ಕರಾವಳಿ

ರಾಷ್ಟ್ರೀಯ ಮಕ್ಕಳ ಉತ್ಸವ – ಶ್ರೀ ಕೃಷ್ಣ ವೇಷ ಸ್ಪರ್ಧೆಯ ಮಾಹಿತಿ ಪತ್ರಕ ಬಿಡುಗಡೆ

Pinterest LinkedIn Tumblr

ಮಂಗಳೂರು : ವರ್ಷಂಪ್ರತಿ ಶ್ರೀ ಕ್ಷೇತ್ರ ಕದ್ರಿಯಲ್ಲಿ ಜರುಗುವ ಕಲ್ಕೂರ ಪ್ರತಿಷ್ಠಾನ – ಶ್ರೀ ಕೃಷ್ಣ ವೇಷ ಸ್ಪರ್ಧೆ – ರಾಷ್ಟ್ರೀಯ ಮಕ್ಕಳ ಉತ್ಸವವು ಇದೇ ತಿಂಗಳ 23ರ ಶುಕ್ರವಾರ ಬೆಳಿಗ್ಗೆ 9ರಿಂದ ರಾತ್ರಿ 9 ತನಕ ಜರಗಲಿದ್ದು, ಏಕ ಕಾಲದಲ್ಲಿ 30ಕ್ಕೂ ಮಿಕ್ಕಿದ ವಿಭಾಗಗಳಲ್ಲಿ ಸ್ಪರ್ಧೆ ಜರುಗಲಿದ್ದು ಈ ಉತ್ಸವದ ಮಾಹಿತಿ ಆಮಂತ್ರಣ ಪತ್ರಿಕೆ ಶಾರದಾ ವಿದ್ಯಾಲಯದಲ್ಲಿ ಇಂದು ಲೋಕರ್ಪಣೆ ಗೊಂಡಿತು.

ಈ ಮಾಹಿತಿ ಪತ್ರಕ ಬಿಡುಗಡೆ ಕಾರ್ಯಕ್ರಮದಲ್ಲಿ ಕಲ್ಕೂರ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರು ಹಾಗೂ ಶಾರದಾ ವಿದ್ಯಾ ಸಂಸ್ಥೆಗಳ ವಿಶ್ವಸ್ಥರಾದ ಶ್ರೀ ಪ್ರದೀಪ ಕುಮಾರ ಕಲ್ಕೂರ, ಶಾರದಾ ವಿದ್ಯಾ ಸಂಸ್ಥೆಗಳ ಶೈಕ್ಷಣಿಕ ಸಲಹೆಗಾರರಾದ ಡಾ| ಲೀಲಾ ಉಪಾಧ್ಯಾಯ, ಎಸ್.ಕೆ.ಡಿ.ಬಿ. ಅಸೋಸಿಯೇಶನ್ನಿನ ಅಧ್ಯಕ್ಷರಾದ ಶ್ರೀ ಪ್ರಭಾಕರ ರಾವ್ ಪೇಜಾವರ, ನಿವೃತ್ತ ಬ್ಯಾಂಕ್ ಮೇನೆಜರ್ ಶ್ರೀ ಜನಾರ್ಧನ ಹಂದೆ, ಅಂತರಾಷ್ಟ್ರೀಯ ವ್ಯಕ್ತಿತ್ವ ವಿಕಸನ ತರಬೇತುದಾರರಾದ ಮೈಸೂರಿನ ಶ್ರೀ ಸತೀಶ್, ಶಾರದಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಮಹಬಲೇಶ್ವರ ಭಟ್, ಉಪ-ಪ್ರಾಂಶುಪಾಲರಾದ ಶ್ರೀ ಪ್ರಕಾಶ್ ನಾಕ್, ಶಾರದಾ ವಿದ್ಯಾಲಯದ ಉಪ-ಪ್ರಾಂಶುಪಾಲರಾದ ಶ್ರೀ ದಯಾನಂದ ಕಟೀಲ್  ಉಪಸ್ಥಿತರಿದ್ದರು.

Comments are closed.