ಕರಾವಳಿ

ಕಾಂಗ್ರೆಸ್ಸಿಗರು ವೀರ ಸಾರ್ವಕರ್ ಪಾದದ ಧೂಳಿಗೂ ಸಮಾನರಲ್ಲ: ಶಾಸಕ ಸುನೀಲ್‌ಕುಮಾರ್

Pinterest LinkedIn Tumblr

ಉಡುಪಿ: ವೀರ ಸಾರ್ವಕರ್ ಬಗ್ಗೆ ಮಾಜಿ ಮಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಕಾಂಗ್ರೆಸ್ ಮುಖಂಡ ದಿನೇಶ್ ಗುಂಡುರಾವ್ ನೀಡಿರುವ ಹೇಳಿಕೆ ಬಾಲಿಶವಾಗಿದೆ. ಸ್ವಾತಂತ್ರ್ಯ ಚಳುವಳಿಯಲ್ಲಿ ದೇಶಪ್ರೇಮಿಯಾಗಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ವೀರ ಹೋರಾಟಗಾರ ಹಾಗೂ ದೇಶಭಕ್ತ ವೀರ ಸಾರ್ವಕರ್ ಆಗಿದ್ದಾರೆ ಎಂದು ಕಾರ್ಕಳ ಶಾಸಕ ಹಾಗೂ ವಿಧಾನಸಭಾ ಆಡಳಿತ ಪಕ್ಷದ ಮುಖ್ಯ ಸಚೇತಕ ವಿ.ಸುನೀಲ್‌ಕುಮಾರ್ ಹೇಳಿದರು.

ಮಾಧ್ಯಮದೊಂದಿಗೆ ಮಾತನಾಡಿದ ಅವರು ಸ್ವಾತಂತ್ರ ಹೋರಾಟಗಾರನ್ನು ಹಾಗೂ ದೇಶಭಕ್ತರನ್ನು ಗೌರವಿಸುವ ಪರಿಪಾಠವನ್ನು ಕಾಂಗ್ರೆಸ್ಸಿಗರು ಮೊದಲಿಗೆ ಕಲಿಯಬೇಕು. ಕಾಂಗ್ರೆಸ್ಸಿಗರಲ್ಲಿ ದೇಶವನ್ನು ಪ್ರೀತಿಸುವ ಸ್ವಭಾವವಿಲ್ಲ. ವೀರ ಸಾರ್ವಕರ್ ಬಗ್ಗೆ ಅಗೌರವ ತೋರುವ ಕಾಂಗ್ರೆಸ್ಸಿಗರು ವೀರ ಸಾರ್ವಕರ್ ಅವರ ಪಾದದ ಧೂಳಿಗೂ ಸಮಾನರಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಗುಡುಗಿದ್ದಾರೆ.

Comments are closed.