ಕರಾವಳಿ

ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದ ಹೆಸರಲ್ಲಿ ನಕಲಿ ವೆಬ್‌ಸೈಟ್‌ ತೆರೆದು ವಂಚನೆ

Pinterest LinkedIn Tumblr

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಾಲಯದ ಹೆಸರಿನಲ್ಲಿ ಅಪರಿಚಿ ನಕಲಿ ವೆಬ್‌ಸೈಟ್‌ ತೆರೆದು ದೇವಾಲಯಕ್ಕೆ ವಂಚಿಸಿದ ಬಗ್ಗೆ ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅ. ಸುತಗುಂಡಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ದೇವಾಲಯದಲ್ಲಿಯೇ ಅಧಿಕೃತ ಸೇವಾ ಕೌಂಟರ್‌ ಹಾಗೂ ಅಧಿಕೃತ ವೆಬ್‌ ಸೈಟ್‌ ಇದ್ದು, ಅದರ ಮೂಲಕ ದೇವರಿಗೆ ಸೇವೆಗಳನ್ನು ನೀಡಬಹುದಾಗಿದೆ. ಆದರೆ ಅಪರಿಚಿತರು ದೇವಳದಿಂದ ಯಾವುದೇ ಅನುಮತಿಯನ್ನು ಪಡೆಯದೆ ಮೂಕಾಂಬಿಕಾ ಇಸ್ಫೋಲೈನ್‌ ಎಂಬ ಹೆಸರಿನಲ್ಲಿ ಖಾಸಗಿ ವೆಬ್‌ಸೈಟ್‌ ತೆರೆದಿದ್ದಾರೆ.

ದೇವಸ್ಥಾನದಲ್ಲಿ ನಡೆಯುವ ಚಂಡಿಕಾ ಹೋಮ ಹಾಗೂ ಇತರ ಸೇವೆಗಳನ್ನು ಮುಗಂಡವಾಗಿ ಕಾಯ್ದಿರಿಸಿಕೊಂಡು ಭಕ್ತರಿಂದ ಹೆಚ್ಚಿನ ಹಣ ವಸೂಲಿ ಮಾಡಿರುವ ಘಟನೆಗಳು ನಡೆದಿವೆ. ಇದರಿಂದ ಭಕ್ತರಿಗೆ ಮೋಸವಾಗಿದ್ದು ದೇವಾಲಯಕ್ಕೂ ನಷ್ಟವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Comments are closed.