ಕರಾವಳಿ

ನಿತ್ಯಾನುಷ್ಠಾನ ಹಾಗೂ ಅನನ್ಯ ಸಾಧನೆ ಪರಿಪೂರ್ಣ ವ್ಯಕ್ತಿತ್ವಕ್ಕೆ ರಹದಾರಿ ; ಕಲ್ಕೂರ

Pinterest LinkedIn Tumblr

ಮಂಗಳೂರು : ಮನುಷ್ಯನ ಪರಿಪೂರ್ಣ ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ನಿತ್ಯಾನುಷ್ಠಾನ ಹಾಗೂ ಅನನ್ಯ ಸಾಧನೆ ರಹದಾರಿಯಾಗ ಬಲ್ಲುದು‌ ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ‌ ಅಧ್ಯಕ್ಷ‌ ಎಸ್. ಪ್ರದೀಪ ಕುಮಾರ ಕಲ್ಕೂರ ಹೇಳಿದರು.

ಶ್ರೀ ಶಾರದಾ ಸೇವಾ ಟ್ರಸ್ಟ್ ಸುರತ್ಕಲ್ ಮತ್ತು ಕಲ್ಕೂರ ಪ್ರತಿಷ್ಠಾನದ ಸಹಯೋಗದೊಂದಿಗೆ ಜರಗಿದ ವಿದ್ವಾನ್‌ ಡಾ| ಪಾವಗಡ ಪ್ರಕಾಶರಾಯರಿಂದ ಶ್ರೀ ಮದ್ಭಗವದ್ಗೀತಾ ಪ್ರವಚನ ಮಾಲೆಯ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದರು.

ಯುವಪೀಳಿಗೆಯು ಆಧುನಿಕ ಶಿಕ್ಷಣದ ಜತೆಗೆ ಜೀವನ ಮೌಲ್ಯ, ಜೀವನೋತ್ಸಾಹದ ಪಾಠವನ್ನು ಕಲಿಯ ಬೇಕಿದೆ. ಭಾರತೀಯ ಧರ್ಮ ಶಾಸ್ತ್ರದ ಸಂಪೂರ್ಣ ತಿರುಳು ಭಗವದ್ಗೀತೆಯಲ್ಲಿ‌ ಅಡಕವಾಗಿದೆ‌ ಎಂದರು.

ಎಂಟು ದಿನಗಳ ಪರ್ಯಂತ ಯಶಸ್ವಿಯಾಗಿ ಭಗವದ್ಗೀತೆ ಪ್ರವಚನ ನಡೆಸಿಕೊಟ್ಟ ವಿದ್ವಾನ್‌ ಡಾ.ಪಾವಗಡ ಪ್ರಕಾಶರಾಯರನ್ನು ಅಭಿನಂದಿಸಿ ಸನ್ಮಾನಿಸಲಾಯ್ತು.

ಈ ಸಂದರ್ಭ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು, ಕರ್ಣಾಟಕ ಬ್ಯಾಂಕ್ ನ ಅಧ್ಯಕ್ಷರಾದ ಪಿ. ಜಯರಾಮ ಭಟ್, ಪ. ಶ್ರೀರಾಮ ರಾವ್, ಸುಧಾಕರರಾವ್ ಪೇಜಾವರ, ಕೃಷ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು

Comments are closed.