ಅಂತರಾಷ್ಟ್ರೀಯ

ಬಾಹ್ಯಾಕಾಶ ಇತಿಹಾಸದಲ್ಲಿ ಇದೇ ಮೊದಲ ಬಾರಿ ತಾರಾ ಪುಂಜದಲ್ಲಿ ಬೃಹದಾಕಾರದ ಕಪ್ಪು ರಂಧ್ರ ಪತ್ತೆ.

Pinterest LinkedIn Tumblr

ಬ್ಲಾಕ್ ಹೋಲ್ ಅಥವಾ ಕಪ್ಪು ಕುಳಿ ಸೌರಮಂಡಲದ ವಿಸ್ಮಯಗಳಲ್ಲಿ ಒಂದು. ತನ್ನ ಎದುರಿಗೆ ಬರುವ ನಕ್ಷತ್ರಗಳು ಮತ್ತು ಇತರ ಆಕಾಶಕಾಯಗಳನ್ನು ಕಬಳಿಸುವ ಇವುಗಳನ್ನು ಬಾಹ್ಯಾಕಾಶದ ರಾಕ್ಷಸರೆಂದೇ ಬಣ್ಣಿಸಲಾಗುತ್ತದೆ. ಅಂತರಿಕ್ಷದ ಕ್ಷೀರ ಪಥದ ತಾರಾ ಪುಂಜದಲ್ಲಿ ಸೂರ್ಯನಿಗಿಂತಲೂ 70 ಬೃಹದಾಕಾರದ ಕಪ್ಪು ರಂಧ್ರ ಪತ್ತೆಯಾಗಿದೆ.

ಭಾರೀ ಗಾತ್ರದ ನಕ್ಷತ್ರಗಳು ಕುಸಿತವಾಗುವುದರಿಂದ ಈ ಬ್ಲಾಕ್ ಹೋಲ್‍ಗಳು ನಿರ್ಮಾಣವಾಗುತ್ತದೆ. ಕ್ಷೀರ ಪಥದಲ್ಲಿ (ಮಿಲ್ಕಿ ವೇ) ಲಕ್ಷಾಂತರ ಬ್ಲಾಕ್ ಹೋಲ್‍ಗಳಿವೆ. ಬೆಳಕು ಕೂಡ ಇದನ್ನು ದಾಟಿ ಹೋಗದಷ್ಟು ದಟ್ಟವಾಗಿರುತ್ತವೆ.

ಈವರೆಗೆ ಪತ್ತೆಯಾದ ಕಪ್ಪು ಗುಳಿಗಳು ಸೂರ್ಯನಿಗಿಂತ 20 ಪಟ್ಟು ದೊಡ್ಡದಾದ ಬ್ಲಾಕ್ ಹೋಲ್ ಅತ್ಯಂತ ಅಗಾಧವಾದುದು ಎಂದು ಬಣ್ಣಿಸಲಾಗಿತ್ತು. ಚೀನಾದ ರಾಷ್ಟ್ರೀಯ ಅಂತರಿಕ್ಷ ವೀಕ್ಷಣಾ ಸಂಸ್ಥೆ (ಎನ್‍ಎಒಸಿ) ಈಗ ಪತ್ತೆ ಮಾಡಿರುವ ಬ್ಲಾಕ್ ಹೋಲ್ ಸೂರ್ಯನಿಗಿಂತಲೂ 70 ಪಟ್ಟು ದೊಡ್ಡದಾಗಿದೆ.

ಇದಕ್ಕೆ ಎಲ್‍ಬಿ-1 ಎಂದು ಹೆಸರಿಡಲಾಗಿದೆ. ಇದು ಭೂಮಿಯಿಂದ 15,000 ಪ್ರಭಾ ವರ್ಷಗಳಷ್ಟು ದೂರವಿದೆ. ಇಷ್ಟು ದೊಡ್ಡ ಬ್ಲಾಕ್ ಹೋಲ್ ಪತ್ತೆಯಾಗಿರುವುದು ಬಾಹ್ಯಾಕಾಶ ಇತಿಹಾಸದಲ್ಲಿ ಇದೇ ಮೊದಲು.

Comments are closed.