ಕರಾವಳಿ

ಸುರತ್ಕಲ್ ಬೀಚ್ ಬಳಿ ನಿಷೇದಿತ ಮಾದಕ ದ್ರವ್ಯ (MDM) ಮಾರಾಟಕ್ಕೆ ಯತ್ನ : ಇಬ್ಬರ ಸೆರೆ

Pinterest LinkedIn Tumblr

ಮಂಗಳೂರು : ಸುರತ್ಕಲ್ ಠಾಣಾ ವ್ಯಾಪ್ತಿಯ ಲೈಟ್ ಹೌಸ್ ಬಳಿ ಇರುವ ಗೆಸ್ಟ್ ಹೌಸ್ ಒಂದರ ಸಮೀಪ ಸಮುದ್ರ ಕಿನಾರೆಯಲ್ಲಿ ಎಮ್.ಡಿ.ಎಮ್ ನಿಷೇದಿತ ಮಾದಕ ದ್ರವ್ಯವನ್ನು ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸೊತ್ತು ಸಮೇತಾ ವಿಶೇಷ ಅಪರಾಧ ಪತ್ತೆ ದಳ ಮತ್ತು ಸುರತ್ಕಲ್ ಪೊಲೀಸರ ಜಂಟಿ ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಸುರತ್ಕಲ್ ಸಮೀಪದ ಕೃಷ್ಣಾಪುರ ಚೊಕ್ಕಬೆಟ್ಟು ನಿವಾಸಿಗಳಾದ ಮಹಮ್ಮದ್ ಮುಜಾಮಿಲ್ @ಜಮ್ಮಿ (40) ಹಾಗೂ ಮೊಹಮ್ಮದ್ ಶರಿಫ್ ಸಿದ್ದಿಕ್ (40) ಎಂದು ಗುರುತಿಸಲಾಗಿದೆ.

ಇಬ್ಬರು ವ್ಯಕ್ತಿಗಳು ಸುರತ್ಕಲ್ ಠಾಣಾ ವ್ಯಾಪ್ತಿಯ ಸುರತ್ಕಲ್ ಲೈಟ್ ಹೌಸ್ ಬಳಿ ಇರುವ ಗೆಸ್ಟ್ ಹೌಸ್ ಒಂದರ ಸಮೀಪ ಸಮುದ್ರ ಕಿನಾರೆ ಯ ಸಾರ್ವಜನಿಕ ರಸ್ತೆಯ ಬದಿ ತಮ್ಮ ಬಿಳಿ ಬಣ್ಣದ ಕಾರಿನಲ್ಲಿ ಎಮ್.ಡಿ.ಎಮ್ ಎಂಬ ನಿಷೇದಿತ ಮಾದಕ ದ್ರವ್ಯವನ್ನು ಅಮಾಯಕ ವಿದ್ಯಾರ್ಥಿಗಳಿಗೆ ಮಾರಾಟ ಮಾಡುವ ಉದ್ದೇಶದಿಂದ ತಮ್ಮ ಬಳಿ ಇಟ್ಟುಕೊಂಡಿರುವುದಾಗಿ ಖಚಿತ ಮಾಹಿತಿ ಲಹಿಸಿದ ಹಿನ್ನೆಲೆಯಲ್ಲಿ ಸುರತ್ಕಲ್ ಪೊಲೀಸ್ ನಿರೀಕ್ಷಕರು ಮತ್ತು ವಿಶೇಷ ಅಪರಾಧ ಪತ್ತೆದಳದ ಅಧಿಕಾರಿ/ಸಿಬ್ಬಂದಿಗಳು ಸ್ಥಳಕ್ಕೆ ದಾಳಿ ನಡೆಸಿ ಸ್ಥಳದಲ್ಲಿ ಬಿಳಿ ಬಣ್ಣದ ಕಾರೊಂದರಲ್ಲಿ ಇಬ್ಬರು ವ್ಯಕ್ತಿಗಳು ಎಮ್.ಡಿ.ಎಮ್. ಎಂಬ ನಿಷೇದಿತ ಮಾದಕ ದ್ರವ್ಯವನ್ನು ಇಟ್ಟುಕೊಂಡಿರುವುದು ಕಂಡುಬಂದಿದ್ದು ಕೂಡಲೇ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡ್ಡಿರುತ್ತಾರೆ.

ನಿಷೇದಿತ ಮಾದಕ ವಸ್ತುವನ್ನು ಮುಂಬೈನಿಂದ ತಂದು ಮಾರಾಟ ಮಾಡುತ್ತಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಕಾರು ಮತ್ತು ನಿಷೇದಿತ ಮಾದಕ ದ್ರವ್ಯ(ಎಮ್.ಡಿ.ಎಮ್) ನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿರುತ್ತಾರೆ. ಬಿಳಿ ಬಣ್ಣದ ಕಾರಿನ ಅಂದಾಜು ಮೌಲ್ಯ- 4 ಲಕ್ಷ ರೂ, 2.MDM 11 gm ಅಂದಾಜು ಮೌಲ್ಯ-30.000 ರೂ, ವಶಪಡಿಸಿಕೊಂಡಿರುವ ನಗದು ಹಣ- 10.950/- ರೂ ಹಾಗೂ ನಾಲ್ಕು ಮೊಬೈಲ್ ಗಳ ಅಂದಾಜು ಮೌಲ್ಯ-21.000ರೂ, ಒಟ್ಟು ವಶಪಡಿಸಿಕೊಂಡ ಸೊತ್ತಿನ ಅಂದಾಜು ಮೌಲ್ಯ- 4.61.950 ರೂ. ಆಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಣಂಬೂರು ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀನಿವಾಸ ಗೌಡ ಐ.ಪಿ.ಎಸ್. ರವರ ನೇತೃತ್ವದ ನಡೆದ ಕಾರ್ಯಚರಣೆಯಲ್ಲಿ ಸುರತ್ಕಲ್ ಪೊಲೀಸ್ ನಿರೀಕ್ಷಕರಾದ ರಾಮಕೃಷ್ಣ ಮತ್ತು ಉತ್ತರ ಉಪವಿಭಾಗದ ವಿಶೇಷ ಅಪರಾಧ ಪತ್ತೆ ದಳದ ಅಧಿಕಾರಿ/ಸಿಬ್ಬಂದಿಗಳಾದ ಮೊಹಮ್ಮದ್ ಎಎಸ್ಐ. ಕುಶಲ ಮಣಿಯಾಣಿ, ವಿಜಯ್ ಕಾಂಚನ್, ಸತೀಶ್ ಎಮ್. ಇಸಾಕ್ ಅಹಮ್ಮದ್ ಮತ್ತು ಶರಣ್ ಕಾಳಿ ರವರುಗಳು ಹಾಗೂ ಸುರತ್ಕಲ್ ಪೊಲೀಸ್ ಠಾಣಾ ಸಿಬ್ಬಂಧಿಗಳು ಭಾಗವಹಿಸಿರುತ್ತಾರೆ.

Comments are closed.