ಕರಾವಳಿ

ಕದ್ರಿ ಲಕ್ಷದೀಪೋತ್ಸವ : ಕಲ್ಕೂರ ಪ್ರತಿಷ್ಠಾನದಿಂದ ಭಜನಾ ಸಂಕೀರ್ತನೆ

Pinterest LinkedIn Tumblr

ಮಂಗಳೂರು : ಶ್ರೀ ಕ್ಷೇತ್ರ ಕದ್ರಿಯಲ್ಲಿ ಲಕ್ಷ ದೀಪೋತ್ಸವದಪ್ರಯುಕ್ತಕಲ್ಕೂರ ಪ್ರತಿಷ್ಠಾನದ ವತಿಯಿಂದ ಸಂಜೆ ಭಜನಾ ಸಂಕೀರ್ತನಾ ಕಾರ್ಯಕ್ರಮ ಜರಗಿತು

ಶ್ರೀ ಕ್ಷೇತ್ರದ‌ ಅರ್ಚಕರಾದ ಕದ್ರಿ ರಾಮಣ್ಣ‌ ಅಡಿಗ,ಡಾ. ಪ್ರಭಾಕರ‌ಅಡಿಗ, ರಾಘವೇಂದ್ರ‌ಅಡಿಗ ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು.

ಕದ್ರಿದೇವಸ್ಥಾನದವ್ಯವಸ್ಥಾಪನಾ ಸಮಿತಿಯ‌ಅಧ್ಯಕ್ಷಡಾ. ಎ.ಜೆ. ಶೆಟ್ಟಿ ,ಕಲ್ಕೂರ ಪ್ರತಿಷ್ಠಾನದ‌ಅಧ್ಯಕ್ಷ‌ಎಸ್. ಪ್ರದೀಪಕುಮಾರಕಲ್ಕೂರ, ಕ್ಷೇತ್ರದಕಾರ್ಯನಿರ್ವಹಣಾಧಿಕಾರಿಶ್ರೀಮತಿ ಜಯಮ್ಮ ಪಿ., ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಸುರೇಶ್‌ಕುಮಾರ್, ಕಾರ್ಪೋರೇಟರ್‌ಗಳಾದ ಮನೋಹರಕದ್ರಿ, ಶಕಿಲಾ ಕಾವ, ಎಂ.ಬಿ. ಪುರಾಣಿಕ್, ಎಲ್ಲೂರುರಾಮಚಂದ್ರ ಭಟ್, ಅರುಣ್‌ಕದ್ರಿ, ಜನಾರ್ದನ ಹಂದೆ, ವಿಪ್ರ ಬಳಗದ ರಾಮಚಂದ್ರ ಭಟ್, ಪೂರ್ಣಿಮಾರಾವ್ ಪೇಜಾವರಮೊದಲಾದವರು ಉಪಸ್ಥಿತರಿದ್ದರು

ಕುಂಜಾರುಗಿರಿ ಗಿರಿಬಳಗ, ಮದ್ಧರಿ ನಾಮಸಂಕೀರ್ತನಾ ಬಳಗ, ಕಳವಾರು, ಸ್ವರಶ್ರೀ (ಮಹಿಳಾ) ಭಜನಾ ಬಳಗ ಸುರತ್ಕಲ್, ಬಾಳ ಹಾಗೂ ವಿಪ್ರ ಭಜನಾ ಸಂಕೀರ್ತನ ಬಳಗ ಕದ್ರಿ ಮಂಗಳೂರು ಮೊದಲಾದ ತಂಡಗಳು ಭಜನಾ ಸಂಕೀರ್ತನ ಕಾರ್ಯಕ್ರಮದಲ್ಲಿ ಪಾಲ್ಗೊಂಡವು.

Comments are closed.