ಕರಾವಳಿ

ಮೋಸದಿಂದ ಕಾರು ಮಾರಾಟ:ಇಬ್ಬರು ಖತರ್ನಾಕ್ ಆರೋಪಿಗಳ ಸಹಿತ 36 ಲಕ್ಷದ 5 ಕಾರು ವಶಕ್ಕೆ ಪಡೆದ ಬ್ರಹ್ಮಾವರ ಪೊಲೀಸರು

Pinterest LinkedIn Tumblr

ಉಡುಪಿ: ಮೋಸದಿಂದ ಕಾರನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.

ಅಬ್ದುಲ್ಲ ಯಾನೆ ಅಬ್ಬಾಸ್ ತಲಪಾಡಿ, ಮಹಮ್ಮದ್‌ ಸಫಾನ್‌ ವಿಟ್ಲ ಬಂಧಿತರು. ಇಬ್ರಾಹಿಂ ಮಂಗಳೂರು ತಲೆಮರೆಸಿ ಕೊಂಡಿದ್ದಾನೆ.

ಪ್ರಕರಣದ ವಿವರ: ಲೀಸ್‌ಗೆ ಕೊಟ್ಟ ಕಾರುಗಳನ್ನು ಮತ್ತು ಅಂತರ್ಜಾಲದಲ್ಲಿ (OlX) ಮಾರಾಟಕ್ಕೆ ಇರುವ ಕಾರುಗಳನ್ನು ನಮಗೆ ಬೇಕು ಎಂದು ಸುಳ್ಳು ಹೇಳಿ ಮುಂಗಡ ಹಣ ನೀಡುತ್ತಿದ್ದರು. ಬಳಿಕ ಕರಾರು ಪತ್ರ ಮಾಡಿ ಕಾರುಗಳನ್ನು ದೂರದ ಊರುಗಳಿಗೆ ತೆಗೆದುಕೊಂಡು ಹೋಗಿ ಸ್ವಂತ ಕಾರೆಂದು ನಂಬಿಸಿ, ಆರ್‌.ಸಿ.ಯಲ್ಲಿ ಹೆಸರು ಬದಲಾವಣೆ ಆಗಲು ಬಾಕಿ ಎಂದು ಹೇಳುತ್ತಿದ್ದರು. ಬಳಿಕ ಅಡ್ವಾನ್ಸ್‌ ಹಣ ಪಡೆದು ಕಾರು ಮಾರಿ ಮೋಸ ಮಾಡುತ್ತಿದ್ದರು.

ಬಂಧಿತರಿಂದ ಒಟ್ಟು 39 ಲ. ರೂ. ಮೌಲ್ಯದ 5 ಕಾರುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಇವುಗಳನ್ನು ಬಳ್ಳಾರಿಯಲ್ಲಿ ಶಿವ ಕುಮಾರ ಅವರಿಗೆ ಮಾರಾಟ ಮಾಡಲಾಗಿತ್ತು. ಈ ಕುರಿತು ಕುರ್ಪಾಡಿಯ ಸುನಿಲ್ ಎನ್ನುವರು‌ ದೂರು ನೀಡಿದ್ದರು. ಆರೋಪಿಗಳ ಪೈಕಿ ಅಬ್ದುಲ್ಲ ವಿರುದ್ಧ ಬೆಳ್ಳಾರೆ ಠಾಣೆಯಲ್ಲಿ ಕೊಲೆ ಪ್ರಕರಣ ಹಾಗೂ ಬಜಪೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

ಈ ಗಂಭೀರ ಪ್ರಕರಣದ ತನಿಖೆಯ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಹಾಗೂ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರರವರ ನಿರ್ದೇಶನದಂತೆ ಹಾಗೂ ಉಡುಪಿ ಜಿಲ್ಲಾ ಪೊಲೀಸ್ ಉಪಾಧೀಕ್ಷಕ ಜಯಶಂಕರ್ ಟಿ.ಆರ್. ಮತ್ತು ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಶ್ರೀಕಾಂತ ಕೆ. ರವರ ಮಾರ್ಗದರ್ಶನದಲ್ಲಿ ಬ್ರಹ್ಮಾವರ ಪೊಲೀಸ್ ಠಾಣಾ ಪಿ.ಎಸ್.ಐ ರಾಘವೇಂದ್ರ ಸಿ. ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದರು.

ವಶಕ್ಕೆ ಪಡೆದ ಕಾರುಗಳು….
1) ಕೆಎ20 ಝೆಡ್ 2575 ಸ್ಕಾರ್ಪಿಯೋ ಕಾರು, ಅಂದಾಜು ಮೌಲ್ಯ ರೂಪಾಯಿ 5,00,000/-,
2) ಕೆಎ19ಎಂ.ಎಫ್8166 ಮಹೀಂದ್ರ XUV 500 ಕಾರು, ಅಂದಾಜು ಮೌಲ್ಯ ರೂಪಾಯಿ 15,00,000/-,
3) ಕೆಎ19ಎಂಇ1245 ಐ20 SPORTS ಕಾರು ಅಂದಾಜು ಮೌಲ್ಯ ರೂಪಾಯಿ 4,00,000/-,
4) ಕೆಎ21ಪಿ1630 ಮಹೀಂದ್ರ TUV 300 ಕಾರು ಅಂದಾಜು ಮೌಲ್ಯ ರೂಪಾಯಿ 7,00,000/- ಮತ್ತು
5) ಕೆಎ17ಪಿ9945 ನೇ ನಂಬ್ರದ ಬ್ರೀಜಾ ಕಾರು ಅಂದಾಜು ಮೌಲ್ಯ ರೂಪಾಯಿ 8,00,000/-ನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ವಶಪಡಿಸಿಕೊಂಡ ವಾಹನಗಳ ಒಟ್ಟು ಮೌಲ್ಯ ರೂಪಾಯಿ 39 ಲಕ್ಷ ಎನ್ನಲಾಗಿದೆ.

ಈ ವಿಶೇಷ ಕಾರ್ಯಚರಣೆ ತಂಡದಲ್ಲಿ ಎ.ಎಸ್.ಐ. ಸಾಂತಪ್ಪ, ಹೆಚ್.ಸಿ. ವೆಂಕಟರಮಣ ದೇವಾಡಿಗ, ಹೆಚ್.ಸಿ. ರಾಘವೇಂದ್ರ ಕಾರ್ಕಡ, ಹೆಚ್.ಸಿ. ಪ್ರವೀಣ ಶೆಟ್ಟಿಗಾರ, ಪಿಸಿ ದಿಲೀಪ ಕುಮಾರ, ಹೆಚ್.ಸಿ. ಪ್ರದೀಪ ನಾಯಕ್ ಬ್ರಹ್ಮಾವರ ವೃತ್ತ ಕಚೇರಿರವರು ಪಾಲ್ಗೊಂಡಿರುತ್ತಾರೆ. ಜಿಲ್ಲಾ ಪೊಲೀಸ್ ಕಚೇರಿಯ ಸಿಬ್ಬಂದಿ ಶಿವಾನಂದ ಸಿಡಿಆರ್ ವಿಭಾಗದವರು ಸಹಕರಿಸಿದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.