ಕರಾವಳಿ

ಅಳಪೆ ಉತ್ತರ ವಾರ್ಡ್ ಹಾಗೂ ಜಪ್ಪಿನಮೊಗರು ವಾರ್ಡ್‌ನಲ್ಲಿ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ 

Pinterest LinkedIn Tumblr

ಮಂಗಳೂರು : ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರ ಸೂಚನೆಯಂತೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 51ನೇ ಅಳಪೆ ಉತ್ತರ ವಾರ್ಡಿನ ಸಿರ್ಲಪಡು ಜಾಯಿಸನ್ ಮನೆಯ ಬಳಿಯಿಂದ ರಸ್ತೆಯ ಅಂತ್ಯದವರೆಗೆ ಕಾಂಕ್ರೀಟಿಕರಣಕ್ಕೆ ಗುದ್ದಲಿಪೂಜೆ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ವಸಂತ ಪೂಜಾರಿ, ಸಂದೀಪ್ ಗರೋಡಿ, ನರೇಶ್ ಸರಿಪಲ್ಲ, ಪ್ರವೀಣ್ ನಿಡೇಲ್, ಸುರೇಶ್ ಆಚಾರ್ ನೂಜಿ, ಗೀತಾ ಶೆಟ್ಟಿ, ಗಾಯತ್ರಿ ಕನ್ನಗುಡ್ಡ, ಶರಣ್ ಸರಿಪಲ್ಲ, ಸಂತೋಷ್ ಕೋಡಕ್ಕಲ್ ಸಹಿತ ಸ್ಥಳೀಯರು ಉಪಸ್ಥಿತರಿದ್ದರು.

54 ನೇ ಜಪ್ಪಿನಮೊಗರು ವಾರ್ಡಿನಲ್ಲಿ ಚರಂಡಿ ಕಾಮಗಾರಿಗೆ ಗುದ್ದಲಿಪೂಜೆ :

ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರ ಸೂಚನೆಯಂತೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 54 ನೇ ಜಪ್ಪಿನಮೊಗರು ವಾರ್ಡಿನ ವಿನಯ ಕಡೆಕಾರು ಮಸ್ಕರೇನಸ್ ರವರ ಹಳೆಮಳೆಯ ಹಿಂಬದಿಯಿಂದ ಹಾದುಹೋಗುವ ಚರಂಡಿಯನ್ನು ಗಣೇಶ ನಗರದ ತೋಡಿಗೆ ಸಂಪರ್ಕಿಸುವ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲಾಯಿತು.

ಮನಪಾ ಮಾಜಿ ಸದಸ್ಯ ಜೆ ಸುರೇಂದ್ರ, ನಾರಾಯಣ ರೈ, ರಾಮಪ್ರಸಾದ್ ಶೆಟ್ಟಿ, ಶ್ಯಾಮಪ್ರಸಾದ್ ಕಡೆಕಾರ್, ಸುನೀಲ್, ವಿಲಾಸಿನಿ, ತೃಪ್ತಿ, ವಸಂತಿ ಟೀಚರ್, ಸವಿತಾ ಶೆಟ್ಟಿ, ದೀಪಕ್, ಹರೀಶ್ ಬಜಾಲ್, ಲೋಹಿತ್ ಶೆಟ್ಟಿ, ಜೋನ್ ಪಿಂಟೋ ಮುಂತಾದವರು ಉಪಸ್ಥಿತರಿದ್ದರು.

Comments are closed.