ಕರಾವಳಿ

ಶತಮಾನದ ಆದರ್ಶ ನಮ್ಮ ಕಾರಂತರು-ಸಚಿವ ಕೋಟ ಶ್ರೀನಿವಾಸ ಪೂಜಾರಿ

Pinterest LinkedIn Tumblr

ಕುಂದಾಪುರ: ಡಾ|| ಶಿವರಾಮ ಕಾರಂತರ ಸಮಯ ಪ್ರಜ್ಞೆ,ಪರಿಸರ ಕಾಳಜಿ ನಮಗೆ ಆದರ್ಶನೀಯ,ಅದನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಕಾರಂತರಿಗೆ ಗೌರವ ನೀಡಿದಂತೆ ಎಂದು ದ.ಕ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದರು.
ಅವರು ಕಾರಂತ ಪ್ರತಿಷ್ಠಾನ(ರಿ)ಕೋಟ,ಕೋಟತಟ್ಟು ಗ್ರಾಮ ಪಂಚಾಯತ್ ,ಕಾರಂತ ಟ್ರಸ್ಟ್(ರಿ) ಉಡುಪಿ ಇವರ ಆಶ್ರಯದಲ್ಲಿ ನಡೆಯುತ್ತಿರುವ ಕಾರಂತ ಜನ್ಮದಿನೋತ್ಸವ ಹಾಗೂ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಂಗವಾಗಿ ಪುನರ್ವಸು-೨೦೧೯(ಮಳೆಬಿಲ್ಲಿನ ಕನವರಿಕೆ) ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಕಾರಂತರು ಸಮಯಕ್ಕೆ ಕೊಡುತ್ತಿದ್ದ ಮಹತ್ವ,ಪರಿಸರದ ಬಗ್ಗೆ ವಹಿಸುತ್ತಿದ್ದ ಕಾಳಜಿ ಪ್ರತಿಯೊಬ್ಬರಿಗೂ ಆದರ್ಶ ಎಂದರು,ಕಾರಂತ ಥೀಮ್ ಪಾರ್ಕ್ ಇನ್ನಷ್ಟೂ ಅಭಿವೃದ್ಧಿ ಪಡಿಸಿ ಕಾರಂತರ ಬದುಕಿನ ಸಾಧನೆಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶ ಕಾರಂತ ಥೀಮ್ ಪಾರ್ಕ್‌ಗೆ ಇದೆ,ಮುಂದಿನ ದಿನಗಳಲ್ಲಿ ಸಂಗೀತ ಕಾರಂಜಿ,ಹಳೆಯ ಯುದ್ದ ವಿಮಾನ ಅಳವಡಿಸುವ ಆಲೋಚನೆ ಇದೆ ಇದರ ಬಗ್ಗೆ ಈಗಾಗಲೇ ರಕ್ಷಣ ಸಚಿವರ ಮಾತುಕತೆ ಮಾಡಲಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಉದ್ಯಮಿ ಸದಾನಂದ ಪೂಜಾರಿ ಮಾತನಾಡಿ ಕಾರಂತ ಥೀಮ್ ಕೋಟಕ್ಕೆ ಒಂದು ಹೆಮ್ಮೆ,ನಮ್ಮ ಊರಿನ ಕಣ್ಮಣಿ ಕಾರಂತರ ಹೆಸರಿನಲ್ಲಿ ಥೀಮ್ ಪಾರ್ಕ್ ರಚನೆಗೊಂಡು ದಿನ ನಿತ್ಯ ಎಂಬಂತೆ ಕಾರ್ಯಕ್ರಮ ನಡೆಯುತ್ತಿರುವುದು ಸಂತಸದ ವಿಷಯ,ಇನ್ನಷ್ಟೂ ಅಭಿವೃದ್ಧಿ ಹೊಂದಿ ಕಾರಂತ ಅಭಿಮಾನಿಗಳನ್ನು ಇನ್ನಷ್ಟೂ ಆಕರ್ಷಿಸಲಿ ಎಂದು ಶುಭ ಹಾರೈಸಿದರು.

ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ರಘು ತಿಂಗಳಾಯ ಮಾತನಾಡಿ ಕಾರಂತೋತ್ಸವ ಕಳೆದ ೧೦ ದಿನದಿಂದ ಬಹಳ ಸಡಗರದಿಂದ ಯಶಸ್ಸಿಯಾಗಿ ನಡೆದಿದೆ,ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲಾರಿಗೂ ಧನ್ಯವಾದ ತಿಳಿಸಿದರು.
ಬಾಲನಟಿ ಅನ್ಯ ಶೆಟ್ಟಿ ಪ್ರತಿಭಾ ನಮನ ಸಲ್ಲಿಸಿದರು,ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಬಾಲಕೃಷ್ಣ ಕೊಡವೂರು, ತಾರನಾಥ ಹೊಳ್ಳ, ಗಿರೀಶ್ ನಾಯಕ್, ವಿಜಯ್ ಕಾಂಚನ್, ರಘು ವಡ್ಡರ್ಸೆ, ಪಲ್ಲವಿ ದೇವಾಡಿಗ, ಸದಾಶಿವ ಹೊಳ್ಳ,ಶ್ರೀಶಿವನಾರಾಯಣ ಐತಾಳ್,ಶ್ರೀಕೆ.ಪಿ.ಶೇಖರ್, ಅಲ್ತಾರು ನಾಗರಾಜ್, ಪ್ರಶಾಂತ್ ಪೂಜಾರಿ ಕದ್ರಿಕಟ್ಟು, ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಶೆಟ್ಟಿ ನಿರೂಪಿಸಿ,ಟ್ರಸ್ಟಿ ಸತೀಶ್ ವಡ್ಡರ್ಸೆ ಸ್ವಾಗತಿಸಿ,ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಪ್ರಸ್ತಾಪಿಸಿ,ಕಾರಂತ ಥೀಮ್ ಪಾರ್ಕ್ ಸಿಬ್ಬಂದಿ ಪ್ರಶಾಂತ್ ವಂದಿಸಿದರು.
ನಂತರ ಸುರಭಿ ಕಲಾ ತಂಡ ಬೈಂದೂರು ಇವರಿಂದ ಡಾ|| ಶಿವರಾಮ ಕಾರಂತ ಕಾದಂಬರಿ ಆಧಾರಿತ ಚೋಮನ ದುಡಿ ನಾಟಕ ಪ್ರದರ್ಶನವಾಯಿತು.

Comments are closed.