
ಹೊಸದಿಲ್ಲಿ: ತನಗೆ ಊಟ ತಲುಪಿಸುವುದು ತಡವಾಯಿತು ಮತ್ತು ತನ್ನ ಕರೆ ಸ್ವೀಕರಿಸಲಿಲ್ಲ ಎಂಬ ಕಾರಣಕ್ಕೆ ಪೊಲೀಸ್ ಓರ್ವ ಹೊಟೇಲ್ ಮ್ಯಾನೇಜರ್ ಗೆ ಥಳಿಸಿದ ಘಟನೆ ಹೊಸದಿಲ್ಲಿಯಲ್ಲಿ ನಡೆದಿದೆ.
ಇಲ್ಲಿನ ಹಜರತ್ ನಿಜಾಮುದ್ದೀನ್ ರೈಲ್ವೇ ನಿಲ್ದಾಣ ಬಳಿಯ ಹೊಟೇಲ್ ನಲ್ಲಿ ಎಎಸ್ಐ ಓರ್ವ ಫುಡ್ ಆರ್ಡರ್ ಮಾಡಿದ್ದು, ಆದರೆ ಅದನ್ನು ತಲುಪಿಸುವಲ್ಲಿ ಹೊಟೇಲ್ ಮ್ಯಾನೇಜರ್ ವಿಳಂಬ ಮಾಡಿದ್ದ. ನಂತರ ಎಎಸ್ ಐ ಆತನಿಗೆ ಕರೆ ಮಾಡಿದಾಗ ಆತ ಕರೆ ಸ್ವೀಕರಿಸಲಿಲ್ಲ. ಇದರಿಂದ ಬೇಸತ್ತ ಎಎಸ್ ಐ ಆತನಿಗೆ ಹಲ್ಲೆ ನಡೆಸಿ ಆತನಿಂದ ಹಣವನ್ನೂ ಪೀಕಿದ್ದಾನೆ.
ಎಎಸ್ ಐ ವಿರುದ್ಧ ಹಲ್ಲೆ, ಕ್ರಿಮಿನಲ್ ಬೆದರಿಕೆ, ಹಣ ಎಗರಿಸಿದ ಬಗ್ಗೆ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಎಎಸ್ ಐ ನನ್ನು ತಕ್ಷಣವೇ ಅಮಾನತು ಮಾಡಲಾಗಿದೆ.
ಪೊಲೀಸಪ್ಪನ ದೌರ್ಜನ್ಯದಿಂದ ನೊಂದ ಹೊಟೇಲ್ ಮ್ಯಾನೇಜರ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದ. ಎರಡುವರೆ ನಿಮಿಷದ ವಿಡಿಯೋದಲ್ಲಿ ಆತನ ಪೊಲೀಸ್ ಅಧಿಕಾರಿಯಿಂದ ತನಗಾದ ಅನ್ಯಾಯದ ಬಗ್ಗೆ ಹೇಳಿಕೊಂಡಿದ್ದಾನೆ.
Comments are closed.