ಕರಾವಳಿ

ಮುಖ್ಯಮಂತ್ರಿಯಾದ ಬಳಿಕ ಪ್ರಥಮ‌ ಬಾರಿ ಉಡುಪಿ‌ ಶ್ರೀ ಕೃಷ್ಣನ ದರ್ಶನ ಪಡೆದ ಬಿ.ಎಸ್.ವೈ

Pinterest LinkedIn Tumblr

ಉಡುಪಿ: ಉಡುಪಿಯ ಶ್ರೀ ಕೃಷ್ಣಮಠಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬುಧವಾರ ಭೇಟಿ ನೀಡಿದ್ದಾರೆ. ಸಿಎಂ ಆದ ನಂತರ ಮೊದಲ ಬಾರಿ ಕೃಷ್ಣಮಠ ಭೇಟಿ ಇದಾಗಿದೆ.

ಪಲಿಮಾರು ಮಠದಿಂದ ಸಿಎಂ ಬಿ.ಎಸ್.ವೈ ಅವರಿಗೆ ಸ್ವಾಗತ ಕೋರಲಾಯಿತು. ಕನಕ ನವಗ್ರಹ ಕಿಂಡಿ ಮೂಲಕ ಶ್ರೀ ಕೃಷ್ಣನ ದರ್ಶನ ಮಾಡಿದ ಸಿಎಂ ಯಡಿಯೂರಪ್ಪ ಪರ್ಯಾಯ ಪಲಿಮಾರು ಸ್ವಾಮೀಜಿ ಜೊತೆ ಸಮಾಲೋಚನೆ ನಡೆಸಿದರು.

ಬಳಿಕ‌‌ ಸಿಎಂ ಯಡಿಯೂರಪ್ಪನವರು ಉಡುಪಿ ಶ್ರೀ ಕೃಷ್ಣ ಮಠದ ,ಚಿಣ್ಣರ ಸಂತರ್ಪಣೆ ಶಾಲೆಗಳ ವಿದ್ಯಾರ್ಥಿಗಳ ಚಿಣ್ಣರ ಮಹೋತ್ಸವ -2019 ಕಾರ್ಯಕ್ರಮದ ಉದ್ಘಾಟನೆ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು, ಸಭೆಯಲ್ಲಿ ಶ್ರೀ ಪರ್ಯಾಯ ಪಲಿಮಾರು ಮಠದ ಶ್ರೀ ವಿಧ್ಯಾದೀಶ ತೀರ್ಥ ಶ್ರೀಪಾದರು , ಪಲಿಮಾರು ಮಠದ ಕಿರಿಯ ಪಟ್ಟ ಸ್ವಾಮಿಜೀಯವರು, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ,ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ರಘುಪತಿ ಭಟ್, ಸುನಿಲ್ ಕುಮಾರ್,ವಿವಿಧ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.

Comments are closed.