ಕರಾವಳಿ

ಸೋಮೇಶ್ವರ ವೆಂಕಟರಮಣ ಸ್ವಾಮಿಗೆ ಕಾಶೀಮಠಾಧೀಶರಿಂದ ರಜತ ಪಲ್ಲಕಿ ಸಮರ್ಪಣೆ

Pinterest LinkedIn Tumblr

ಮಂಗಳೂರು:  ಸುಮಾರು 625 ವರ್ಷಗಳ ಪುರಾತನ ಶ್ರೀ ವೆಂಕಟಮಣ ಸ್ವಾಮಿ ದೇವಸ್ಥಾನ, ಸೋಮೇಶ್ವರದಲ್ಲಿ ನವೆಂಬರ್ 26 ರಿಂದ 29 ರ ವರೆಗೆ ಶ್ರೀ ಕಾಶೀ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ಮೊಕ್ಕಾಂ ಮಾಡುವರಿದ್ದು , ಈ ಸಂದರ್ಭದಲ್ಲಿ ಶ್ರೀ ವೆಂಕಟರಮಣ ದೇವರಿಗೆ ಹಾಗೂ ಶ್ರೀ ಕೋದಂಡರಾಮ ದೇವರಿಗೆ ನೂತನವಾಗಿ ನಿರ್ಮಿಸಲಾದ ರಜತ ಪಲ್ಲಕ್ಕಿ ಹಾಗೂ ಸಪರಿವಾರ ಶ್ರೀ ವೆಂಕಟರಮಣ ದೇವರಿಗೆ 108 ರಜತ ಕಲಶಗಳನ್ನು ಶ್ರೀಗಳವರ ಅಮೃತ ಹಸ್ತಗಳಿಂದ ಶ್ರೀ ಸಂಸ್ಥಾನದ ಪರಮ ಗುರುಗಳಾದ ಶ್ರೀಮದ್ ಭುವನೇಂದ್ರ ತೀರ್ಥ ಸ್ವಾಮೀಜಿಯವರ ಪುಣ್ಯತಿಥಿಯ ಪರ್ವ ದಿನದಂದು ಸಮರ್ಪಿಸಲಾಗುವುದು.

ಶ್ರೀಮದ್ ಭುವನೇಂದ್ರ ತೀರ್ಥ ಸ್ವಾಮೀಜಿಯವರ ಪುಣ್ಯತಿಥಿಯ ದಿನದಂದು, ಶ್ರೀಗಳವರ ಪುಣ್ಯತಿಥಿ ಆರಾಧನೆಯನ್ನು ವಿಜೃಂಭಣೆ ಯಿಂದ ನಡೆಯಲಿದ್ದು , ಪುಣ್ಯತಿಥಿ ಆಚರಣೆಯಯ ಅಂಗವಾಗಿ ಶ್ರೀ ಮಠದಲ್ಲಿ ಶ್ರೀ ವೇದವ್ಯಾಸ ದೇವರಿಗೆ ಲಘುವಿಷ್ಣು ಅಭಿಷೇಕ ಸೇವೆ ನಡೆಯಲಿದೆ , ಸಾಯಂಕಾಲ ಶ್ರೀಗಳವರಿಂದ ಭುವನೇಂದ್ರ ತೀರ್ಥ ಸ್ವಾಮೀಜಿಯವರ ಗುಣಗಾನ , ಸ್ವಾಮೀಜಿಯವರ ಭಾವಚಿತ್ರ ಉತ್ಸವ ಸೋಮೇಶ್ವರ ಪೇಟೆಯಲ್ಲಿ ನಡೆಯಲಿರುವುದು.

ಇದೇ ದಿನದಂದು ಶ್ರೀ ವೆಂಕಟರಮಣ ದೇವರಿಗೆ ಶತಕಲಶ ಅಭಿಷೇಕ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವ ದಿವ್ಯ ಹಸ್ತಗಳಿಂದ ನೆರವೇರಲಿದೆ.

ಶ್ರೀಮದ್ ಭಾಗವತ ಪುರಾಣ ಪಾರಾಯಣ, ಶ್ರೀಮದ್ ಭಾಗವತ ಪುರಾಣದ ದಶಮ ಸ್ಕಂದ ಹವನ ನಡೆಯಲಿದೆ . ಈ ಎಲ್ಲಾ ಪುಣ್ಯಪ್ರದ ಕಾರ್ಯಕ್ರಮಗಳಲ್ಲಿ ಸಮಾಜ ಭಾಂದವರು ಪಾಲ್ಗೊಂಡು ಶ್ರೀ ಹರಿ ಗುರುಗಳ ಕ್ರಪೆಗೆ ಪಾತ್ರರಾಗಬೇಕಾಗಿ ಎಂದು ಶ್ರೀ ದೇವಳದ ಆಡಳಿತ ಮೊಕ್ತೇಸರರಾದ ಶ್ರೀ ಯೋಗೀಶ್ ಭಟ್ ಹೆಬ್ರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Comments are closed.