ಕರಾವಳಿ

ಮಂಗಳೂರು ನಗರಕ್ಕೆ 24×7 ನಿರಂತರ ನೀರು ಸರಬರಾಜು – ಮನೆ ಮನೆ ಸರ್ವೆ ಪ್ರಾರಂಭ

Pinterest LinkedIn Tumblr

ಮಂಗಳೂರು ಜನವರಿ 05 : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿರಂತರ ನೀರು ಸರಬರಾಜು ಯೋಜನೆಯನ್ನು ಅನುಷ್ಠಾನಗೊಳಿಸಲು ಮನೆ ಮನೆ ಸರ್ವೆ ಕಾರ್ಯ ಪ್ರಾರಂಭ ಮಾಡಿದೆ.

ಸರಕಾರವು ಈ ಯೋಜನೆಗೆ ಎಡಿಬಿ ನೆರವಿನೊಂದಿಗೆ ನಗರದಲ್ಲಿ ಕ್ವಿಮಿಪ್ ಟ್ರಾಂಚ್-2 ಅಡಿಯಲ್ಲಿ 24×7 ನಿರಂತರ ನೀರು ಸರಬರಾಜು ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು, ಈ ಕಾಮಗಾರಿಯನ್ನು ದೆಹಲಿ ಮೂಲದ m/s. suez projects private limited – suez india private limited – DRS infratech private limited joint ventur ರವರಿಗೆ ನೀಡಿದೆ.

ನಗರದಲ್ಲಿ ಪ್ರಥಮವಾಗಿ ರಸ್ತೆ ಸರ್ವೆ ಮತ್ತು ಮನೆ ಮನೆ ಸರ್ವೆ ಕಾರ್ಯ ನಡೆಯಲಿದ್ದು ಸರ್ವೆ ಅಧಿಕಾರಿಗಲು ಕೆಯುಐಡಿಎಪ್‍ಸಿ ಇಲಾಖೆಯ ಗುರುತಿನ ಚೀಟಿಯನ್ನು ಹೊಂದಿರುವ ಸಿಬ್ಬಂದಿಗಳಿಗೆ ಸಾರ್ವಜನಿಕರು ಅಗತ್ಯವಾದ ಮಾಹಿತಿ ನೀಡಿ ಈ ಯೋಜನೆಯನ್ನು ಯಶಸ್ವಿಗೊಳಿಸಲು ಮಂಗಳೂರು ಮಹಾನಗರಪಾಲಿಕೆ ಆಯುಕ್ತರ ಪ್ರಕಟಣೆ ತಿಳಿಸಿದೆ.

Comments are closed.