ಕರಾವಳಿ

ಕಂಕಳಲ್ಲಿನ ಕಪ್ಪು ಕಲೆಯನ್ನು ಹೋಗಿಸುವ ಸುಲಭ ಮಾರ್ಗ

Pinterest LinkedIn Tumblr

ಸಾಮಾನ್ಯವಾಗಿ ಎಲ್ಲರಿಗೂ ಕೂಡ ತಿಳಿದಿರುವ ವಿಷಯ ಕಂಕಳಲ್ಲಿ ಕಪ್ಪು ಕಲೆ ಆಗುವುದು. ಪ್ರತಿಯೊಬ್ಬ ಮನುಷ್ಯ ಕೂಡ ಬೆವರುತ್ತಾನೆ ಅಲ್ಲವೇ ಆದರೆ ಹೀಗೆ ನಮ್ಮ ದೇಹದಿಂದ ಬರುವ ಕೆಟ್ಟ ಅಂಶವು ಬೆವರಿನ ಮೂಲಕ ಹೊರ ಬರುತ್ತದೆ ಜೊತೆಗೆ ಇದು ಕೆಟ್ಟ ವಾಸನೆ ಕೂಡ ಇರುತ್ತದೆ. ನಮ್ಮ ದೇಹದಿಂದ ಬಂದ ಬೆವರು ಬಟ್ಟೆಯಲ್ಲಿ ಅಂಟು ಕೊಂಡು ಅದು ಸರಿಯಾಗಿ ಹೊರ ಹೋಗಲು ಆಗದೆ ಆ ಕೆಟ್ಟ ಅಂಶಗಳು ದೇಹದಲ್ಲೇ ಆಂಟಿ ಕೊಳ್ಳುವುದರಿಂದ ದೇಹದ ಚರ್ಮ ಕಪ್ಪು ಕಲೆಯನ್ನು ಉಂಟು ಮಾಡುತ್ತದೆ ಅದು ಹೆಚ್ಚಾಗಿ ಕಂಡು ಬರುವುದು ಮನುಷ್ಯನ ದೇಹದ ಕಂಕಳಲ್ಲಿ.

ಇದು ಕಂಕಳಲ್ಲಿ ಇರುವ ಕಪ್ಪು ಕಲೆಯು ಮನುಷ್ಯನ ಅಂದವನ್ನು ಕೆಡಿಸುತ್ತದೆ ಅದಕ್ಕಾಗಿ ಯಾವಾಗಲೂ ಕೂಡ ಪೂರ್ಣವಾಗಿ ಕಂಕಳು ಮುಚ್ಚಿಕೊಳ್ಳುವ ರೀತಿಯ ಬಟ್ಟೆಯನ್ನೇ ಧರಿಸಬೇಕಾಗುತ್ತದೆ ಅದಕ್ಕಾಗಿ ಕಂಕಳಲ್ಲಿ ಆಗುವ ಕಪ್ಪು ಕಲೆಯನ್ನು ಹೋಗಿಸುವ ಸುಲಭ ಮಾರ್ಗವನ್ನು ತಿಳಿದುಕೊಳ್ಳೋಣ ಬನ್ನಿ. ಕೊಬ್ಬರಿ ಎಣ್ಣೆ ಎಲ್ಲರಿಗೂ ಗೊತ್ತು ಅಲ್ಲವೇ ಇದನ್ನು ಅಡುಗೆಗೆ ಮತ್ತು ತಲೆಯ ಕೂದಲಿನ ಆರೈಕೆಗೆ ಇದನ್ನು ಬಳಸುತ್ತಾರೆ ಎಂದು ಗೊತ್ತು ಅಲ್ಲವೇ ಆದರೆ ಈ ಕೊಬ್ಬರಿ ಎಣ್ಣೆಯಿಂದ ನಮ್ಮ ದೇಹದಲ್ಲಿ ಇರುವ ಕಪ್ಪು ಕಲೆಯನ್ನು ಕೂಡ ಸುಲಭವಾಗಿ ಹೋಗಿಸಬಹುದು ಆದರೆ ಇದನ್ನು ಕಂಕಳಲ್ಲಿನ ಕಪ್ಪು ಕಲೆಯನ್ನು ಹೋಗಿಸುವುದು ಹೇಗೆ ಎಂದು ನೋಡೋಣ

ಒಂದು ಚಮಚ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ವೈಟ್ ಟೂತ್ ಪೇಸ್ಟ್ ಅರ್ಧ ಚಮಚ ಅಡುಗೆ ಉಪ್ಪು ಇವೆಲ್ಲವನ್ನು ಒಂದು ಬೌಲ್ ಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು ನಂತರ ಇದನ್ನು ಕಪ್ಪು ಕಲೆಗಳ ಜಾಗಕ್ಕೆ ಹಚ್ಚಿ ನಂತರ ಅರ್ಧ ಹೋಳು ನಿಂಬೆ ಹಣ್ಣನ್ನು ತೆಗೆದುಕೊಂಡು ಅದರ ಮೇಲೆ ನಿಧಾನವಾಗಿ ಮಸಾಜ್ ಮಾಡಬೇಕು ನಂತರ ಹದಿನೈದು ನಿಮಿಷ ಬಿಟ್ಟು ತೊಳೆಯಬೇಕು ಹೀಗೆ ವಾರಕ್ಕೆ ಎರಡರಿಂದ ಮೂರು ಬಾರಿ ಮಾಡುತ್ತ ಬಂದರೆ ಕಪ್ಪು ಕಲೆ ಬೇಗ ಹೋಗುತ್ತದೆ.

ಒಂದು ಚಮಚ ಕಿತ್ತಳೆ ಹಣ್ಣಿನ ರಸವನ್ನು ತೆಗೆದುಕೊಂಡು ಅದಕ್ಕೆ ಎರಡರಿಂದ ಮೂರು ಹನಿ ನಿಂಬೆ ಹಣ್ಣಿನ ರಸವನ್ನು ಹಾಗೂ ಒಂದು ಚಮಚ ಗುಲಾಬಿ ರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಅದನ್ನು ಕಂಕಳಲ್ಲಿನ ಕಪ್ಪು ಕಲೆಗಳಿಗೆ ಹಚ್ಚಿದರೆ ಕಪ್ಪು ಕಲೆ ಹೋಗುತ್ತದೆ. ಒಂದು ಹಸಿ ಅಲುಗೆಡ್ಡೆಯನ್ನು ತೆಗೆದುಕೊಂಡು ಅದರ ಮೇಲಿನ ಸಿಪ್ಪೆಯನ್ನು ತೆಗೆದು ಕಂಕಳಲ್ಲಿ ಆಗುವ ಕಪ್ಪು ಕಲೆಯ ಮೇಲೆ ನಿಧಾನವಾಗಿ ಮಸಾಜ್ ಮಾಡುತ್ತ ಇದ್ದರೆ ಕಪ್ಪು ಕಲೆ ಹೋಗುತ್ತದೆ.

ಆಲಿವ್ ಜೆಲ್ ಅನ್ನು ತೆಗೆದುಕೊಂಡು ಅದನ್ನು ಕಂಕಳಲ್ಲಿನ ಕಪ್ಪು ಕಲೆಗೆ ಹಾಕಿ ಸ್ವಲ್ಪ ಸಮಯ ಬಿಟ್ಟು ಅದನ್ನು ಚೆನ್ನಾಗಿ ಮಸಾಜ್ ಮಾಡಿ ನಂತರ ತಣ್ಣೀರಿನಿಂದ ತೊಳೆದರೆ ಕಪ್ಪು ಕಲೆ ಹೋಗುತ್ತದೆ. ಬಾಳೆಹಣ್ಣನ್ನು ತೆಗೆದುಕೊಂಡು ಅದರ ಸಿಪ್ಪೆಯನ್ನು ಸುಳಿದುಕೊಂಡು ಅದರ ಸಿಪ್ಪಿಯಿಂದ ಕಂಕಳಲ್ಲಿನ ಕಪ್ಪು ಕಲೆಯನ್ನು ಮಸಾಜ್ ಮಾಡಿದರೆ ಕಪ್ಪು ಕಲೆ ಹೋಗುತ್ತದೆ. ನೋಡಿದರಲ್ಲ ಕಂಕಳಲ್ಲಿನ ಕಪ್ಪು ಕಲೆಯನ್ನು ಸುಲಭವಾಗಿ ಹೇಗೆ ಹೋಗಿಸಬಹುದು ಎಂದು ಹಾಗಾಗಿ ಈ ಮೇಲಿನ ಯಾವುದಾದರೂ ಒಂದು ಬಳಸಿ ನಿಮ್ಮ ಕಂಕಳಲ್ಲಿನ ಕಪ್ಪು ಕಲೆಯನ್ನು ನಿವಾರಣೆ ಮಾಡಿಕೊಂಡು ಅಂದವಾಗಿ ಕಾಣಬಹುದು.

Comments are closed.