ಕರಾವಳಿ

ನಾಳೆ ಕದ್ರಿ ಡಿಂಕಿಡೈನ್ ಚಾವಡಿಡ್ “ಆಟಿ ಅಮಾಸೆದ ಕಷಾಯ ಬೊಕ್ಕ ಮರ್ದ್ ಗಂಜಿ ಪಟ್ಟುನೆ” ಕಾರ್ಯಕ್ರಮ

Pinterest LinkedIn Tumblr

ಮಂಗಳೂರು, ಜುಲೈ.31: ತುಳುವೆರೆ ಆಯನ ಕೂಟ ಕುಡ್ಲ ಇದರ ವತಿಯಿಂದ ಆಟಿ ಅಮಾವಾಸ್ಯೆ ಪ್ರಯುಕ್ತ ನಾಳೆ (ಆಗಸ್ಟ್ 1 ) ಕದ್ರಿ ಪಾರ್ಕ್ ಬಳಿ ಇರುವ ಡಿಂಕಿ ಡೈನ್ ಪರಿಸರದಲ್ಲಿ ಆಟಿ ಅಮಾಸೆದ ಕಷಾಯ ಬೊಕ್ಕ ಮರ್ದ್ ಗಂಜಿ ಪಟ್ಟುನೆ” ಕಾರ್ಯಕ್ರಮ ಬೆಳಿಗ್ಗೆ ಆರರಿಂದ ಎಂಟರವರೆಗೆ ನಡೆಯಲಿರುವುದು.

ಇದೇ ವೇಳೆ ದಯಾನಂದ ಜಿ.ಕತ್ತಲ್ಸಾರ್ ರವರು ಆಟಿ ತಿಂಗಳ ಆಚಾರ-ವಿಚಾರಗಳ ಬಗ್ಗೆ ಬರೆದ “ಆಟಿ” ಪುಸ್ತಕ ಬಿಡುಗಡೆ ನಡೆಯಲಿರು ವುದು.

ಆಟಿ ಅಮಾವಾಸ್ಯೆಯಂದು ಹಾಳೆ ಮರದ ಕೆತ್ತೆಯನ್ನು ಕಷಾಯವನ್ನು ಕುಡಿದರೆ ನಮ್ಮ ಶರೀರದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ಸಕಲ ಚರ್ಮವ್ಯಾಧಿಗಳು ಗುಣವಾಗುತ್ತದೆ, ಶರೀರದ ಲವಲವಿಕೆಯನ್ನು ಹೆಚ್ಚಿಸುತ್ತದೆ ಎಂಬುದು ಹಿರಿಯರ ನಂಬಿಕೆ ಮತ್ತು ವೈಜ್ಞಾನಿಕ ಪ್ರಯೋಗದಿಂದ ಕಂಡುಬಂದಿದೆ.

ಈ ಉಚಿತ ಸೇವೆಯನ್ನು ಎಲ್ಲರೂ ಹೆಚ್ಚಿನ ರೀತಿಯಲ್ಲಿ ಪ್ರಯೋಜನ ಪಡೆದುಕೊಳ್ಳಬೇಕಾಗಿ ತುಳುವೆರೆ ಆಯನೊ ಕೂಟದ ಗೌರವಾಧ್ಯಕ್ಷ ಡಾ. ಆರೂರು ಪ್ರಸಾದ್ ರಾವ್, ಅಧ್ಯಕ್ಷರಾದ ದಯಾನಂದ ಕತ್ತಲ್ಸಾರ್, ಡಿಂಕಿ ಡೈನ್ ಮಾಲಕರಾದ ಸ್ವರ್ಣ ಸುಂದರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.