ಕರಾವಳಿ

ಬೆಂಗಳೂರು ನ್ಯಾಶನಲ್ ಕಾಲೇಜು ಮೈದಾನದಲ್ಲಿ ಪೇಜಾವರ ಶ್ರೀ ಅಂತಿಮ ದರ್ಶನ- ಸಂಜೆ ವಿದ್ಯಾಪೀಠದಲ್ಲಿ ಬೃಂದಾವನ

Pinterest LinkedIn Tumblr

ಉಡುಪಿ/ಬೆಂಗಳೂರು: ರಾಷ್ಟ್ರ ಸಂತ, ಹಿಂದೂ ಸಮಾಜದ ಮಾರ್ಗದರ್ಶಕ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಪಾರ್ಥಿವ ಶರೀರವನ್ನು ಸೇನಾ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತರಲಾಯಿತು.

3.45 ರ ಸುಮಾರಿಗೆ ಪಾರ್ಥಿವ ಶರೀರ ಬೆಂಗಳೂರು ತಲುಪಿದ್ದು ಎಚ್.ಎ.ಎಲ್ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸರ್ಕಾರಿ ಗೌರವಗಳೊಂದಿಗೆ ಸ್ವೀಕರಿಸಿದರು.

ಇಲ್ಲಿಂದ ಅಲಕೃಂತಗೊಂಡ ತೆರೆದ ವಾಹನದಲ್ಲಿ ಮೃತ ಶರೀರವನ್ನು ಬಸವನಗುಡಿಯ ನ್ಯಾಷನಲ್ ಕಾಲೇಜಿನ ಮೈದಾನಕ್ಕೆ ತರಲಾಯಿತು.

ಸಂಜೆ 5:30ರ ವರೆಗೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಬಳಿಕ ಮೆರವಣಿಗೆಯೊಂದಿಗೆ ವಿದ್ಯಾಪೀಠಕ್ಕೆ ತರಲಾಗುತ್ತದೆ. ರಾಘವೇಂದ್ರ ದೇವರು, ಶ್ರೀಕೃಷ್ಣ, ಮದ್ವಚಾರ್ಯರ ಮೂರ್ತಿಗೆ ಪೂಜೆ ಮಾಡಿದ ಬಳಿಕ ಧಾರ್ಮಿಕ ವಿಧಿವಿಧಾನಗಳು ನಡೆಸಿ ಬೃಂದಾವನ ನಿರ್ಮಾಣ ಮಾಡಲಾಗುತ್ತದೆ.

ಪೇಜಾವರ ಶ್ರೀಗಳ ಪೂಜಾ ಸಾಮಾಗ್ರಿ, ಅವರ ಪೀಠ, ಶ್ರೀ ಕೃಷ್ಣನ ಪೂಜೆಗೆ ಉಪಯೋಗಿಸುತ್ತಿದ್ದ ಪೂಜಾ ಪರಿಕರ ಉಡುಪಿಯಿಂದ ಈಗಾಗಲೇ ಬೆಂಗಳೂರಿಗೆ ಬಂದಿದೆ.

Comments are closed.