
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 21 ನೇ ಪದವು ವೆಸ್ಟ್ ವಾರ್ಡಿನ ಸಿಟಿ ಹಾಸ್ಟೆಲ್ ನ ಹತ್ತಿರ ಮಂಜಡ್ಕ-ಮುಗ್ರೋಡಿ ಶಕ್ತಿನಗರ ಬಳಿ ಏಳು ಲಕ್ಷ ರೂಪಾಯಿ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣದ ಕಾಮಗಾರಿಗೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಗುದ್ದಲಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕಾಮತ್ ಶಕ್ತಿನಗರದ ಪ್ರದೇಶ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಪ್ರದೇಶವಾಗಿದ್ದು ಇಲ್ಲಿ ಅಭಿವೃದ್ಧಿಗೆ ಅನೇಕ ಬೇಡಿಕೆಗಳನ್ನು ಅವರು ಸಲ್ಲಿಸಿದ್ದಾರೆ. ಅದನ್ನು ಆದ್ಯತೆಯ ಮೇರೆ ಹಂತಹಂತವಾಗಿ ಪೂರೈಸಲು ಬದ್ಧನಾಗಿದ್ದೇನೆ ಎಂದು ತಿಳಿಸಿದರು. ಶಾಸಕರೊಂದಿಗೆ ಬಿಜೆಪಿ ಮುಖಂಡರಾದ ರಮೇಶ್ ಕಂಡೆಟ್ಟು, ಶಕಿಲಾ ಕಾವಾ, ಅಶೋಕ್ ನಾಯ್ಕ್, ತಾರಾನಾಥ, ಶ್ರೀನಿವಾಸ್, ಬಾಬು ಪೊಲೀಸ್, ಮುಗ್ರೋಡಿ ಯೋಗೀಶ್, ಹರೀಶ್ ಶೆಟ್ಟಿ ಮತ್ತು ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.
Comments are closed.