ಕರಾವಳಿ

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಪೇಜಾವರ ಶ್ರೀಯವರಿಗೆ ನುಡಿನಮನ

Pinterest LinkedIn Tumblr

ಮುಂಬಯಿ : ವಿಶ್ವಕ್ಕೆ ಮಾರ್ಗದರ್ಶಕರಾಗಿ, ಸರ್ವಶ್ರೇಷ್ಠ ಸ್ವಾಮೀಜಿಯವರೆಂದಿನಿಸಿದ ಶ್ರೀ ಪೇಜಾವರ ಮಠಾಧೀಶರಾದ ಪೂಜ್ಯ ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರಗೆ ಶ್ರದ್ದಾಂಜಲಿ ಸಭೆಯನ್ನು ಜ. 3 ರಂದು ಸಂಜೆ ಅಂಧೇರಿ ಪೂರ್ವದ ಮರೋಲ್ – ಮರೋಶಿ ರೋಡ್ ನಲ್ಲಿರುವ ಮಾಂಗಲ್ಯ ಕಟ್ಟಡದಲ್ಲಿನ ಸಿ-502ರಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ವತಿಯಿಂದ ನಡೆಸಲಾಯಿತು.

ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರಗೆ ನುಡಿನಮನ ಸಲ್ಲಿಸುತ್ತಾ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರು ಮಾತನಾಡುತ್ತಾ ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಮಹಾನ್ ಸಂತರು. ಇವರು ದೇವರ ಸ್ವರೂಪವಾಗಿದ್ದು ಪ್ರತೀ ವರ್ಷ ಅವರನ್ನು ನಾವು ನೆನಪಿಸಬೇಕಾಗಿದೆ.

ರಾಮ ಮಂದಿರ ನಿರ್ಮಿಸಲು ಪೇಜಾವರ ಸ್ವಾಮೀಜಿಯವರು ಪ್ರಮುಖ ಪಾತ್ರವನ್ನು ವಹಿಸಿದ್ದು ಅವರ ಇದ್ದ ಸಮಯದಲ್ಲಿ ಅದರ ತೀರ್ಮಾನವಾಗಿದೆ. ಇವರಿಲ್ಲದಿದ್ದಲ್ಲಿ ಅದೂ ಅಸಾಧ್ಯವಾಗುತಿತ್ತು. ಉತ್ತರ ಭಾರತದಲ್ಲಿ ಅದೆಷ್ಟೋ ಪ್ರಸಿದ್ದ ಸ್ವಾಮೀಜಿಗಳಿದ್ದು ಅವರು ಧಕ್ಷಿಣ ಭಾರತದಲ್ಲಿ ಪ್ರಸಿದ್ದರಾದದ್ದು ಕಂಡುಬಂದಿಲ್ಲ ಆದರೆ ರಾಮಮಂದಿರದ ಬಗ್ಗೆ ಉಡುಪಿ ಶ್ರೀಕೃಷ್ಣ ಮಠದ ಮಹಾತಪಸ್ವಿಯಾದ ನಮ್ಮ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ದಕ್ಷಿಣ ಭಾರತದಿಂದ ಉತ್ತರ ಭಾರತಕ್ಕೆ ಹೋಗಿ ರಾಮ ಮಂದಿರದ ಬಗ್ಗೆ ಚಳವಳಿ ನಡೆಸಿ ಪ್ರಸಿದ್ದಿಯಾದದ್ದು ನಮಗೆ ಹೆಮ್ಮಯ ಸಂಗತಿ.

ಹಿರಿಯ ರಾಜಕಾರಿಣಿ ಎಲ್. ಕೆ. ಅದ್ವಾನಿಯವರ ನಿಕಟ ಸಂಪರ್ಕವನ್ನು ಹೊಂದಿದ ಸ್ವಾಮೀಜಿಯವರಿಗೆ ತನ್ನ ಚಳವಳಿಗೆ ಅವರ ಪ್ರೋತ್ಸಾಹವೂ ಇತ್ತು. ಇಂತಹ ಮಹಾನ್ ಸಂತರು ಇನ್ನು ನಮ್ಮ ಜಿಲ್ಲೆಯಲ್ಲಿ ಹುಟ್ಟಿ ಬರಲು ಅಸಾಧ್ಯ. ಪೇಜಾವರ ಸ್ವಾಮೀಜಿಯವರ ಸಾಧನೆ ಇತಿಹಾಸದ ಪುಟವನ್ನು ಸೇರಬೇಕಾಗಿದೆ. ಕೇವಲ ಜಿಲ್ಲೆಗೆ, ರಾಜ್ಯಕ್ಕೆ ಯಾ ದೇಶಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೇ ಜನಜಾಗೃತಿಯನ್ನು ಮೂಡಿಸಿದವರು ಸ್ವಾಮೀಜಿಯವರು ಎನ್ನುತ್ತಾ ಸ್ವಾಮೀಜಿಯವರಿಗೆ ಶ್ರದ್ದಾಂಜಲಿ ಅರ್ಪಿಸಿದರು.

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನ್ ದಾಸ್ ಅವರು ನುಡಿನಮನ ಸಲ್ಲಿಸುತ್ತಾ ರಾಮ ಮಂದಿರ ವನ್ನು ನೋಡುವ ಅವಕಾಶ ಸ್ವಾಮೀಜಿಯವರಿಗೆ ಒದಗಬೇಕಾಗಿದ್ದು ಎಂಬುದೇ ಎಲ್ಲರ ಆಶೆ. ನಮ್ಮ ಸಂಸ್ಥೆಗೆ ಸ್ವಾಮೀಜಿಯವರು ಹೆಸರನ್ನು ಇಟ್ಟಿದ್ದು, ಸಮಿತಿಯ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರೊಂದಿಗೆ ಅವರಿಗೆ ನಿಕಟ ಸಂಪರ್ಕವಿತ್ತು. ನಮ್ಮ ಧರ್ಮದ ಜಾಗೃತಿ ಮೂಡಿಬರಲಿ ಎಂದರು.

ಬಿಲ್ಲವರ ಅಸೋಷಿಯೇಶನಿನ ಮಾಜಿ ಅಧ್ಯಕ್ಷ ಹಾಗೂ ಸಮಿತಿಯ ಉಪಾಧ್ಯಕ್ಷ ನಿತ್ಯಾನಂದ ಕೋಟ್ಯಾನ್ ಇವರು ಸ್ವಾಮೀಜಿಯವರಿಗೆ ಶ್ರದ್ದಾಂಜಲಿ ಅರ್ಪಿಸುತ್ತಾ ಈ ಸಮಿತಿಯೊಂದಿಗೆ ಸ್ವಾಮೀಜಿಯವರಲ್ಲಿ ನನ್ನ ಸಂಪರ್ಕ ಹತ್ತಿರವಾಗಿದೆ. ನಾನು ಶ್ರೀಗಳ ಹುಟ್ಟೂರಿನ ಸಮೀಪದ ತೋನ್ಸೆಯಲ್ಲಿ ಹುಟ್ಟಿ ಬೆಳೆದವ. ಉಡುಪಿಯ ರಾಜಾಂಗಣಕ್ಕೆ ಯಕ್ಷಗಾನವನ್ನು ತರಿಸಿದ ಶ್ರೀಗಳು ಗುರುನಾರಾಯಣ ಯಕ್ಷಗಾನ ಮಂಡಳಿಯನ್ನು ಊರಿಗೆ ಕರೆಸಿ ಪ್ರಶಸ್ತಿ ನೀಡಿ ಆಶೀರ್ವದಿಸಿದ್ದಾರೆ.

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಮಾಜಿ ಅಧ್ಯಕ್ಷರಾದ ವಿಶ್ವನಾಥ ಮಾಡಾ ಅವರು ಮಾತನಾಡಿ ಸ್ವಾಮೀಜಿಯವರು ಕೈಕೊಂಡಿದ್ದ ಎಲ್ಲಾ ಯೋಜನೆಗಳು ಯಶಸ್ವಿಯಾಗಲಿ ಎಂದರು.

ಕುಲಾಲ ಸಂಘ ಮುಂಬಯ ಅಧ್ಯಕ್ಷರಾದ ದೇವದಾಸ್ ಕುಲಾಲ್ ಮಾತನಾಡುತ್ತಾ ಎಲ್ಲರೊಂದಿಗೆ ಅನ್ಯೋನತೆಯಿಂದ ಇದ್ದ ಒರ್ವ ಗಣ್ಯ ವ್ಯಕ್ತಿ. ಕುಲಾಲ ಸಂಘದ ಎರಡು ಕಟ್ಟಡಗಳಿಗೆ ಅವರ ಆಶೀರ್ವಾದವಿದೆ. ಉತ್ತಮ ಕೆಲಸಗಳನ್ನು ಮಾಡಿ ದೇವರ ಪಾದ ಸೇರಿದ ಸ್ವಾಮೀಜಿಯವರಿಗೆ ಕುಲಾಲ ಸಂಘದ ಸರ್ವ ಸದಸ್ಯರ ಪರವಾಗಿ ಶ್ರದ್ದಾಂಜಲಿ ಅರ್ಪಿಸಿದರು.

ತೀಯಾ ಸಮಾಜದ ಮಾಜಿ ಅಧ್ಯಕ್ಷ ಹಾಗೂ ಸಮಿತಿಯ ಉಪಾಧ್ಯಕ್ಷ ಚಂದ್ರಶೇಖರ ಆರ್. ಬೆಳ್ಚಡ ಇವರು ಸ್ವಾಮೀಜಿಯವರಿಗೆ ನುಡಿನಮನ ಸಲ್ಲಿಸುತ್ತಾ ಜನಸೇವೆಯೊಂದಿಗೆ ದೇವರ ಸೇವೆಗೆ ಅವರು ಪ್ರಾಮುಖ್ಯತೆಯನ್ನು ನೀಡುತ್ತಿದ್ದರು ಎಂದರು.

ಕರ್ನಾಟಕ ವಿಶ್ವಕರ್ಮ ಅಸೋಷಿಯೇಶನಿನ ಮಾಜಿ ಅಧ್ಯಕ್ಷ ಜಿ.ಟಿ. ಆಚಾರ್ಯ ಇವರು ಮಾತನಾದುತ್ತಾ ನಮ್ಮ ದೇಶ ಕಂಡ ಮಹಾನ್ ಸಂತ ಇನ್ನೊಮ್ಮೆ ನಮ್ಮ ದೇಶದಲ್ಲಿ ಹುಟ್ಟಿ ಬರಲಿ ಎಂದರು.

ಸ್ವಾಮೀಜಿಯವರಿಗೆ ಸಂತಾಪ ವ್ಯಕ್ತಪಡಿಸುತ್ತಾ ಬಂಟರ ಸಂಘ ಮುಂಬಯಿಯ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ಅರವಿಂದ ಬಣ್ಣಿಂತ್ತಾಯ ಇವರು ಸ್ವಾಮೀಜಿಯವರ ಎಲ್ಲಾ ಕಾರ್ಯಗಳನ್ನು ನಿರ್ವಹಿಸಲು ಕಿರಿಯ ಸ್ವಾಮೀಜಿಯವರನ್ನು ಪಟ್ಟದಲ್ಲಿ ಕುಳ್ಳಿರಿಸಿ ಸರಿಯಾದ ಸಮಯದಲ್ಲಿ ಕೃಷ್ನೈಕರಾಗಿದ್ದಾರೆ ಎಂದರು.

ಗಾಣಿಗ ಸಮಾಜದ ಅಧ್ಯಕ್ಷರಾದ ರಾಮಚಂದ್ರ ಗಾಣಿಗ ಮಾತನಾಡಿ ಸಮಾಜದ ಪರವಾಗಿ ಪೇಜಾವರ ಸ್ವಾಮೀಜಿಯವರಿಗೆ ಶ್ರದ್ದಾಂಜಲಿ ಅರ್ಪಿಸಿದರು.

ಸಮಾಜ ಸೇವಕ ಚಿತ್ರಾಪು ಕೆ. ಎಂ. ಕೋಟ್ಯಾನ್ ಇವರು ಶ್ರದ್ದಾಂಜಲಿಯನ್ನು ಅರ್ಪಿಸುತ್ತಾ ಸ್ವಾಮೀಜಿಯವರ ಸಾಧನೆ ಹಾಗೂ ಮಾರ್ಗದರ್ಶನವು ದೇಶಕ್ಕೆ ಆದರ್ಶವಾಗಿದೆ ಎಂದರು.

ಹ್ಯಾರಿ ಸಿಕ್ವೇರ ಮಾತನಾಡಿ ಜಾತಿ ಧರ್ಮವನ್ನು ಬದಿಗೊತ್ತಿ ಮಾನವೀಯತೆಯನ್ನು ಮೆರೆದ ಸ್ವಾಮೀಜಿಯವರನ್ನು ನಾವು ಸದಾ ನೆನಪಿಸೋಣ ಎಂದರು.

ಪದ್ಮಶಾಲಿ ಸಮಾಜದ ಬಾಂಧವರಿಗೆ ಸ್ವಾಮೀಜಿಯವರ ಆಶ್ರೀರ್ವಾದವನ್ನು ಪಡೆಯುವ ಸೌಭಾಗ್ಯ ಗೋಕುಲದಲ್ಲಿ ಲಭಿಸಿದೆ ಎಂದು ಪದ್ಮಶಾಲಿ ಸಮಾಜದ ಅಧ್ಯಕ್ಷರಾದ ಉತ್ತಮ್ ಶೇರಿಗಾರ್ ನುಡಿದರು.

ಮೊಗವೀರ ವ್ಯವಸ್ತಾಪಕ ಮಂಡಳಿಯ ಅಧ್ಯಕ್ಷರಾದ ಕೆ. ಎಲ್. ಬಂಗೇರ ಇವರು ಸ್ವಾಮೀಜಿಯವರಿಗೆ ನುಡು ನಮನ ಸಲ್ಲಿಸುತ್ತಾ ಸ್ವಾಮೀಜಿಯವರು ಕೇವಲ ಸ್ವಾಮೀಜಿಯವರಾಗಿರದೆ ಜ್ನಾನದ ಭಂಡಾರವಾಗಿದ್ದರು ಎಂದರು.

ಭಂಡಾರಿ ಸೇವಾ ಸಮಿತಿಯ ಅಧ್ಯಕ್ಷ ರಾದ ನ್ಯಾ. ಆರ್. ಎನ್. ಭಂಡಾರಿಯವರು ಮಾತನಾಡಿ ಸ್ವಾಮೀಜಿಯವರು ಎಂದು ಗೌರವ ಸನ್ಮಾನಕ್ಕೆ ಸೇವೆ ಮಾಡಿಲ್ಲ ಎಂದರು.

ಕೇರಳದ ಗಡಿನಾಡು ಕಾಸರಗೋಡಲ್ಲಿ ಹಿಂದು ಧರ್ಮಕ್ಕಾಗಿ ಜನಜಾಗೃತಿಯನ್ನು ಮೂಡಿಸಿದವರು ಸ್ವಾಮೀಜಿಯವರು ಎಂದು ಭಂಡಾರಿ ಸೇವಾ ಸಮಿತಿಯ ಮಾಜಿ ಅಧ್ಯಕ್ಷ ಬಾಲಕೃಷ್ಣ ಭಂಡಾರಿ ಯವರು ನುಡುನಮನ ಸಲ್ಲಿಸುತ್ತಾ ತಿಳಿಸಿದರು.

ಪದ್ಮಶಾಲಿ ಸಮಾಜದ ಅಧ್ಯಕ್ಷರಾದ ಉತ್ತಮ್ ಶೆಟ್ಟಿಗಾರ್, ಭಂಡಾರಿ ಸೇವಾ ಸಮಿತಿಯ ಅಧ್ಯಕ್ಷರಾದ ನ್ಯಾ ಆರ್. ಎನ್. ಭಂಡಾರಿ, ಭಂಡಾರಿ ಸೇವಾ ಸಮಿತಿಯ ಮಾಜಿ ಅಧ್ಯಕ್ಷ ಬಾಲಕೃಷ್ಣ ಭಂಡಾರಿ, ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷರಾದ ಕೆ.ಎಲ್. ಬಂಗೇರ ಮೊದಲಾದವರು ಮಾತನಾಡಿ ಸ್ವಾಮೀಜಿಯವರಿಗೆ ನುಡಿನಮನ ಸಲ್ಲಿಸುತ್ತಾ ಅವರ ಸಾಧನೆಯ ಬಗ್ಗೆ ತಿಳಿಸಿದರು.

ಸಮಿತಿಯ ಗೌರವ ಕೋಶಾಧಿಕಾರಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ರು ನುಡಿನಮನ ಸಲ್ಲಿಸುತ್ತಾ ಸ್ವಾಮೀಜಿಯವರ ಮಾರ್ಗದರ್ಶನ ಅವರು ಮಾಡಿದ ಕೆಲಸಗಳು ನಮಗೆಲ್ಲರಿಗೂ ದಾರೀ ದೀಪವಾಗಲಿ ಎಂದರು,

ದಯಾಸಾಗರ ಚೌಟ ರು ಮಾತನಾಡಿ ಲಂಕೇಶ್ ಮತ್ತು ಪೇಜಾವರ ಸ್ವಾಮೀಜಿಯವರ ಮಧ್ಯೆ ಇರುವ ವ್ಯತ್ಯಾಸ ದ ಬಗ್ಗೆ ತಿಳಿಸುತ್ತಾ ಸ್ವಾಮೀಜಿಯವರ ಸರಳತೆ ಯನ್ನು ತಿಳಿಸುತ್ತಾ ಮುಂಬಯಿ ಮಹಾನಗರಕ್ಕೆ ಸ್ವಾಮೀಜಿಯವರು ಬಹಳ ಹತ್ತಿರವಾಗಿದ್ದರು ಎಂದರು.

ಈ ಸಂಧರ್ಭದಲ್ಲಿ ಕರ್ನಾಟಕದ ಕರಾವಳಿಯ ಮುಂಬಯಿಯಲ್ಲಿರುವ ವಿವಿಧ ಜಾತೀಯ ಹಾಗೂ ಮತೀಯ ಸಂಘಟನಗಳ ಪ್ರಮುಖರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದು ವಿಶ್ವೇಶತೀರ್ಥ ಸ್ವಾಮೀಜಿಯವರಗೆ ಶ್ರದ್ದಾಂಜಲಿ ಅರ್ಪಿಸಿದರು.

ವರದಿ : ಈಶ್ವರ ಎಂ. ಐಲ್
ಚಿತ್ರ : ದಿನೇಶ್ ಕುಲಾಲ್

Comments are closed.