ಕರಾವಳಿ

ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಗೆ ರಾಜ್ಯದ‌ ಉತ್ತಮ ಸಹಕಾರಿ ಪ್ರಶಸ್ತಿ

Pinterest LinkedIn Tumblr

ಮಂಗಳೂರು : ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ಇದರ 18ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿಸೌಹಾರ್ದ ಸಹಕಾರಿಕ್ಷೇತ್ರದ 2018-2019ನೇ ಸಾಲಿನ ರಾಜ್ಯದ‌ಉತ್ತಮ ಸೌಹಾರ್ದ ಸಹಕಾರಿ ಪ್ರಶಸ್ತಿಯನ್ನು ಒಡಿಯೂರು ಶ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿ, ದಕ್ಷಿಣಕನ್ನಡ‌ಇವರಿಗೆ ನೀಡಿ ಪುರಸ್ಕರಿಸಿದೆ.

ಕರ್ನಾಟಕರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ, ಇದರ‌ಅಧ್ಯಕ್ಷರಾದ ಶ್ರೀ ಬಿ.ಹೆಚ್ ಕೃಷ್ಣಾ ರೆಡ್ಡಿಕರ್ನಾಟಕ ಸರಕಾರದ ಸನ್ಮಾನ್ಯ ಮಹಿಳಾ ಮತ್ತು ಶಿಶು ಕಲ್ಯಾಣ ಮಂತ್ರಿ ಶ್ರೀಮತಿ ಶಶಿಕಲಾ ಜೊಲ್ಲೆ‌ಅಣ್ಣ ಸಾಹೇಬ್‌ಮತ್ತು ಕ.ರಾ.ಸೌ.ಸಂ.ಸ.ನಿ ಇದರ ಮೈಸೂರು ಪ್ರಾಂತದ ನಿರ್ದೇಶಕರಾದ ಶ್ರೀ ಎಸ್.ಕೆ.ಮಂಜುನಾಥ್, ಶ್ರೀ ಎಚ್.ವಿ.ರಾಜೇವ್ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶರಣಗೌಡ ಜಿ. ಪಾಟೀಲ್‌ ಇವರು‌ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ‌ಅಧ್ಯಕ್ಷರಾದ ಲ| ಎ.ಸುರೇಶ್‌ರೈ‌ಎಂ.ಜೆ.ಎಫ್‌ಇವರಿಗೆ ಸ್ಮರಣಿಕೆಯೊಂದಿಗೆ ರಾಜ್ಯದ‌ಉತ್ತಮ ಸೌಹಾರ್ದ ಸಹಕಾರಿ ಪ್ರಶಸ್ತಿಯನ್ನು ಪ್ರಧಾನ ಮಾಡಿ ಅಭಿನಂದಿಸಿದರು

ಪರಮಪೂಜ್ಯ ಶ್ರೀ ಶ್ರೀಗುರುದೇವಾನಂದ ಸ್ವಾಮೀಜಿಗಳವರ ಶುಭಾಶೀರ್ವಾದದೊಂದಿಗೆ ಲ| ಎ ಸುರೇಶ್‌ ರೈ‌ ಎಂ.ಜೆ.ಎಫ್‌ ಇವರ‌ ಅದ್ಯಕ್ಷತೆಯಲ್ಲಿ 2011ರಲ್ಲಿ‌ ಆರಂಭವಾದ ಸಹಕಾರಿಯುಕ್ಷಿಪ್ರವಾಗಿ‌ ಅಭಿವೃದ್ಧಿಯನ್ನುಕಂಡ ಸಹಕಾರಿಯಾಗಿರುತ್ತದೆ. ಕೇವಲ 8 ವರ್ಷಗಳಲ್ಲಿ 15 ಶಾಖೆಗಳೊಂದಿಗೆಸಂಪೂರ್ಣಗಣಕೀಕೃತಕೋರ್ ಸಿಸ್ಟಂ, ಮೊಬೈಲ್‌ಆಪ್ ತಂತ್ರಜ್ಞಾನಗಳ ಮೂಲಕ ತನ ಸದಸ್ಯರಿಗೆತ್ವರಿತ ಹಾಗೂ ಪಾರದರ್ಶಕ ಸೇವೆಯನ್ನು ನೀಡುತ್ತಿದೆ.

ಒಡಿಯೂರಿನ ಪೂಜ್ಯ ಶ್ರೀಗಳವರ ಗ್ರಾಮವಿಕಾಸಯೋಜನೆಯ ಸಂಕಲ್ಪದಂತೆದಕ್ಷಿಣಕನ್ನಡ- ಉಡುಪಿ, ಉಭಯ ಜಿಲ್ಲೆಗಳ ಹಳ್ಳಿ ಹಳ್ಳಿಗಳ ಬಡಜನರನ್ನು ಒಗ್ಗೂಡಿಸಿ ಸ್ವ-ಸಹಾಯ ಗುಂಪುಗಳನ್ನು ಕಟ್ಟಿ ಆ ಮೂಲಕ ಬಡಜನರ‌ಆರ್ಥಿಕ-ಸಾಮಾಜಿಕಮಟ್ಟವನ್ನು ಸುಧಾರಿಸುವಲ್ಲಿ ಸಹಕಾರಿಯು ಪ್ರಾಮಾಣಿಕ ಸೇವೆಯನ್ನು ಸಲ್ಲಿಸುತ್ತಿದೆ.ಸಹಕಾರಿಯ‌ಅಧ್ಯಕ್ಷರಾದ  ಲ| ಎ ಸುರೇಶ್‌ರೈ‌ಎಂ.ಜೆ.ಎಫ್‌ಇವರು ಸಹಕಾರಿ ಸೇಬೆಯನ್ನು ಪೂಜ್ಯ ಶ್ರೀಗಳವರ ಸೇವೆ ಎಂದು ತಿಳಿದು ಪ್ರಾಮಾಣಿಕತೆ, ಸಮರ್ಪಣಾ ಭಾವದಿಂದ ಸಹಕಾರಿಯ‌ ಉನ್ನತಿಗೆ ಶ್ರಮ ವಹಿಸಿದವರು.

8 ವರ್ಷಗಳಿಂದ ಅಧ್ಯಕ್ಷರಾಗಿ ಸಾರ್ಥಕ ಸೇವೆಯನ್ನು ಸಲ್ಲಿಸಿರುವುದರಿಂದ ಪೂಜ್ಯ ಶ್ರೀಗುರುಗಳ ಆಶೀರ್ವಾದವು ಪ್ರಸಾದವಾಗಿ ಪ್ರಶಸ್ತಿ ರೂಪದಲ್ಲಿ ಲಭಿಸಿದೆ‌ಎಂದರು.

ಈ ಪ್ರಶಸ್ತಿಯು ಒಡಿಯೂರು ಸಹಕಾರಿಯ‌ಎಲ್ಲಾ ಸದಸ್ಯರಿಗೆ, ಆಡಳಿತ ಮಂಡಳಿಗೆ, ಸಿಬ್ಬಂದಿಗಳಿಗೆ, ಒಡಿಯೂರು ಸಂಸ್ಥಾನದ‌ ಎಲ್ಲಾ ಭಕ್ತರಿಗೆ ಸಂದ ಗೌರವವಾಗಿದೆ‌ಎಂದರು.

ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿಕರ್ನಾಟಕರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ‌ಎಲ್ಲಾ ನಿರ್ದೇಶಕರು ಮೈಸೂರು ಪ್ರಾಂತದ‌ ಎಲ್ಲಾ  ಅಧಿಕಾರಿಗಳು ಒಡಿಯೂರು ಸಹಕಾರಿಯ ಆಡಳಿತ ಮಂಡಳಿಯನಿರ್ದೇಶಕರಾದ ಶ್ರೀ ಸೇರಾಜೆಗಣಪತಿ ಭಟ್, ಶ್ರೀ ಲಿಂಗಪ್ಪಗೌಡ ಪನೆಯಡ್ಕ, ದೇವಪ್ಪ ನೋಂಡ, ಶ್ರೀ ತಾರಾನಾಥ ಶೆಟ್ಟಿ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಎಂ.ಉಗ್ಗಪ್ಪ ಶೆಟ್ಟಿಹಾಗೂ ಇತರ ಅನೇಕ ಗಣ್ಯರು‌ ಉಪಸ್ಥಿತರಿದ್ದರು.

Comments are closed.