ಕರಾವಳಿ

ಉಡುಪಿ ಜಿಲ್ಲಾದ್ಯಂತ ಉತ್ತಮ ಮಳೆ: ಮೀನುಗಾರರಿಗೆ ಎಚ್ಚರಿಕೆ!

Pinterest LinkedIn Tumblr

ಉಡುಪಿ: ಕರಾವಳಿಯಾದ್ಯಂತ ಶನಿವಾರವೂ ಉತ್ತಮ ಮಳೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಇಡೀ ದಿನ ಹಾಗೂ ರಾತ್ರಿ ವೇಳೆ ವರುಣನ ಆರ್ಭಟ ಜಾಸ್ಥಿಯಾಗಿದೆ. ಉಡುಪಿ, ಮಣಿಪಾಲ, ಕೋಟ, ಕಾಪು, ಬ್ರಹ್ಮಾವರ, ಕೊಲ್ಲೂರು, ಜಡ್ಕಲ್‌, ವಂಡ್ಸೆ, ಕಾರ್ಕಳ, ಬೈಂದೂರು ಮೊದಲಾದೆಡೆ ಉತ್ತಮ ಮಳೆಯಾಯಿತು.

ರಾಷ್ಟ್ರೀಯ ಹೆದ್ದಾರಿಯ ಅಸಮರ್ಪಕ ಕಾಮಗಾರಿ ಹಿನ್ನೆಲೆ ಕುಂದಾಪುರ ನಗರದ ವಿವಿದೆಡೆಯಲ್ಲಿ ನೀರು ನಿಂತು ಕ್ರತಕ ನೆರೆ ಸ್ರಷ್ಟಿಯಾಗಿತ್ತು. ಇನ್ನು ಕಮಲಶಿಲೆ ದೇವಸ್ಥಾನದ ಆವರಣದವರೆಗೂ ಕುಬ್ಜಾ ನದಿ ನೀರು ನುಗ್ಗಿದೆ ಎನ್ನಲಾಗಿದೆ. ಮರವಂತೆ ಕಡಲತೀರದಲ್ಲಿ ಅಲೆಗಳ ಅಬ್ಬರ ಜಾಸ್ಥಿಯಾಗಿತ್ತು.

ಮೀನುಗಾರರಿಗೆ ಎಚ್ಚರಿಕೆ
ಜು. 21ರಂದು ರಾತ್ರಿ 11.30ರ ವರೆಗೆ ಕಡಲತೀರದಲ್ಲಿ 3.5ರಿಂದ 4.3 ಮೀಟರ್‌ ಎತ್ತರದ ತೆರೆಗಳು ಏಳುವ ಸಾಧ್ಯತೆಗಳಿವೆ. ಕೇರಳ ಕಡಲ ತೀರಗಳಲ್ಲಿ ಪಶ್ಚಿಮ ದಿಕ್ಕಿನಿಂದ ತಾಸಿಗೆ 40ರಿಂದ 50 ಕಿ.ಮೀ. ವರೆಗೆ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಮೀನುಗಾರರು ಕಡಲಿಗೆ ತೆರಳಬಾರದೆಂದು ಎಂದು ಕೇಂದ್ರ ಹವಾಮಾನ ವರದಿ ತಿಳಿಸಿದೆ.

Comments are closed.