ಕರಾವಳಿ

ಕೊಂಕಣಿ ರಂಗಭೂಮಿ ತರಬೇತಿಯ ಸರ್ಟಿಫಿಕೇಟ್ ಕೋಸ್೯ನ “ರಂಗ ಪ್ರವೇಶಿಕಾ” ಸಮಾರೋಪ

Pinterest LinkedIn Tumblr

ಮಂಗಳೂರು.ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠ ವತಿಯಿಂದ ಸಾಧನಾ ಬಳಗ ಮಂಗಳೂರು(ರಿ) ಸಹಯೋಗದಲ್ಲಿ ಕೊಂಕಣಿ ರಂಗಭೂಮಿ ತರಬೇತಿಯ ಸರ್ಟಿಫಿಕೇಟ್ ಕೋಸ್೯ನ “ರಂಗ ಪ್ರವೇಶಿಕಾ” ಸಮಾರೋಪ ಸಮಾರಂಭ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜ್ ಸಭಾಂಗಣದಲ್ಲಿ ನಡೆಯಿತು.

ಉದ್ಯಮಿ ನಂದಗೋಪಾಲ ಶೆಣೈ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಕೊಂಕಣಿ ಭಾಷೆಯನ್ನು ಮನೆಯಲ್ಲಿ ಮೊದಲು ಮಾತನಾಡಲು ಅಭ್ಯಾಸ ಮಾಡಿದಾಗ ಕೊಂಕಣಿ ಭಾಷೆ ಬೆಳೆಯಲು ಸಾಧ್ಯ. ಕೊಂಕಣಿಗಳಾದ ನಾವೆ ನಮ್ಮ ಮನೆಯಲ್ಲಿ ಕೊಂಕಣಿಯಲ್ಲಿ ಮಾತನಾಡದೆ ಇದ್ದಲ್ಲಿ ಕೊಂಕಣಿ ಭಾಷೆ ಉಳಿಯಲು ಸಾಧ್ಯವಿಲ್ಲ. ಕೊಂಕಣಿಗಳು ಮನೆಯಲ್ಲಿ ಮತ್ತು ಮಕ್ಕಳಲ್ಲಿ ಹೆಚ್ಚು ಕೊಂಕಣಿ ಭಾಷೆಯಲ್ಲಿ ಮಾತನಾಡಿ ಹೇಳಿದರು.

ಹಿರಿಯ ರಂಗ ನಿರ್ದೇಶಕ ಅರುಣ್ ರಾಜ್ ಮಾತನಾಡಿ ಕೊಂಕಣಿ ನಾಟಕ ತರಬೇತಿ ನೀಡುವುದು ಸುಲಭದ ಕಾರ್ಯವಲ್ಲ ವಿಶ್ವ ವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠ ಇಂತಹ ಮಹತ್ವದ ಕಾರ್ಯ ಶ್ಲಾಘ್ನಿಯ ಎಂದು ಹೇಳಿದರು. ಈ ಸಂದರ್ಭ ರಂಗ ನಿರ್ದೇಶಕ ಜಗನ್ ಪವಾರ್ ಬೇಕಲ್ ಮತ್ತು‌ ರಂಗ ಪ್ರವೇಶಿಕಾದ ಸಂಚಾಲಕ ಪ್ರಕಾಶ ಶೆಣೈರವರನ್ನು ಸನ್ಮಾನಿಸಲಾಯಿತು. 45 ದಿನಗಳ ಶಿಬಿರದಲ್ಲಿ 15 ಮಂದಿ ಶಿಬಿರದಲ್ಲಿ ಭಾಗವಹಿಸಿದರು.

ವಿಶ್ವ ವಿದ್ಯಾನಿಲಯದ ಪ್ರಾಂಶುಪಾಲ ಡಾ.ಉದಯ ಕುಮಾರ್ ಎಂ.ಎ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಜೀವನವೇ ನಾಟಕವಾದರೆ ನಾಟಕವೇ ಜೀವನವನ್ನಾಗಿಸಿ ಅದಷ್ಟೋ ಕಲಾವಿದರಿದ್ದಾರೆ. ಮಂಗಳೂರು ವಿಶ್ವ ವಿದ್ಯಾಲನಿಲಯ ರಂಗ ಭೂಮಿಗೆ ಬಹಳಷ್ಟು ಮಹತ್ವವನ್ನು ನೀಡಿ ಕಲಾವಿದರನ್ನು ಬೆಂಬಲಿಸುತ್ತ ಬಂದಿದೆ ಎಂದು ಹೇಳಿದರು.

ವಿಶ್ವ ವಿದ್ಯಾಲನಿಲಯದ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ್ ಡಾ.ರಾಮಕೃಷ್ಣ ಬಿ.ಎಂ ಉಪಸ್ಥಿತರಿದರು.ಶಿಬಿರಾರ್ಥಿಗಳು ರಚಿಸಿದ ಕಾಲಚಕ್ರಾಂತು ಕೊಂಕಣಿ ನಾಟಕ ಪ್ರದರ್ಶನಗೊಂಡಿತು.ಶಿಬಿರಾರ್ಥಿ ಸ್ಮಿತಾ ಪ್ರಭು ಅಭಿಪ್ರಾಯ ವ್ಯಕ್ತಪಡಿಸಿದರು. ಕೊಂಕಣಿ ಅಧ್ಯಯನ ಪೀಠದ ಸಂಯೋಜಕ ಡಾ.ಜಯವಂತ ನಾಯಕ್ ಸ್ವಾಗತಿಸಿದರು. ಕೊಂಕಣಿ ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ.ದೇವದಾಸ ಪೈ.ಬಿ ವಂದಿಸಿದರು.

Comments are closed.