ಕರಾವಳಿ

ಸುಸಂಸ್ಕೃತಿಯನ್ನು ಕೊಡುಗೆ ನೀಡಿದ ಪೂರ್ವಜರ ಕೊಡುಗೆಗಳನ್ನು ಸ್ಮರಿಸಬೇಕು-ಸಚಿವ ಕೋಟ

Pinterest LinkedIn Tumblr

ಉಡುಪಿ: ಒಂದು ಸಂಘಟನೆಯ ಹುಟ್ಟು ಸುಲಭವಾಗಿ ಆಗುತ್ತದೆ ಆದರೆ ಅದರ ಮುಂದಿನ ಬೆಳವಣಿಗೆಗೆ ಹಲವಾರು ಮನಸ್ಸುಗಳ ಶ್ರಮವಿರುತ್ತದೆ ಸಂಘಟನೆಯ ಮುಂದಿನ ಹೆಜ್ಜೆಗಳಲ್ಲಿ ಇದ್ದಕ್ಕಾಗಿ ದುಡಿದವರ ಸ್ಮರಣೆ ಅಗತ್ಯ, ನಮ್ಮ ಪೂರ್ವಜರು ನಮಗಾಗಿ ತುಂಬಾ ಕೊಡುಗೆಗಳನ್ನು ನೀಡಿದ್ದಾರೆ ಅವರು ನೀಡಿದ ಸಂಸ್ಕೃತಿ ನಾಡು ನುಡಿಯ ಫಲವಾಗಿ ನಾವು ಸುಂದರವಾಗಿ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಎಂದು ದ.ಕ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ತಿಳಿಸಿದರು.

ಅವರು ಶ್ರೀ ವಿನಾಯಕ ಯುವಕ ಮಂಡಲ(ರಿ)ಸಾಬ್ರಕಟ್ಟೆ -ಯಡ್ತಾಡಿ ಅವರ ಆಶ್ರಯದಲ್ಲಿ ನಡೆದ 8 ನೇ ವರ್ಷದ ಸಾರ್ವಜನಿಕ ಶಾರದ ಮಹೋತ್ಸವ ಕಾರ್ಯಕ್ರಮದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡುತ್ತಿದ್ದರು.

ನಮ್ಮ ನಾಡು ನುಡಿ ಸಂಸ್ಕೃತಿಗೆ ವಿದೇಶಿಗರು ಮಾರು ಹೋಗುತ್ತಿದ್ದಾರೆ,ಈ ಸಂಸ್ಕೃತಿಯನ್ನು ನಮಗೆ ಕೊಡುಗೆ ನೀಡಿದ ನಮ್ಮ ಪೂರ್ವಜರನ್ನು ಸ್ಮರಿಸಿ ಅದನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಅವಶ್ಯ ಎಂದು ಈ ಸಂದರ್ಭದಲ್ಲಿ ಹೇಳಿದರು.

ಪತ್ರಕರ್ತ, ವಾಗ್ಮಿ ಶ್ರೀಕಾಂತ್ ಶೆಟ್ಟಿ ಮಾತನಾಡಿ ಮನುಷ್ಯರಾಗಿ ನಾವು ಹುಟ್ಟಿದ್ದೇವೆ, ನಮ್ಮ ಧರ್ಮವೆಂಬುವುದು ನಾವು ಬದುಕಬೇಕು ಇನ್ನೊಬ್ಬರಿಗೆ ಬದುಕಲು ಬಿಡಬೇಕು,ಅನ್ಯ ಧರ್ಮವನ್ನು ಗೌರವಿಸಿ ನಮ್ಮ ಧರ್ಮವನ್ನು ಬೆಳೆಸುವುದೇ ನಿಜವಾದ ಧರ್ಮ,ಮನುಷ್ಯರೆಂದರೆ ಒಗ್ಗಟ್ಟಾಗಿ ಬದುಕಿ ನಮ್ಮ ಸಮಾಜಕ್ಕೆ ನಮ್ಮಿಂದಾದ ಸೇವೆ ನೀಡಬೇಕು ಎಂದು ಯುವ ಜನಾಂಗಕ್ಕೆ ಕಿವಿ ಮಾತು ಹೇಳಿದರು.

ಶ್ರೀವಿನಾಯಕ ಯುವಕ ಮಂಡಲದ ಅಧ್ಯಕ್ಷ ಶಿವರಾಮ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನಿವೃತ್ತ ಸೈನಿಕ ವಿಜಯ್ ಶೆಟ್ಟಿ,ಶಿಕ್ಷಕ ಸುರೇಶ್ ಮರಕಾಲ,ಶಿಕ್ಷಕ ಸ್ವಾಮಿ ಎನ್ ಜಿ, ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರದೀಪ್ ಬಲ್ಲಾಳ,ಸ್ವಾಗತ್ ವಿವಿಧೋದ್ಧೇಶ ಸಹಕಾರಿ ಸಂಘ ಬಾರಕೂರು ಅಧ್ಯಕ್ಷ ಸುಬ್ರಹ್ಮಣ್ಯ ಪೂಜಾರಿ,ಮಹಾತ್ಮ ಗಾಂಧಿ ಪ್ರೌಢ ಶಾಲಾ ಮುಖ್ಯೋಪಾಧ್ಯಯ ಸತೀಶ್ ನಾಯ್ಕ, ಶ್ರೀವಿನಾಯಕ ಯುವಕ ಮಂಡಲ ಗೌರವ ಸಲಹೆಗಾರರಾದ ರವೀಂದ್ರ ನಾಥ ಕಿಣಿ, ಶಿಕ್ಷಕಿ ದೇವಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ರಾಘವೇಂದ್ರ ಶೆಟ್ಟಿ ಹೆಸ್ಕುತ್ತೂರು ನಿರೂಪಿಸಿ, ಅಜಿತ್ ಕುಮಾರ್ ಎಸ್ ವರದಿ ವಾಚಿಸಿ, ಸಂತೋಷ್ ನಾಯ್ಕ ಸ್ವಾಗತಿಸಿ, ಪ್ರಶಾಂತ್ ವಂದಿಸಿದರು.

Comments are closed.