ಕರಾವಳಿ

ಕಾರ್ಕಳದಲ್ಲಿ ಮಗನಿಗೆ ಚಾಕುವಿನಿಂದ ಇರಿದು ಕೊಂದ ತಂದೆ ಪರಾರಿ

Pinterest LinkedIn Tumblr

ಉಡುಪಿ: ಕುಡಿದ ಮತ್ತಿನಲ್ಲಿ ತಂದೆ ಹಾಗೂ‌ ಮಗನ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ಸ್ವತಃ ತಂದೆಯೆ ಕುಡಿದ ಮತ್ತಿನಲ್ಲಿ ಮಗನಿಗೆ ಚೂರಿ ಹಾಕಿ ಪರಾರಿಯಾದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ನಡೆದಿದೆ.

ಕಸಬಾ ವ್ಯಾಪ್ತಿಯಲ್ಲಿ ಮಂಗಳವಾರ ಮಧ್ಯಾಹ್ನ ಘಟನೆ ನಡೆದಿದೆ ಎನ್ನಲಾಗಿದೆ. ಮಂಗಳಪಾದೆ ನಿವಾಸಿಗಳಾದ ವಿವಿಯನ್ ಡಿಸೋಜಾ (24) ಕೊಲೆಯಾದ ದುರ್ದೈವಿ. ತಂದೆ ವಿಕ್ಟೋರ್ ಡಿಸೋಜಾ ಮಗನಿಗೆ ಕುಡಿದ ಮತ್ತಿನಲ್ಲಿ ಚೂರಿನಿಂದ ತೊಡೆಗೆ ಚುಚ್ಚಿ ಗಾಯಗೊಳಿಸಿದ್ದಾನೆ ಬಳಿಕ ರಕ್ತದ ಮುಡುವಿನಲ್ಲಿ ಬಿದ್ದದ್ದ ವಿವಿಯನ್ ವಿಲವಿಲನೆ ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ.ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ‌ದಾಖಲಾಗಿದೆ.

ಮುಂಬೈಯಲ್ಲಿ ಕಾಲ್ ಸೆಂಟರ್ ನಲ್ಲಿ ಉದ್ಯೋಗಿಯಾಗಿದ್ದ ವಿವಿಯನ್ 3 ತಿಂಗಳಿನ ಹಿಂದೆ ಊರಿಗೆ ಬಂದಿದ್ದ. ಇಂದು ತಂದೆ ಮಗ ಒಟ್ಟಿಗೆ ಕುಡಿದು ಯಾವುದೊ ವಿಷಯಕ್ಕೆ ಗಲಾಟೆಯಾಗಿ ತಂದೆ ಮಗನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ ಎಂದು ಪೊಲೀಸ್ ತಿಳಿಸಿದ್ದಾರೆ.ಕಾರ್ಕಳ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

Comments are closed.