ಕರಾವಳಿ

ಕೋಟೇಶ್ವರದಲ್ಲಿ ಬೆಳಿಗ್ಗೆ ಇಟ್ಟು ಹೋದ ಬೈಕ್ ಸಂಜೆ ಬರುವಾಗ ಮಂಗಮಾಯ!

Pinterest LinkedIn Tumblr

ಕುಂದಾಪುರ: ಬೆಳಿಗ್ಗೆ ಸೈಡ್ ಲಾಕ್ ಮಾಡಿಟ್ಟು ಹೋದ ಬೈಕ್ ಸಂಜೆ ಬರುವಾಗ ನಾಪತ್ತೆಯಾದ ಘಟನೆ ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿ ನಡೆದಿದೆ.

(ಸಾಂದರ್ಭಿಕ ಚಿತ್ರ)

ಇಲ್ಲಿನ ಹಳೆಅಳಿವೆ ನಿವಾಸಿ ಸಿರಾಜ್ ಎನ್ನುವರು ಕೋಟೇಶ್ವರದ ಖಾಸಗಿ ಆಸ್ಪತ್ರೆಯ ನೆಲೆಗಡಲೆ ಅಂಗಡಿಯ ಸಮೀಪ KA 20EB 6173 ನೇ ನೋಂದಣಿ ಸಂಖ್ಯೆಯ ಬೈಕನ್ನು ಸೈಡ್ ಲಾಕ್ ಮಾಡಿಟ್ಟು ಕೆಲಸ ಮುಗಿಸಿ ವಾಪಾಸ್ಸು ಸಂಜೆ ಬಂದು ನೋಡಿದ್ದು ಮೋಟಾರು ಸೈಕಲ್ ಇರಲಿಲ್ಲ. ಬಳಿಕ ಅಕ್ಕಪಕ್ಕದ ಅಂಗಡಿಯವರಲ್ಲಿ, ಗ್ಯಾರೇಜ್ ಮಾಲಕರಲ್ಲಿ ಹಾಗು ಸುತ್ತಲಿನ ಪರಿಸರದಲ್ಲಿ ಹುಡುಕಾಡಿದರೂ ಬೈಕ್ ಪತ್ತೆಯಾಗಿರುವುದಿಲ್ಲ. ಈ ಬೈಕ್ ಬೆಲೆ 16 ಸಾವಿರ ರೂ. ಆಗಿದೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.