ಕರಾವಳಿ

ಜೇನುತುಪ್ಪದಲ್ಲಿ ಒಣ ಖರ್ಜೂರವನ್ನು ನೆನೆಸಿ ತಿಂದರೆ ಏನಾಗುತ್ತದೆ ಅಂತಾ ಗೊತ್ತಾ..?

Pinterest LinkedIn Tumblr

ಜೇನು…ನಮ್ಮ ದೇಹಕ್ಕೆ ಬೇಕಾದ ಎಷ್ಟೋ ಪೋಷಕಾಂಶಗಳನ್ನು ಕೊಡುತ್ತದೆ. ಅನೇಕ ಔಷಧೀಯ ಗುಣಗಳು ಇದರಲ್ಲಿವೆ. ಆಂಟಿ ಬ್ಯಾಕ್ಟೀರಿಯಲ್, ಆಂಟಿ ಫಂಗಲ್, ಆಂಟಿ ವೈರಲ್ ಗುಣಗಳು ಜೇನಿನಲ್ಲಿ ಇರುವ ಕಾರಣ ಜೇನು ನಮ್ಮ ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಶಕ್ತಿಯನ್ನು ನೀಡುತ್ತದೆ. ಅದೇ ರೀತಿ ಒಣ ಖರ್ಜೂರವನ್ನು ಬಹಳಷ್ಟು ಮಂದಿ ಇಷ್ಟಪಟ್ಟು ತಿನ್ನುತ್ತಾರೆ. ಅದರಿಂದಲೂ ನಮಗೆ ಅನೇಕ ಲಾಭಗಳಿವೆ. ಜೇನಿನಲ್ಲಿ ಒಂದು ವಾರ ಕಾಲ ನೆನೆಸಿದ ಒಣ ಖರ್ಜೂರವನ್ನು ನೀವೆಂದಾದರೂ ತಿಂದಿದ್ದೀರಾ? ಆ ರೀತಿ ತಿನ್ನುವುದರಿಂದ ನಮಗೆ ಅನೇಕ ವಿಧದ ಪ್ರಯೋಜನಗಳಿವೆ. ಅದೇನು ಅಂತ ಈಗ ತಿಳಿದುಕೊಳ್ಳೋಣ.

ಒಂದು ಜಾರ್‌ ನಲ್ಲಿ 3/4ರಷ್ಟು ಜೇನು ತೆಗೆದುಕೊಳ್ಳಬೇಕು. ಅದರಲ್ಲಿ ಬೀಜ ತೆಗೆದ ಖರ್ಜೂರ ಹಾಕಬೇಕು. ಆ ಬಳಿಕ ಮುಚ್ಚಳ ಹಾಕಿ ಜಾರನ್ನು ಚೆನ್ನಾಗಿ ಕುಲುಕಬೇಕು. ಆ ಬಳಿಕ ಆ ಜಾರನ್ನು ಒಂದು ವಾರ ಕಾಲ ಹಾಗೆಯೇ ಇಡಬೇಕು. ನಡುನಡುವೆ ಆ ಜಾರನ್ನು ಶೇಕ್ ಮಾಡಬಹುದು. ವಾರದ ಬಳಿಕ ಜಾರನ್ನು ತೆಗೆದು ದಿನಕ್ಕೆ ಒಂದೆರಡು ಖರ್ಜೂರ ತಿನ್ನಬೇಕು. ಇದರಿಂದ ಏನೆಲ್ಲಾ ಲಾಭ ಸಿಗುತ್ತದೆ ಎಂದು ನೋಡೋಣ..!

1. ಮೇಲೆ ಹೇಳಿದ ವಿಧವಾಗಿ ತಯಾರಿಸಿದ ಜೇನು, ಒಣ ಖರ್ಜೂರ ಮಿಶ್ರಣದಿಂದ ಕೆಮ್ಮು, ಜ್ವರದಂತಹ ಶ್ವಾಸಕೋಶ ಸಮಸ್ಯೆಗಳು ಹೋಗುತ್ತವೆ. ಜ್ವರ ಕಡಿಮೆಯಾಗುತ್ತದೆ.
2. ದೇಹದ ರೋಗ ನಿರೋಧಕ ಶಕ್ತಿ ದುಪಟ್ಟಾಗುತ್ತದೆ. ಇದರಿಂದ ಇನ್ಫೆಕ್ಷನ್, ರೋಗಗಳು ಬರುವುದಿಲ್ಲ.
3. ನಿದ್ದೆ ಚೆನ್ನಾಗಿ ಬರುತ್ತದೆ. ನಿದ್ರಾಹೀನತೆಯಿಂದ ನರಳುವವರು ಈ ಮಿಶ್ರಣ ಕುಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ಒತ್ತಡ, ಆತಂಕದಂತಹವು ಕಡಿಮೆಯಾಗುತ್ತವೆ.

4. ಗಾಯಗಳು ಶೀಘ್ರ ಗುಣಮುಖವಾಗುತ್ತವೆ. ಆಂಟಿ ಬಯೋಟಿಕ್ ಗುಣಗಳ ಕಾರಣ ಗಾಯಗಳು, ಹುಣ್ಣು ಶೀಘ್ರವಾಗಿ ಗುಣವಾಗುತ್ತವೆ.
5. ಜ್ಞಾಪಕಶಕ್ತಿ ಹೆಚ್ಚಾಗುತ್ತದೆ. ಚಿಕ್ಕಮಕ್ಕಳಿಗೆ ನಿತ್ಯ ತಿನ್ನಿಸುವುದರಿಂದ ಓದಿನಲ್ಲಿ ಮುಂದೆ ಬರುತ್ತಾರೆ. ದೊಡ್ಡವರು ಈ ಮಿಶ್ರಣ ಸೇವಿಸಿದರೆ ಮರೆಗುಳಿತನ ಹೋಗುತ್ತದೆ.
6. ಮಹಿಳೆಯರಿಗೆ ಬೇಕಾದ ಕಬ್ಬಿಣಾಂಶ, ಕ್ಯಾಲ್ಸಿಯಂ ಹೇರಳವಾಗಿ ಲಭ್ಯವಾಗುತ್ತದೆ. ಇದು ರಕ್ತಹೀನತೆಯನ್ನು ನಿವಾರಿಸಿ ಮೂಳೆಗಳನ್ನು ಸದೃಢಗೊಳಿಸುತ್ತದೆ.
7. ಋತುಮಾನಗಳಲ್ಲಿ ಬರುವ ವಿವಿಧ ರೀತಿಯ ಅಲರ್ಜಿಗಳು ನಿವಾರಣೆಯಾಗುತ್ತವೆ. ಇನ್ಫೆಕ್ಷನ್ ಕಡಿಮೆಯಾಗುತ್ತದೆ.
8. ಮಧುಮೇಹ ಇರುವವರಿಗೆ ಉತ್ತಮ ಔಷಧಿ. ಶುಗರ್ ಲೆವೆಲ್ ಕಂಟ್ರೋಲ್ ಮಾಡುತ್ತದೆ.
9ಹಲವು ವಿಧದ ಕ್ಯಾನ್ಸರ್‌ಗಳಿಗೆ ಈ ಮಿಶ್ರಣ ದಿವ್ಯೌಷಧಿ. ಕ್ಯಾನ್ಸರ್ ಕಣಗಳು ವೃದ್ದಿಯಾಗಲ್ಲ.
10. ಜೀರ್ಣ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ. ಮಲಬದ್ಧತೆ, ಗ್ಯಾಸ್, ಅಸಿಡಿಟಿ, ಅಜೀರ್ಣದಂತಹ ಸಮಸ್ಯೆಗಳು ಬರಲ್ಲ. ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾ ವೃದ್ಧಿಯಾಗುತ್ತದೆ. ಕೆಟ್ಟ ಬ್ಯಾಕ್ಟೀರಿಯಾ ನಾಶವಾಗುತ್ತದೆ. ಹೊಟ್ಟೆಯಲ್ಲಿನ ಜಂತುಹುಳು ನಾಶವಾಗುತ್ತದೆ.
11. ರಕ್ತಸಂಚಲನೆ ಉತ್ತಮಗೊಳ್ಳುತ್ತದೆ. ರಕ್ತದ ಪ್ರಮಾಣ ಹೆಚ್ಚಾಗುತ್ತದೆ. ರಕ್ತಹೀನತೆ ಇರುವವರಿಗೆ ಇದರಿಂದ ಉಪಯುಕ್ತ. ಬಿಪಿ ಕಡಿಮೆಯಾಗುತ್ತದೆ. ಹೃದಯ ಸಂಬಂಧಿ ಸಮಸ್ಯೆಗಳು ಬರುವುದಿಲ್ಲ.
12. ಕೆಟ್ಟ ಕೊಲೆಸ್ಟೋರಾಲ್ ಹೋಗಿ ಒಳ್ಳೆಯ ಕೊಲೆಸ್ಟೋರಾಲ್ ವೃದ್ಧಿಯಾಗುತ್ತದೆ. ತೂಕ ಕಡಿಮೆಗೊಳಿಸುತ್ತದೆ. ಕೊಬ್ಬು ಕರಗುತ್ತದೆ.

Comments are closed.