ಕರಾವಳಿ

ಆಟದಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ : ಕ್ರೀಡಾಕೂಟ ಉಧ್ಠಾಟಿಸಿ ಡಾ.ಮುರಲೀ ಮೋಹನ್ ಚೂಂತಾರು

Pinterest LinkedIn Tumblr

ಮಂಗಳೂರು : ಜಿಲ್ಲಾ ಗೃಹರಕ್ಷಕದಳ ದ.ಕ, ಜಿಲ್ಲೆ ಮಂಗಳೂರು ಇವರ ಜಿಲ್ಲಾ ಮಟ್ಟದ ವೃತ್ತಿಪರ ಕ್ರೀಡಾಕೂಟದ 2019 ರ ಉದ್ಘಾಟನಾ ಸಮಾರಂಭ ಜಿಲ್ಲಾ ಗೃಹರಕ್ಷಕದಳದ ಕಛೇರಿ ಆವರಣದ ಮೇರಿಹಿಲ್ ಇಲ್ಲಿ ನಡೆಯಿತು.

ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಠ ಡಾ.ಮುರಲೀ ಮೋಹನ್ ಚೂಂತಾರು ಇವರ ಅಧ್ಯಕ್ಷತೆಯಲ್ಲಿ ಉಧ್ಥಾಟನಾ ಸಮಾರಂಭ ಜರುಗಿತು. ಆಟದಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು, ಸೋಲೇ ಗೆಲುವಿನ ಸೋಪಾನ ಆಟೋಟಗಳಿಂದ ನಾವೆಲ್ಲ ಬದುಕಿನ ಪಾಠ ಕಲಿಯಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕಚೇರಿಯ ಅಧೀಕ್ಷಕ ರತ್ನಾಕರ್ ಹಾಗೂ ಕಚೇರಿ ಸಿಬ್ಬಂದಿಗಳು, ಗೃಹರಕ್ಷಕ ಹಾಗೂ ಗೃಹರಕ್ಷಕಿಯರು ಉಪಸ್ಥಿತರಿದ್ದರು.

Comments are closed.