ಕರಾವಳಿ

ಮಂಗಳೂರು : ಮಿಷನ್ ಇಂದ್ರಧನುಷ್ ಲಸಿಕಾ ಅಭಿಯಾನಕ್ಕೆ ಚಾಲನೆ

Pinterest LinkedIn Tumblr

ಮಂಗಳೂರು : ಮಿಷನ್ ಇಂದ್ರ ಧನುಷ್ ಲಸಿಕಾ ಅಭಿಯಾನದ ಉದ್ಘಾಟನಾ ಕಾರ್ಯಕ್ರಮ ಡಿಸೆಂಬರ್ 2 ರಂದು ನಗರ ಆರೋಗ್ಯ ಕೇಂದ್ರ ಪಡೀಲ್, ವ್ಯಾಪ್ತಿಯ ಕಣ್ಣೂರಿನ ಮಾನೆಲ್ ಗಾಣಾಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಎಂ. ರಾಮಕೃಷ್ಣ ರಾವ್ ಉದ್ಘಾಟಿಸಿ ಮಿಷನ್ ಇಂದ್ರಧನುಷ್ ಲಸಿಕಾ ಅಭಿಯಾನದ ಉದ್ದೇಶದ ಬಗ್ಗೆ ತಿಳಿಸಿದರು.

ಡಾ| ರಾಜೇಶ್ ಬಿ.ವಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳು ಸಾರ್ವತ್ರಿಕ ಲಸಿಕಾಕರಣದ ಬಗ್ಗೆ ಮಗುವಿಗೆ ಬರುವ ಸಾಮಾನ್ಯ 10 ಮಾರಕ ಖಾಯಿಲೆಗಳ ಬಗ್ಗೆ ಲಸಿಕೆಯನ್ನು ನೀಡುವುದರಿಂದ ಮಕ್ಕಳಿಗಾಗುವ ಉಪಯೋಗ/ ರೋಗ ನಿರೋಧಕ ಶಕ್ತಿಗಳ ಬಗ್ಗೆ ಮಾಹಿತಿ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್ ಇವರು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಲಸಿಕಾ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ| ಸುಜಯ್ ಕುಮಾರ್, ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ವೇಣುಗೋಪಾಲ್, ಪ್ರಭಾರ ಜಿಲ್ಲಾ ಶುಶ್ರೂಷಣಾಧಿಕಾರಿ ಶ್ರೀಮತಿ ಲಿಸ್ಸಿ, ಜ್ಯೋತಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಹಾಗೂ ಐಸಿಡಿಎಸ್ ಮೇಲ್ವಿಚಾರಕರು, ಇತರರು ಭಾಗವಹಿಸಿದರು.

Comments are closed.