ಕರಾವಳಿ

ಉಡುಪಿಯಲ್ಲಿ ಮನೆಕಳ್ಳತನ: ಇಬ್ಬರ ಬಂಧನ, 1,69,800 ಮೌಲ್ಯದ ಸೊತ್ತು ವಶ

Pinterest LinkedIn Tumblr

ಉಡುಪಿ: ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯನ ಇಂದಿರಾನಗರದ ಶಿವಳ್ಳಿ ಎಂಬವರ ಮನೆಯಲ್ಲಿ ಜು.16-17ರ ನಡುವೆ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ಸಹಿತ ಸೊತ್ತು ಪತ್ತೆ ಮಾಡಲಾಗಿದೆ.

ಉಡುಪಿ ಬಡಗುಬೆಟ್ಟು ನಿವಾಸಿ ಮಹಮ್ಮದ್ ಫಾರೂಕ್ (19) ವರ್ಷ, ಕುಕ್ಕಿಕಟ್ಟೆ ನಿವಾಸಿ ಅಫ್ಜಲ್ (19) ಎಂಬುವವರನ್ನು ಘಟನೆ ಸಂಭವಿಸಿದ 2 ದಿನಗಳೊಳಗೇ ಬಂಧಿಸಲಾಗಿದೆ. ಬಂಧಿತರಿಂದ ಕಳವು ಮಾಡಿದ 66.850 ಗ್ರಾಂ ತೂಕದ ಚಿನ್ನಾಭರಣಗಳು, 4,800 ರೂ. ಮೌಲ್ಯದ 3 ಮೊಬೈಲ್ ಫೋನ್‌ಗಳು ಒಟ್ಟು ರೂಪಾಯಿ 1,69,800/- ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಕಾರ್ಯಾಚರಣೆಯಲ್ಲಿದ್ದವರು…
ಉಡುಪಿ ಜಿಲ್ಲೆ ಎಸ್ಪಿ ನಿಶಾ ಜೇಮ್ಸ್ ನಿರ್ದೇಶನದಲ್ಲಿ ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಡಿವೈಎಸ್ಪಿ ಜೈಶಂಕರ್ ಮಾರ್ಗದರ್ಶನದಲ್ಲಿ ಉಡುಪಿ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ ನೇತ್ರತ್ವದಲ್ಲಿ ಈ ಕಾರ್ಯಾಚರಣೆಯಲ್ಲಿ ಉಡುಪಿ ನಗರ ಠಾಣೆಯ ಪೊಲೀಸ್ ಉಪನಿರೀಕ್ಷಕ ಅನಂತಪದ್ಮನಾಭ ಕೆ.ವಿ, ಜಿಲ್ಲಾ ಪೊಲೀಸ್ ಕಛೇರಿಯ ಎ.ಎಸ್.ಐ. ಅಚ್ಚುತ, ನಗರ ಠಾಣೆಯ ಎಎಸ್‌ಐ ಗೋಪಾಲಕೃಷ್ಣ ಜೋಗಿ ಹಾಗೂ ವಿಜಯ, ಸಿಬ್ಬಂದಿಯವರಾದ ಹೆಚ್.ಸಿ ಜೀವನ್ ಕುಮಾರ್, ಲೋಕೇಶ್, ಬಾಲಕೃಷ್ಣ, ಮ.ಹೆಚ್.ಸಿ. ಮಾಲತಿ, ಪಿ.ಸಿ.ಯವರಾದ ಇಮ್ರಾನ್, ಸಂಗನ ಗೌಡ, ಸಂತೋಷ್ ರಾತೋಡ್, ಕಿರಣ್, ಚಾಲಕರುಗಳಾದ ಎಎಚ್‌ಸಿ ರವೀಂದ್ರ, ಎಪಿಸಿ ಪ್ರಸಾದ್‌ರವರುಗಳು ಇದ್ದರು.

Comments are closed.