ಕರಾವಳಿ

ಸಿಂಗಾಪುರದಲ್ಲಿ ಇಂಟರ್ ನ್ಯಾಶನಲ್ ಐಸ್ ಸ್ಕೇಟಿಂಗ್: ಮಂಗಳೂರಿನ ಅನಘಾಗೆ ಎರಡು ಚಿನ್ನದ ಪದಕ

Pinterest LinkedIn Tumblr

ಮಂಗಳೂರು: ಸಿಂಗಾಪುರ ಐಸ್ ಸ್ಕೇಟಿಂಗ್‌ ಅಸೋಸಿಯೇಷನ್ ಸಿಂಗಾಪುರದಲ್ಲಿ ಆಯೋಜಿಸಿದ ಅಂತರಾಷ್ಟ್ರೀಯ ಮಟ್ಟದ ಸೌತ್ ಈಸ್ಟ್ ಏಪ್ಯಾನ್ ಓಪನ್ ಶಾರ್ಟ್ ಟ್ರಾಕ್ ಟ್ರೋಪಿ-2020 ಐಸ್ ಸ್ಕೇಟಿಂಗ್‌ ಚಾಂಪಿಯನ್ ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಮಂಗಳೂರಿನ ಅನಘಾ ಎರಡು ಚಿನ್ನದ ಪದಕ ಪಡೆದು ದೇಶಕ್ಕೆ ಕೀರ್ತಿ ತಂದಿದ್ದಾರೆ.

ಸಿಂಗಾಪುರದ ಜೆಕ್ಯೂಬ್ ಐಸ್ ರಿಂಕ್‌ನಲ್ಲಿ‌ ಜನವರಿ‌ 4 ಹಾಗೂ 5 ರಂದು ನಡೆದ ಈ ಚಾಂಪಿಯನ್ ಶಿಪ್ ನ ಹುಡುಗಿಯರ ಜ್ಯೂನಿಯರ್ ವಿಭಾಗದ 500 ಮೀಟರ್ ಹಾಗೂ 333 ಮೀಟರ್ ಐಸ್ ಸ್ಕೇಟಿಂಗ್‌ನಲ್ಲಿ ಅನಘಾ ಎರಡು ಚಿನ್ನದ‌ ಪದಕ ಪಡೆದಿದ್ದಾರೆ.

14 ದೇಶದ ಸ್ಕೇಟಿಂಗ್‌ ಪಟುಗಳು ಸ್ಫರ್ಧಾಳುಗಳಾಗಿದ್ದ ಈ ಚಾಂಪಿಯನ್ ಶಿಪ್ ನಲ್ಲಿ ಅನಘಾ ಎರಡು ಚಿನ್ನದ ಪದಕ‌ ಪಡೆದಿದು ದೇಶದ ಕೀರ್ತಿ ಪತಾಕೆ ಹಾರಿಸಿದ್ದಾರೆ.

ಮಂಗಳೂರಿನ ಡಾ.ರಾಜೇಶ್ ಹುಕ್ಕೇರಿ ಹಾಗೂ ಡಾ.ಅನಿತಾ ರಾಜೇಶ್ ದಂಪತಿಯ ಪುತ್ರಿಯಾದ ಅನಘಾ ಬಿಜೈ ಲೂಡ್ಸ್ ಸೆಂಟ್ರಲ್ ಸ್ಕೂಲ್ ನ 4ನೇ ತರಗತಿಯ ವಿದ್ಯಾರ್ಥಿನಿ.

ಐಸ್ ಸ್ಕೇಟಿಂಗ್‌ನ ಭಾರತ ತಂಡದ ಕೋಚ್ ಅವಧೂತ್ ಥಾವಡೇ ಅವರಿಂದ ಅನಘಾ ದೆಹಲಿಯಲ್ಲಿ ಐಸ್ ಸ್ಕೇಟಿಂಗ್‌ ತರಬೇತಿ ಪಡೆಯುತ್ತಿದ್ದಾರೆ.

Comments are closed.