

ಬಜ್ಪೆ ದೇವಾಲಯದಲ್ಲಿ ‘ಶನಿ ದೇವೆರೆ ಮೈಮೆ’ ತುಳು ಪುರಾಣ ಪ್ರವಚನ

Pinterest LinkedIn Tumblr

ಮಂಗಳೂರು : ಬಜ್ಪೆ ಶ್ರೀ ಶನೈಶ್ಚರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ವಿವಿಧ ಧಾರ್ಮಿಕ – ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ಜರಗಿತು. ಮಹಾಪೂಜೆಯ ಬಳಿಕ ‘ಶನಿ ದೇವೆರೆ ಮೈಮೆ’ ತುಳು ಪುರಾಣ ಪ್ರವಚನವನ್ನು ಏರ್ಪಡಿಸಲಾಗಿತ್ತು.

ಯಕ್ಷಗಾನ ಅರ್ಥಧಾರಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರು ಪ್ರವಚನ ನಡೆಸಿಕೊಟ್ಟರು. ಗಮಕಿ ತೋನ್ಸೆ ಪುಷ್ಕಳ ಕುಮಾರ್ ಅವರು ಕಾವ್ಯವಾಚನ ಮಾಡಿದರು. ಈ ಸಂದರ್ಭದಲ್ಲಿ ದೇವಳದ ಧರ್ಮದರ್ಶಿ ಆನಂದ ಪೂಜಾರಿ ವಿದ್ವತ್ ಸಮ್ಮಾನ ನೀಡಿ ಕಲಾವಿದರನ್ನು ಗೌರವಿಸಿದರು.

ಬಜ್ಪೆ ಶ್ರೀ ಶನೈಶ್ಚರ ದೇವಸ್ಥಾನದ ಸೇವಾಸಮಿತಿ ಪ್ರಮುಖರಾದ ರಾಜೇಂದ್ರ ಪ್ರಸಾದ್ ಸ್ವಾಗತಿಸಿದರು; ಅಭಿಜಿತ್ ವಂದಿಸಿದರು. ಬಳಿಕ ಶ್ರೀ ಧೂಮಾವತಿ ಬಂಟ ಮತ್ತು ಮೈಸಂದಾಯ ದೈವಗಳಿಗೆ ನೇಮೋತ್ಸವ,ದುರ್ಗಾ ನಮಸ್ಕಾರ ಪೂಜೆ, ದೇವರ ಕಲಶ ಬಲಿ ಜರಗಿತು.

Comments are closed.