ಕರಾವಳಿ

ಶಿಕ್ಷಕರನ್ನು ಗುರುತಿಸಿ ಗೌರವಿಸುವುದು ಅತ್ಯಂತ ಮಹತ್ತರ ಸೇವೆ : ಯುವವಾಹಿನಿ ಬಗ್ಗೆ ದಯಾನಂದ ಕಟೀಲ್ ಶ್ಲಾಘನೆ

Pinterest LinkedIn Tumblr

ಮಂಗಳೂರು : ನಗರದ ಉಜ್ಜೋಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯುವವಾಹಿನಿ ಕಂಕನಾಡಿ ಘಟಕದ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಕರನ್ನು ಗುರುತಿಸಿ ಗೌರವಿಸುವ ಗುರುನಮನ ಕಾರ್ಯಕ್ರಮ ಇತ್ತೀಚೆಗೆ ಉಜ್ಜೋಡಿ ಶ್ರೀ ಮಹಾಂಕಾಳಿ ದೈವಸ್ಥಾನದ ಆವರಣದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಶಾರದ ಕಾಲೇಜಿನ ಪ್ರಾಂಶುಪಾಲರಾದ ದಯಾನಂದ ಕಟೀಲ್ ಭಾಗವಹಿಸಿ ಶಿಕ್ಷಕರನ್ನು ಗುರುತಿಸಿ ಗೌರವಿಸುವುದು ಅತ್ಯಂತ ಮಹತ್ತರ ಸೇವೆ ಎಂದು ಯುವವಾಹಿನಿ ಕಂಕನಾಡಿ ಘಟಕದ ವಿವಿಧ ಚಟುವಟಿಕೆಗಳ ಬಗ್ಗೆ ಶ್ಲಾಘಿಸುತ್ತಾ ಶಿಕ್ಷಕರ ದಿನಾಚರಣೆ ಮಹತ್ವದ ಬಗ್ಗೆ ಮಾಹಿತಿ ನೀಡಿದರು.

ಶಿಕ್ಷಕರಾದ ಸೈಂಟ್ ಅಲೋಶಿಯಸ್ ಕಾಲೇಜಿನ ರಾಕೇಶ್ ಕುಮಾರ್, ಬಂಟ್ವಾಳ ಅಜಿಲಮೊಗರು ಸರ್ಕಾರಿ ಪ್ರಾಥಮಿಕ ಶಾಲೆಯ ದೇವಕಿ ಕಿಶೋರ್, ಆಳ್ವಾಸ್ ಕಾಲೇಜಿನ ಪ್ರೀತಂ ಕುಂದರ್, ಕರಾವಳಿ ಇಂಜಿನಿಯರಿಂಗ್ ಕಾಲೇಜಿನ ನಮೃತ, ಸರ್ವಜ್ಞ ಐಎಎಸ್ ಅಕಾಡೆಮಿಯ ಸುರೇಶ್ ಎಂ ಎಸ್, ಹಜರತ್ ಆಂಗ್ಲ ಮಾಧ್ಯಮ ಶಾಲೆಯ ಮಮತ, ಗಣಪತಿ ಪದವಿಪೂರ್ವ ಕಾಲೇಜಿನ ದಿವ್ಯರವರನ್ನು ಗೌರವಿಸಲಾಯಿತು.

ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್, ಸಲಹೆಗಾರರಾದ ಜಯರಾಂ ಕಾರಂದೂರು, ಮಂಗಳೂರು ಘಟಕದ ಮಾಜಿ ಅಧ್ಯಕ್ಷರಾದ ಹರೀಶ್, ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ವಿದ್ಯಾ ರಾಕೇಶ್, ಘಟಕದ ಮಾಜಿ ಅಧ್ಯಕ್ಷರುಗಳಾದ ಶೇಖರ್ ಅಮಿನ್, ಹರೀಶ್ ಸನಿಲ್, ಗೋಪಾಲ ಪೂಜಾರಿ, ಭವಿತ್ ರಾಜ್ ಉಪಸ್ಥಿತರಿದ್ದರು.

ಸುರೇಶ್ ಎಂ ಎಸ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ವರದಿ ವಾಚಿಸಿದರು. ಉಪಾಧ್ಯಕ್ಷೆ ಸುಮಾ ವಸಂತ ಧನ್ಯವಾದ ಅರ್ಪಿಸಿದರು.

Comments are closed.