ಕರಾವಳಿ

ಜಿಲ್ಲಾದ್ಯಂತ ಗುಡುಗು ಸಹಿತ ಬಾರಿ ಮಳೆ: ಪೆರ್ಡೂರು-ಹರಿಖಂಡಿಗೆ ಕೊಚ್ಚಿಹೋದ ರಸ್ತೆ!

Pinterest LinkedIn Tumblr

ಉಡುಪಿ: ಮಂಗಳವಾರ ಸುರಿದ ಭಾರೀ ಗುಡುಗು ಸಹಿತ ಮಳೆಯಿಂದ ಉಡುಪಿ ಜಿಲ್ಲೆಯ ಹಲೆವೆಡೆ ಜನಜೀವ ಅಸ್ತವ್ಯಸ್ಥವಾಗಿದೆ. ಹೆಬ್ರಿಯ ಬೈರಂಪಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಹರಿಖಂಡಿಗೆ – ಪೆರ್ಡೂರು ರಸ್ತೆಯು ದೂಪದಕಟ್ಟೆಯ ಬಳಿ ಜನರ ಕಣ್ಣೆದುರೇ ಸಂಪೂರ್ಣ ಕೊಚ್ಚಿ ಹೋಗಿದ್ದು, ಸಂಪರ್ಕ ಕಡಿತಗೊಂಡಿದೆ.

ರಸ್ತೆಯ ಎರಡೂ ಮಗ್ಗಲುಗಳಲ್ಲಿ ಗದ್ದೆಗಳಿದ್ದು, ಭಾರೀ ಮಳೆಯಿಂದ ಗುಡ್ಡದ ನೀರು ಗದ್ದೆಗೆ ವೇಗವಾಗಿ ಹರಿದ ಪರಿಣಾಮ ರಸ್ತೆಯ ಅಡಿಭಾಗದಲ್ಲಿದ್ದ ಮೋರಿ ಕೊಚ್ಚಿ ಹೋಗಿ ಸಮಾರು 5 ಅಡಿಗಳಷ್ಟು ರಸ್ತೆ ಕುಸಿದು ಬಿದ್ದಿದೆ. ರಸ್ತೆ ಕುಸಿಯುವ ಮುನ್ಸೂಚನೆ ಗೊತ್ತಾದ ಕಾರಣ ಸ್ಥಳದಲ್ಲಿ ಜಮಾಯಿಸಿ, ವಾಹನ ಮತ್ತು ಜನರನ್ನು ಸಂಚರಿಸಲು ಬಿಡದೆ ಮುನ್ನೆಚ್ಚರಿಕೆ ವಹಿಸಿದ್ದರು. ಇದರಿಂದ ಸಂಭವ್ಯ ಅನಾಹುತ ತಪ್ಪಿದಂತಾಗಿದೆ.

ಇನ್ನು ಕುಂದಾಪುರ, ಕೊಲ್ಲೂರು, ಬೈಂದೂರು ಭಾಗದಲ್ಲಿಯೂ ರಾತ್ರಿಯವರೆಗೂ ಮಳೆಯಿತ್ತು.

Comments are closed.